Home / Photos
ಮೊದಲ ಸಿನಿಮಾದಲ್ಲೇ ‘ಬ್ಲಾಕ್ ಬಸ್ಟರ್’ ಹಿಟ್ ಸಾಧಿಸಿದ ಮಾಲಾಶ್ರೀ ಪುತ್ರಿ!
By Malathesha M
‘ಕಾಟೇರ’ ಬ್ಲಾಕ್ ಬಸ್ಟರ್ ಹಿಟ್ ಆಗಿದ್ದು ದೊಡ್ಡ ಅಬ್ಬರ ತೋರಿಸುತ್ತಿದೆ. ಕೆಲ ದಿನದಲ್ಲಿ ಈ ಸಿನಿಮಾ 100 ಕೋಟಿ ಕ್ಲಬ್ ಸೇರೋದು ಕೂಡ ಗ್ಯಾರಂಟಿ ಆಗುತ್ತಿದೆ. ಇದು ನಟಿ ಮಾಲಾಶ್ರೀ ಅವರ ಮಗಳ ಮೊದಲನೇ ಚಿತ್ರವಾಗಿದ್ದು, ಹೀಗೆ ದೊಡ್ಡ ಮಟ್ಟಿಗೆ ಹಿಟ್ ಆಗಿರುವುದು ಗಮನ ಸೆಳೆದಿದೆ. ಮೊದಲ ಸಿನಿಮಾದಲ್ಲೇ ಭರ್ಜರಿ ಗೆಲುವು ಸಾಧಿಸಿದ್ದಾರೆ ಮಾಲಾಶ್ರೀ ಅವರ ಪುತ್ರಿ.
1/6
Share
ನಟಿ ಮಾಲಾಶ್ರೀ ಅವರು ಕನ್ನಡ ಸಿನಿಮಾ ರಂಗದ ಕನಸಿನ ರಾಣಿಯಾಗಿ ಮೆರೆದಿದ್ದರು. ಈ ನಟಿ ಅತಿ ಚಿಕ್ಕ ವಯಸ್ಸಿಗೆ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಬಂದು ಅಬ್ಬರಿಸಿದ್ದರು. ಇದೀಗ ಅದೇ ರೀತಿ ಅವರ ಪುತ್ರಿ, ಅಂದರೆ ನಟಿ ಮಾಲಾಶ್ರೀ ಅವರ ಮಗಳು ಕೂಡ ಸೌಂಡ್ ಮಾಡೋಕೆ ಶುರು ಮಾಡಿದ್ದಾರೆ. ‘ಕಾಟೇರ’ ಮೂಲಕ ನಟಿ ಮಾಲಾಶ್ರೀ ಅವರ ಮಗಳು ಆರಾಧನಾ ರಾಮ್ ಸಿನಿ ರಂಗಕ್ಕೆ ಪ್ರವೇಶ ಮಾಡಿದ್ದಾರೆ. ಈ ವೇಳೆ ಅಮ್ಮ & ಮಗಳ ಮಧ್ಯೆ ಹೋಲಿಕೆ ಮಾಡಲಾಗ್ತಿದೆ.
2/6
Share
‘ಕಾಟೇರ’ ಬ್ಲಾಕ್ ಬಸ್ಟರ್ ಹಿಟ್ ಆಗಿದ್ದು ದೊಡ್ಡ ಅಬ್ಬರ ತೋರಿಸುತ್ತಿದೆ. ಕೆಲ ದಿನದಲ್ಲಿ ಈ ಸಿನಿಮಾ 100 ಕೋಟಿ ಕ್ಲಬ್ ಸೇರೋದು ಕೂಡ ಗ್ಯಾರಂಟಿ ಆಗುತ್ತಿದೆ. ಇದು ನಟಿ ಮಾಲಾಶ್ರೀ ಅವರ ಮಗಳ ಮೊದಲನೇ ಚಿತ್ರವಾಗಿದ್ದು, ಹೀಗೆ ದೊಡ್ಡ ಮಟ್ಟಿಗೆ ಹಿಟ್ ಆಗಿರುವುದು ಗಮನ ಸೆಳೆದಿದೆ. ಮೊದಲ ಸಿನಿಮಾದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ ಮಾಲಾಶ್ರೀ ಅವರ ಪುತ್ರಿ.
