Home / Photos
Kaustubha Mani: 'ನನ್ನರಸಿ ರಾಧೆ'ಯ ನಟಿ ಕೌಸ್ತುಭ ಮಣಿಯ ಮುದ್ದಾದ ಮದುವೆ ಫೋಟೋಸ್
By Mamatha M
ಕನ್ನಡ ಧಾರಾವಾಹಿ 'ನನ್ನರಸಿ ರಾಧೆ'ಯ ನಟಿ ಕೌಸ್ತುಭ ಮಣಿ ಅವರ ಮದುವೆ ಫೋಟೋಗಳು
1/6
Photo Credit: Kaustubha Mani@instagram
Share
ಕಿರುತೆರೆ ನಟಿ ಕೌಸ್ತುಭ ಮಣಿ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಸಾಂಪ್ರದಾಯಕವಾಗಿ ನೆಚ್ಚಿನ ಹುಡುಗನನ್ನು ವರಿಸಿದ್ದಾರೆ. ಇಬ್ಬರ ಮದುವೆ ಏಪ್ರಿಲ್ 26 ರಂದು ಬೆಂಗಳೂರಿನಲ್ಲಿ ನಡೆದಿದೆ.
2/6
Photo Credit: Kaustubha Mani@instagram
Share
ನನ್ನರಸಿ ರಾಧೆ ಧಾರವಾಹಿಯ ನಟಿ ಕೌಸ್ತುಭ ಮಣಿ ಸಿದ್ಧಾಂತ್ ಸತೀಶ್ ಎಂಬುವವರನ್ನು ವರಿಸಿದ್ದಾರೆ. ನಟಿ ಕೌಸ್ತುಭ ನಟಿ ಮದುವೆ ಫೋಟೋ ವೈರಲ್ ಆಗಿವೆ. ಕೆಂಪು ಬಣ್ಣದ ಸೀರೆಯಲ್ಲಿ ನಟಿ ಮಿಂಚಿದ್ದಾರೆ. ವರ ಸಿದ್ಧಾಂತ್ ಸತೀಶ್ ಪಂಚೆ ಮತ್ತು ಶಲ್ಯ ಧರಿಸಿ ಪೋಟೋಗಳಿಗೆ ಫೋಸ್ ಕೊಟ್ಟಿದ್ದಾರೆ.
3/6
Photo Credit: Kaustubha Mani@instagram
Share
ನಟಿ ಕೌಸ್ತುಭ ಮಣಿ ಮನೆಯವರು ಒಪ್ಪಿದ ಹುಡುಗನನ್ನು ಮದುವೆಯಾಗಿದ್ದಾರೆ. ಇದು ಅರೇಂಜ್ ಮ್ಯಾರೇಜ್. ಸಿದ್ಧಾಂತ್ ಸತೀಶ್ ಅವರು ಸಾಪ್ಟ್ವೇರ್ ಡೆವಲಪರ್ ಆಗಿ ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಇವರ ಎಂಗೇಜ್ಮೆಂಟ್ ಅದ್ಧೂರಿಯಾಗಿ ನಡೆದಿತ್ತು.
4/6
Photo Credit: Kaustubha Mani@instagram
Share
ಸಂಪ್ರದಾಯ ಬದ್ಧವಾಗಿ ನಟಿ ಕೌಸ್ತುಭ ಮಣಿ ಹಾಗೂ ಸಿದ್ಧಾಂತ್ ಸತೀಶ್ ಮದುವೆ ನಡೆದಿದೆ. ಸಾಂಪ್ರದಾಯಿಕ ಬಟ್ಟೆಯಲ್ಲಿ 'ನನ್ನರಸಿ ರಾಧೆ' ಮಿಂಚುತ್ತಿದ್ದರು. ಮದುವೆಗೆ ಕೆಲವರನ್ನಷ್ಟೇ ಆಹ್ವಾನಿಸಲಾಗಿತ್ತು. ಕುಟುಂಬಸ್ಥರು, ಆಪ್ತರಷ್ಟೇ ಭಾಗಿಯಾಗಿದ್ದರು.
5/6
Photo Credit: Kaustubha Mani@instagram
Share
ಇನ್ನು, ಕೌಸ್ತುಭ ಮಣಿ ಅವರ ಬೋಲ್ಡ್ ಪ್ರೀವೆಡ್ಡಿಂಗ್ ಶೂಟ್ ಫೋಟೋಸ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಪುಟ್ಟ ವಿಮಾನದಲ್ಲಿ ರೊಮ್ಯಾಂಟಿಕ್ ಆಗಿ ಫೋಟೋಶೂಟ್ ಮಾಡಿಸಿದ್ದರು. ಲಿಪ್ ಲಾಕ್ ಮಾಡುವ ಮೂಲಕ ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ.
6/6
Photo Credit: Kaustubha Mani@instagram
Share
ನಟಿ ಕೌಸ್ತುಭ ಮಣಿ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ನನ್ನರಸಿ ರಾಧೆ, ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ಗೌರಿ ಶಂಕರ ಸೀರಿಯಲ್ನಲ್ಲಿ ನಟಿಸಿದ್ದಾರೆ. ಗೌರಿ ಶಂಕರ ಧಾರಾವಾಹಿಯಲ್ಲಿ ಕೆಲ ದಿನಗಳು ಇದ್ದರು. ಕಾರಣಾಂತರಗಳಿಂದ ಸಿರೀಯಲ್ನಿಂದ ಹೊರ ಬಂದಿದ್ದರು. ಇನ್ನು, ಶಿವಣ್ಣ ಆಭಿನಯದ 45 ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.


Click it and Unblock the Notifications