Home / Photos
Jyothi Rai: ಎರಡನೇ ಮದುವೆ ಬಗ್ಗೆ ಕೊನೆಗೂ ಮೌನ ಮುರಿದ ನಟಿ ಜ್ಯೋತಿ ರೈ
By Mamatha M
ಕನ್ನಡ, ತೆಲುಗು ಧಾರಾವಾಹಿಗಳ ಜೊತೆ ಜೊತೆಗೆ ವೆಬ್ ಸೀರಿಸ್ ಹಾಗೂ ಸಿನಿಮಾಗಳಲ್ಲಿ ನಟಿಸುತ್ತಿರುವ ಕನ್ನಡತಿ ಜ್ಯೋತಿ ರೈ ಸಕತ್ ಹಾಟ್ ಆಗಿದ್ದಾರೆ. ಎರಡನೇ ಮದುವೆ, ಲವ್ ಸ್ಟೋರಿಗಳಿಂದ ಸುದ್ದಿಯಲ್ಲಿದ್ದ ಅವರು, ನಿರ್ದೇಶಕ ಸುಕು ಪೂರ್ವಜ್ ಜೊತೆ ಮದುವೆಯಾಗಿರುವ ಬಗ್ಗೆ ಮೌನ ಮುರಿದಿದ್ದಾರೆ.
1/8
Photo Credit: instagram.com/@ Jyothi rai
Share
ಇಷ್ಟು ದಿನ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಇದ್ದ ವದಂತಿಗಳಿಗೆ ಏನೂ ಮಾತಾಡದೇ ತಮ್ಮ ಪಾಡಿಗೆ ತಾವಿದ್ದ ನಟಿ, ಈಗ ತಮ್ಮ ಎರಡನೇ ಮದುವೆಯನ್ನು ಖಚಿತ ಪಡಿಸಿದ್ದಾರೆ. ತೆಲುಗು ನಿರ್ದೇಶಕ ಸುಕು ಪೂರ್ವಜ್ ಜೊತೆ ಕೆಲ ವರ್ಷಗಳಿಂದ ರಿಲೇಷನ್ಶಿಪ್ನಲ್ಲಿ ಇದ್ದ ಅವರು, ತಮ್ಮ ಮದುವೆ ಬಗ್ಗೆ ಮೊದಲ ಬಾರಿಗೆ ತಿಳಿಸಿದ್ದಾರೆ.
2/8
Photo Credit: instagram.com/@ Jyothi rai
Share
ಈಗ ತಮ್ಮ ಎರಡನೇ ಪತಿ ಸುಕು ಪೂರ್ವಜ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಜ್ಯೋತಿ ರೈ ಇನ್ಸ್ಟಾಗ್ರಾಮ್ ಸ್ಟೋರಿ ಪೋಸ್ಟ್ ಮಾಡಿದ್ದು, ಅವರನ್ನು ಗಂಡ ಎಂದು ಹೇಳಿದ್ದಾರೆ. "ನಾವಿಬ್ಬರು ಭೇಟಿಯಾಗಿ ಒಂದು ವರ್ಷವಾಗಿದೆ. ನನ್ನ ಇಡೀ ಜೀವನವೇ ಬದಲಾಗಿದೆ. ನಿನ್ನ ಪ್ರೀತಿ, ಅಪ್ಪುಗೆ, ಮುತ್ತು, ಬೆಂಬಲ, ಪ್ರೋತ್ಸಾಹ, ನಿನ್ನ ಪಾಸಿಟಿವ್ ಥಾಟ್ಸ್ ಹೀಗೆ ಎಲ್ಲದಕ್ಕೂ ಧನ್ಯವಾದಗಳು. ನಿನ್ನನ್ನು ನನ್ನ ಪತಿಯಾಗಿ ಪಡೆದಿದ್ದು ನನ್ನ ಪುಣ್ಯ" ಎಂದಿದ್ದಾರೆ.
3/8
Photo Credit: instagram.com/@ Jyothi rai
Share
ನಟಿ ಜ್ಯೋತಿ ರೈ ತಮ್ಮ 20ನೇ ವಯಸ್ಸಿನಲ್ಲೇ ಪದ್ಮನಾಭ್ ಎಂಬುವವರ ಜೊತೆ ಮದುವೆಯಾಗಿದ್ದರು. ಕೆಲ ಭಿನ್ನಾಭಿಪ್ರಾಯಗಳಿಂದ ಇಬ್ಬರೂ ದೂರಾಗಿದ್ದರು. ಇವರಿಗೆ 11 ವರ್ಷದ ಮಗ ಇದ್ದಾನೆ. ದಾಂಪತ್ಯ, ತಾಯ್ತನದ ಬಳಿಕವೂ ಕೂಡ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದರು. ತೆಲುಗು ಸಿರೀಯಲ್ಗಳಿಗೆ ಹೋದ ಬಳಿಕ ಜ್ಯೋತಿ ರೈ ಮತ್ತು ಸುಕು ಪೂರ್ವಜ್ ಪರಿಚಯವಾದರು.