3/6
Share
ಮಾಲಾಶ್ರೀ ಅವರ ಹಳೆಯ ಫೋಟೋ ಮತ್ತು ಈಗಿನ ಆರಾಧನಾ ರಾಮ್ ಅವರ ಫೋಟೋ ಜೊತೆಗಿಟ್ಟು ಹೋಲಿಕೆ ಮಾಡಲಾಗುತ್ತಿದೆ. ಈ ಮೂಲಕ ಅಮ್ಮ & ಮಗಳು ಎಲ್ಲೆಲ್ಲು ವೈರಲ್ ಆಗ್ತಿದ್ದಾರೆ. ರೆಟ್ರೋ ಕಾಲದಲ್ಲಿ ಕನ್ನಡ ಸಿನಿಮಾಗಳಲ್ಲಿ ಮಾಲಾಶ್ರೀ ಅವರು, ದೊಡ್ಡ ಹೆಸರು ಸಂಪಾದನೆ ಮಾಡಿದ್ದರು.
4/6
Share
ಕನ್ನಡ ಸಿನಿಮಾ ಪ್ರೇಕ್ಷಕರು ಮಾಲಾಶ್ರೀ ಅವರ ಪುತ್ರಿಯ ನಟನೆಗೆ ಫಿದಾ ಆಗಿದ್ದಾರೆ. ಹಾಗೇ ವಿಮರ್ಶಕರು ಕೂಡ ಆರಾಧನಾ ಆಕ್ಟಿಂಗ್ಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಹೀಗೆಲ್ಲಾ ಮೊದಲ ಸಿನಿಮಾದಲ್ಲೇ ಆರಾಧನಾ ಅವರು ಕಮಾಲ್ ಮಾಡಿದ್ದು, ಮುಂದೆ ಅವರ ಕೈಗೂ ಸಾಲು ಸಾಲು ಸಿನಿಮಾ ಬರುವ ನಿರೀಕ್ಷೆ ಇದೆ. ಮತ್ತೊಂದು ಕಡೆ, ಕನ್ನಡ ಅಭಿಮಾನಿಗಳು ಕೂಡ ಆರಾಧನಾ ಅವರ ನಟನೆಗೆ ಫಿದಾ ಆಗಿದ್ದಾರೆ.
5/6
Share
ಕಾಟೇರ 5ನೇ ದಿನ ಕೂಡ ಅಬ್ಬರಿಸಿದ್ದು, 9 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ಈವರೆಗೂ 86.84 ಕೋಟಿ ರೂಪಾಯಿ ಗಳಿಸಿದೆ ಕನ್ನಡಿಗರ ಕಾಟೇರ ಸಿನಿಮಾ. ಇನ್ನೇನು 100 ಕೋಟಿ ರೂ. ಕ್ಲಬ್ ಸೇರಲು ಅತ್ಯಂತ ಸಮೀಪ ಇದೆ. ಹೀಗಾಗಿ ಅಭಿಮಾನಿಗಳ ಸಂಭ್ರಮ ಕೂಡ ಡಬಲ್ ಆಗುತ್ತಿದೆ.
6/6
Share
2023ರ ಕೊನೆಯಲ್ಲಿ ರಿಲೀಸ್ ಆಗಿರುವ ಕಾಟೇರ ಸಿನಿಮಾ ಎಲ್ಲೆಲ್ಲೂ ಅಬ್ಬರಿಸುತ್ತಿದೆ. ಕರ್ನಾಟಕದಲ್ಲಿ ಮಾತ್ರವಲ್ಲದೆ ದೇಶದ ವಿವಿಧ ರಾಜ್ಯದಲ್ಲೂ ಕಾಟೇರ ಸಿನಿಮಾದ ಅಬ್ಬರ ಬಲು ಜೋರಾಗಿದೆ. ಹಾಗೇ ವಿದೇಶದಲ್ಲೂ ಇದೇ ರೀತಿ ಅಬ್ಬರಿಸಲು ಕಾಟೇರ ಸಿನಿಮಾ ಈಗ ಸಜ್ಜಾಗಿದೆ. ವಿದೇಶದಲ್ಲಿ ವಾಸವಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ರ ಅಭಿಮಾನಿಗಳಿಗೆ ಇದು ಗುಡ್ ನ್ಯೂಸ್ ಆಗಿದೆ.


Click it and Unblock the Notifications