Home / Photos
KR Puram - Byappanahalli Metro: ಲೋಕಾರ್ಪಣೆಗೆ ದಿನಗಣನೆ- ಇಲ್ಲಿದೆ ಮಾಹಿತಿ, ವಿವರ, ಅಂಕಿಅಂಶ
ಪೂರ್ವ ಬೆಂಗಳೂರನ್ನು ಪ್ರಮುಖ ಪ್ರದೇಶಗಳಿಗೆ ಸಂಪರ್ಕಿಸುವ ನಮ್ಮ ಮೆಟ್ರೋದ ನೇರಳೆ ಮಾರ್ಗವು ಬಹುತೇಕ ಸಿದ್ಧವಾಗಿದೆ. ಲೋಕಾರ್ಪಣೆಗೊಳ್ಳುವುದು ಯಾವಾಗ ತಿಳಿಯಿರಿ
1/10
Share
KR Puram - Byappanahalli Metro: ಪೂರ್ವ ಬೆಂಗಳೂರನ್ನು ಪ್ರಮುಖ ಪ್ರದೇಶಗಳಿಗೆ ಸಂಪರ್ಕಿಸುವ ನಮ್ಮ ಮೆಟ್ರೋದ ನೇರಳೆ ಮಾರ್ಗವು ಬಹುತೇಕ ಸಿದ್ಧವಾಗಿದೆ.
2/10
Share
KR Puram - Byappanahalli Metro: ಬೈಯಪ್ಪನಹಳ್ಳಿ ಮತ್ತು ಕೆಆರ್ ಪುರಂ ನಡುವಿನ ಅಭಿವೃದ್ಧಿ ಕಾಮಗಾರಿಗಳು ಸೇರಿದಂತೆ ಹಲವು ಬಹುನಿರೀಕ್ಷಿತ ಸಂಪರ್ಕವನ್ನು ತ್ವರಿತವಾಗಿ ಪೂರ್ಣಗೊಳಿಸಲು ಕೆಲ ಅಂಶಗಳು ಅಡ್ಡಿಯಾಗಿವೆ ಎಂದು ಬಿಎಂಆರ್ಸಿಎಲ್ ಹೇಳಿದೆ.
3/10
Share
KR Puram - Byappanahalli Metro: ಈ ಮಾರ್ಗವು ಜೂನ್ನಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ಪತ್ರಿಕೆಗೆ ತಿಳಿಸಿದ್ದಾರೆ.
4/10
Share
KR Puram - Byappanahalli Metro: ಬೈಯಪ್ಪನಹಳ್ಳಿ ಮತ್ತು ಕೆಆರ್ ಪುರಂ ನಿಲ್ದಾಣಗಳ ನಡುವಿನ ಸಂಪರ್ಕದ ಕಾಮಗಾರಿಯು ಇನ್ನೂ ಪುರ್ಣಗೊಂಡಿಲ್ಲ.
5/10
Share
KR Puram - Byappanahalli Metro: 2.5-ಕಿಮೀ ಸಂಪರ್ಕವು ಮುಂದಿನ ಎರಡು ತಿಂಗಳಲ್ಲಿ ಸಿದ್ಧವಾಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ತಿಳಿಸಿದೆ.
6/10
Share
KR Puram - Byappanahalli Metro: ಬೆಂಗಳೂರು ಮತ್ತು ಸೇಲಂಗೆ ಸಂಪರ್ಕ ಕಲ್ಪಿಸುವ ರೈಲ್ವೇ ಲೈನ್ ಕ್ರಾಸಿಂಗ್ ಇದೆ. ಈ ಬಗ್ಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಕೆಆರ್ ಪುರಂನಲ್ಲಿ ಬಸ್ ಡಿಪೋ ಸುಧಾರಣೆ ಕಾರ್ಯಗಳು ಮತ್ತು ಇತರ ನಾಗರಿಕ ಏಜೆನ್ಸಿಗಳು ಕೆಲವು ದಟ್ಟಣೆ ಯೋಜನೆಗಳನ್ನು ಕೈಗೊಂಡಿವೆ ಎಂದು ತಿಳಿಸಿದೆ.
7/10
Share
KR Puram - Byappanahalli Metro: ಇದಾದ ನಂತರ ಬೈಯಪ್ಪನಹಳ್ಳಿ- ಕೆಆರ್ ಪುರಂ ಸಂಪರ್ಕ ಸಿದ್ಧವಾಗಲಿದೆ. ಇತ್ತೀಚೆಗೆ ತೆರೆಯಲಾದ 13-ಕಿಮೀ ವೈಟ್ಫೀಲ್ಡ್ನಿಂದ ಕೆಆರ್ ಪುರಂ ಭಾಗದ ನೇರಳೆ ಮಾರ್ಗ ಮತ್ತು ಬೈಯಪ್ಪನಹಳ್ಳಿ ಮತ್ತು ಕೆಂಗೇರಿ ನಡುವಿನ 25 ಕಿಮೀ ಉದ್ದದ ಮಾರ್ಗವು ಕಾರ್ಯನಿರ್ವಹಿಸುತ್ತಿದೆ.
8/10
Share
KR Puram - Byappanahalli Metro: ಸಿಸ್ಟಮ್ ಅನ್ನು ಪರೀಕ್ಷಿಸುವುದು, ನಂತರ ಕಮಿಷನರ್ ಆಫ್ ಮೆಟ್ರೋ ರೈಲ್ ಸೇಫ್ಟಿ ಮೂಲಕ ಪರೀಕ್ಷೆಯನ್ನು ನಡೆಸುವುದು, ಸಿಎಂಆರ್ಎಸ್ ಸೂಚಿಸುವ ಯಾವುದೇ ಬದಲಾವಣೆಗಳನ್ನು ಅನ್ವಯಿಸುವುದು ಮತ್ತು ಅದನ್ನು ಮರುಪರೀಕ್ಷೆ ಮಾಡುವುದು ಉಳಿದಿದೆ ಎಂದು ತಿಳಿಸಿದ್ದಾರೆ.
9/10
Share
KR Puram - Byappanahalli Metro: ಬಿಎಮ್ಆರ್ಸಿಎಲ್ ಮಾತ್ರ ಈ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿಲ್ಲ. ಈ ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸುತ್ತಿರುವ ಯೋಜನೆಗಳು ಹೆಚ್ಚಿವೆ. ಆದ್ದರಿಂದ, ಮಾರ್ಚ್ನಲ್ಲಿ ಉದ್ಘಾಟನೆಗೊಂಡ ವಿಸ್ತೃತ ಮಾರ್ಗದ ಉಳಿದ ಭಾಗದೊಂದಿಗೆ ಲಿಂಕ್ ಅನ್ನು ಸಿದ್ಧಪಡಿಸಲು ಸಾಧ್ಯವಾಗಲಿಲ್ಲ ಎಂದು ಬಿಎಂಆರ್ಸಿಎಲ್ ತಿಳಿಸಿದೆ.


Click it and Unblock the Notifications