4/8
Photo Credit: instagram.com/@ Jyothi rai
Share
'ಜೋಗುಳ', 'ಕಿನ್ನರಿ', 'ಗೆಜ್ಜೆ ಪೂಜೆ', 'ಮೂರುಗಂಟು', 'ಲವಲವಿಕೆ', 'ಅನುರಾಗ ಸಂಗಮ', 'ಕನ್ಯಾದಾನ', 'ಪ್ರೇರಣ', 'ಕಸ್ತೂರಿ ನಿವಾಸ' ಸೇರಿದಂತೆ ಕನ್ನಡ ಹಲವು ಧಾರಾವಾಹಿಗಳಲ್ಲಿ ಜ್ಯೋತಿ ರೈ ನಟಿಸಿದ್ದಾರೆ. ಬಂದೇ ಬರುತಾವ ಕಾಲ, ಕಿನ್ನರಿ, ಕಸ್ತೂರಿ ನಿವಾಸ, ಜೋಗುಳ, ತೆಲುಗಿನಲ್ಲಿ 'ಗುಪ್ಪೆಡಂತ ಮನಸು' ಸೇರಿ ಬಹುತೇಕ ಧಾರಾವಾಹಿಗಳಲ್ಲಿ ಜ್ಯೋತಿ ರೈ ಸೀರೆಯಲ್ಲಿ ಕಂಗೊಳಿಸಿದ್ದು ಹೆಚ್ಚು. ಇವರನ್ನು ಜಯಶ್ರೀ ರೈ ಎಂದೂ ಗುರುತಿಸಲಾಗುತ್ತದೆ.
5/8
Photo Credit: instagram.com/@ Jyothi rai
Share
ಮಡಿಕೇರಿ ಮೂಲಕ ನಟಿ ಜ್ಯೋತಿ ರೈ ಕನ್ನಡ ಕಿರುತೆರೆಯಲ್ಲಿ ತಾಯಿ, ಅಕ್ಕ, ತಂಗಿ ಪಾತ್ರಗಳ ಮೂಲಕ ಮಿಂಚಿದ್ದವರು. ಇಲ್ಲಿಂದ ತೆಲುಗು, ತಮಿಳು ಕಿರುತೆರೆಯತ್ತ ಮುಖ ಮಾಡಿದ್ದರು. ತೆಲುಗಿನಲ್ಲಿ 'ಗುಪ್ಪೆಡಂತ ಮನಸು' ಧಾರಾವಾಹಿ ಇವರಿಗೆ ದೊಡ್ಡ ಬ್ರೇಕ್ ನೀಡಿತ್ತು. ತೆಲುಗಿನಲ್ಲಿ 15ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಜ್ಯೋತಿ ರೈ ನಟಿಸಿದ್ದಾರೆ.
6/8
Photo Credit: instagram.com/@ Jyothi rai
Share
ನಿರ್ದೇಶಕ ಸುಕು ಪೂರ್ವಜ್ (ವೆಂಕಟ್ ಸುರೇಶ್ ಕುಮಾರ್) ಹೆಸರನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಬಳಸಿಕೊಂಡಿದ್ದ ಅವರು, ಇಬ್ಬರ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರು. ಆದರೂ, ಮದುವೆಯಾಗಿದ್ದಾರಾ ಅಥವಾ ಲಿವ್ ಇನ್ನಲ್ಲಿ ಇದ್ದಾರಾ ಎಂದು ಹೇಳಿಕೊಂಡಿರಲಿಲ್ಲ. ಈಗ ಅಧಿಕೃತವಾಗಿ ತಮ್ಮ ಎರಡನೇ ಮದುವೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
7/8
Photo Credit: instagram.com/@ Jyothi rai
Share
ಜ್ಯೋತಿ ರೈ ಸೋಶಿಯಲ್ ಮೀಡಿಯಾದಲ್ಲಿ ಸಕತ್ ಆಕ್ಟಿವ್ ಆಗಿದ್ದು, ಸಿಕ್ಕಾಪಟ್ಟೆ ಹಾಟ್ ಫೋಟೊ, ವಿಡಿಯೋ ಶೇರ್ ಮಾಡುತ್ತಾರೆ. ಜ್ಯೋತಿ ರೈ ಸದ್ಯ 'ಪ್ರೆಟಿ ಗರ್ಲ್' ಎನ್ನುವ ವೆಬ್ ಸೀರಿಸ್ನಲ್ಲಿ ನಟಿಸುತ್ತಿದ್ದಾರೆ. ಈಗ ನಟಿ ಜ್ಯೋತಿ ರೈ ಸಕತ್ ಮಾಡರ್ನ್ ಡ್ರೆಸ್ನಲ್ಲೂ ಕಾಣಿಸಿಕೊಳ್ಳುತ್ತಿದ್ದು, ಪಡ್ಡೆ ಹುಡುಗರ ಮನ ಕದಿಯುತ್ತಿದ್ದಾರೆ.
8/8
Photo Credit: instagram.com/@ Jyothi rai
Share
ಕನ್ನಡ, ತೆಲುಗು ಧಾರಾವಾಹಿಗಳಲ್ಲಿ ಮಿಂಚಿದ್ದ ನಟಿ ಜ್ಯೋತಿ ರೈ ಸದ್ಯ ವೆಬ್ ಸೀರಿಸ್ ಹಾಗೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹೊಸ ಹೊಸ ಫೋಟೋಶೂಟ್ಗಳಿಂದ ಗಮನ ಸೆಳೆಯುತ್ತಿದ್ದಾರೆ. ಹೊಸ ಫೋಟೋಗಳಲ್ಲಿ ಯಾವ ಹಿರೋಯಿನ್ಗೂ ಕಮ್ಮಿಯಿಲ್ಲದಂತೆ ಮಿಂಚುತ್ತಿದ್ದಾರೆ.


Click it and Unblock the Notifications