Home / Photos
Sanya Iyer: ಸ್ಯಾಂಡಲ್ವುಡ್ಗೆ 'ಗೌರಿ'ಯಾಗಿ ಕಾಲಿಡುತ್ತಿರುವ 'ಪುಟ್ಟಗೌರಿ'ಯ ಬೋಲ್ಡ್ ಫೋಟೋಸ್
By Mamatha M
ಪುಟ್ಟಗೌರಿ ಮದುವೆ ಧಾರಾವಾಹಿಯಿಂದ ಮನೆ ಮಾತಾಗಿದ್ದ ನಟಿ ಸಾನ್ಯಾ ಅಯ್ಯರ್, ಬಿಗ್ ಬಾಸ್ ಕನ್ನಡ ಒಟಿಟಿ ರಿಯಾಲಿಟಿ ಶೋಗೆ ಬಂದ ಮೇಲೆ ಮತ್ತಷ್ಟು ಖ್ಯಾತಿ ಗಳಿಸಿದರು
1/6
Photo Credit: Saanya Iyer@instagram
Share
ಕನ್ನಡದ ಜನಪ್ರಿಯ ಧಾರಾವಾಹಿ ಪುಟ್ಟಗೌರಿ ಮದುವೆ ಯಾರಿಗೆ ತಾನೇ ನೆನಪಿಲ್ಲ ಹೇಳಿ. ಇದೇ ಧಾರಾವಾಹಿಯ ಮುಮದುವರೆದ ಅಧ್ಯಾಯದಂತೆ ಬಮದಿದ್ದು ಮಂಗಳ ಗೌರಿ ಮದುವೆ. ಈಗ ಪುಟ್ಟಗೌರಿ ಮದುವೆ ಧಾರಾವಾಹಿಯಿಂದ ಖ್ಯಾತಿ ಪಡೆದ ಸಾನ್ಯಾ ಅಯ್ಯರ್ ಕನ್ನಡ ಸಿನಿಮಾ ಲೋಕಕ್ಕೆ ಕಾಲಿಡುತ್ತಿದ್ದಾರೆ.
2/6
Photo Credit: Saanya Iyer@instagram
Share
ನಟಿ ಸಾನ್ಯಾ ಅಯ್ಯರ್ ಬಿಗ್ ಬಾಸ್ ಕನ್ನಡ ಒಟಿಟಿ ರಿಯಾಲಿಟಿ ಶೋಗೆ ಬಂದ ಮೇಲೆ ಜನರಲ್ಲಿ ಮತ್ತಷ್ಟು ಖ್ಯಾತಿ ಗಳಿಸಿದರು. ಪುಟ್ಟ ಹುಡುಗಿ ಎಂದುಕೊಂಡಿದ್ದವರು ಸಾನ್ಯಾ ಅವರನ್ನು ನೋಡಿ ಕನ್ನಡಕ್ಕೆ ಒಳ್ಳೆ ನಟಿ ಸಿಕ್ಕರು ಎಂದುಕೊಂಡರು. ಈಗ ಅದನ್ನೇ ನಿಜ ಮಾಡಲು ನಟಿ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
3/6
Photo Credit: Saanya Iyer@instagram
Share
ನಟಿ ಸಾನ್ಯಾ ಅಯ್ಯರ್ ಈಗ ಇಂದ್ರಜಿತ್ ಲಂಕೇಶ್ ನಿರ್ದೇಶನದ 'ಗೌರಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ನಟಿಯ ಜೊತೆಗೆ ಇಂದ್ರಜಿತ್ ಲಂಕೇಶ್ ಅವರ ಪುತ್ರ ಸಮರ್ಜಿತ್ ಲಂಕೇಶ್ ಕೂಡ ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ.
4/6
Photo Credit: Saanya Iyer@instagram
Share
ಗೌರಿ ಚಿತ್ರದ ಶೂಟಿಂಗ್ ಮುಕ್ತಾಯವಾಗಿದೆ. ಸದ್ಯ ಸಾನ್ಯಾ ಅಯ್ಯರ್ ಕೊಡಗಿನಲ್ಲಿ ರಜೆಯನ್ನು ಕಳೆಯುತ್ತಿದ್ದಾರೆ. ಅಲ್ಲಿನ ತಮ್ಮ ರಜೆಯ ದಿನಗಳ ಹಲವು ಫೊಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಸಕತ್ ಬೋಲ್ಡ್ ಆಗಿ ಫೋಟೋಗಳಿಗೆ ಫೋಸ್ ನೀಡಿದ್ದಾರೆ ಪುಟ್ಟಗೌರಿ.
5/6
Photo Credit: Saanya Iyer@instagram
Share
ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ಆಕ್ಟಿವ್ ಆಗಿರುವ ನಟಿ ಸಾನ್ಯಾ ಅಯ್ಯರ್, ಆಗ್ಗಾಗೆ ತಮ್ಮ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಇನ್ಸ್ಟಾಗ್ರಾಮ್ನಲ್ಲಿ 211k ಫಾಲೋವರ್ಸ್ ಇದ್ದಾರೆ. ಅವರ ಫೋಟೋಗಳಿಗೆ ಲೈಕ್, ಕಾಮೆಂಟ್ ಮಾಡಿ ತಮ್ಮ ಪ್ರೀತಿ ಹಂಚಿಕೊಳ್ಳುತ್ತಾರೆ.
6/6
Photo Credit: Saanya Iyer@instagram
Share
'ಗೌರಿ' ಚಿತ್ರದ ಶೀರ್ಷಿಕೆಯು 2017 ರಲ್ಲಿ ಕೊಲೆಯಾದ ಪತ್ರಕರ್ತೆ ಗೌರಿ ಲಂಕೇಶ್ ಅವರ ಬಗ್ಗೆಯಾ ಎಂಬ ಅನುಮಾನುಗಳನ್ನು ಮೋಡಿಸಿದೆ. ಆದರೆ ಇಂದ್ರಜಿತ್ ಈ ಬಗ್ಗೆ ಯಾವುದೇ ಸುಳಿವು ನೀಡಿಲ್ಲ. 2024 ರಲ್ಲಿ ಸಿನಿಮಾ ಚಿತ್ರಮಂದಿರಗಳಿಗೆ ಬರಲಿದ್ದು, ಆಗಲೇ ಈ ಗುಟ್ಟು ಬಹಿರಂಗವಾಗಲಿದೆ.


Click it and Unblock the Notifications