Home / Photos
Photos of Megha Shetty: ಕನ್ನಡದ ನಟಿ 'ಮೇಘಾ ಶೆಟ್ಟಿ' ಸೌಂದರ್ಯಕ್ಕೆ ಬೋಲ್ಡಾದ ಪಡ್ಡೆ ಹುಡುಗರು
ಕಿರುತೆರೆಯಿಂದ ಬೆಳ್ಳಿ ತೆರೆಗೆ ಬಂದ ಕನ್ನಡದ ನಟಿ ಮೇಘಾ ಶೆಟ್ಟಿ ಅವರು ಮತ್ತೆ ಹೊಸ ಫೋಟೋ ಶೂಟ್ ಮಾಡಿಸಿದ್ದಾರೆ. ಕಡುನೀಲಿ ಬಣ್ಣದ ಬಟ್ಟೆಯಲ್ಲಿ ಫೋಟೋಗಳಿಗೆ ಸುಂದರ ಫೋಸ್ ನೀಡಿದ್ದಾರೆ. ಈ ಫೋಟೋಗಳನ್ನು ಅವರು ಪೋಸ್ಟ್ ಮಾಡಿದ್ದು, ಅವುಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿವೆ.
1/7
Share
ಸ್ಯಾಂಡಲ್ವುಡ್ ನಟಿ, ಕ್ಯೂಟ್ ಬೆಡಗಿ ಮೇಘಾ ಶೆಟ್ಟಿ (Actress Mehga Shetty) ಅವರು ಹೊಸ ಫೋಟೋಶೂಟ್ ಮಾಡಿಸಿ ಅವುಗಳನ್ನು ಪೋಸ್ಟ್ ಮಾಡಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಕಡು ನೀಲಿ (ಡಾರ್ಕ್ ಬ್ಲೂ) ಡ್ರೆಸ್ನಲ್ಲಿ ಫೋಟೋಗಳಿಗೆ ನಟಿ ಫೋಸ್ ಕೊಟ್ಟಿದ್ದು, ಆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
2/7
Share
ಸದ್ಯ ವೈರಲ್ ಆಗುತ್ತಿರುವ ಕಡುನೀಲಿ ಬಣ್ಣದ ಧಿರಿಸಿನ ಮೇಘಾ ಶೆಟ್ಟಿ ಅವರು ಫೋಟೋ ಪೋಸ್ಟ್ ಮಾಡಿದ ಕೇವಲ 24 ಗಂಟೆಯಲ್ಲಿ 52 ಸಾವಿರಕ್ಕೂ ಅಧಿಕ ಲೈಕ್ಗಳು, ನೂರಾರು ಕಾಮೆಂಟ್ಗಳು ಬಂದಿವೆ.
3/7
Share
ನಟಿ ಮೇಘಾ ಶೆಟ್ಟಿ ಅವರ 'ಜೊತೆ ಜೊತೆಯಲಿ' ಧಾರವಾಯಿತು ಬರೊಬ್ಬರಿ ನಾಲ್ಕು ವರ್ಷ 951 ಸಂಚಿಕೆಗಳನ್ನು ಪೂರೈಸಿತ್ತು. ಅದರಲ್ಲಿ ಅವರು 'ಅನು ಸಿರಿಮನೆ' ಪಾತ್ರ ನಿರ್ವಹಿಸುವ ಮೂಲಕ ಭಾರಿ ಮೆಚ್ಚುಗೆ ಪಡೆದಿದ್ದರು. ಅದಾದ ನಂತರ 'ತ್ರಿಬಲ್ ರೈಡಿಂಗ್, ಕೈವಾ, ಲಂಡನ್ ಕೆಫೆ, ದಿಲ್ ಪಸಂದ್' ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇನ್ನೂ ಒಂದೆರಡು ಚಿತ್ರಗಳು ತೆರೆಗೆ ಬರಲು ಸಜ್ಜಾಗಿವೆ.
4/7
Share
ಸಾಮಾಜಿಕ ಜಾಲತಾಣಗಳಲ್ಲಿ ಸದಾ ಆಕ್ಟಿವ್ ಆಗಿರುವ ಮೇಘಾ ಶೆಟ್ಟಿ ಅವರು 1.2 ಮಿಲಿಯನ್ ಫಾಲೋವರ್ಸ್ ಅನ್ನು ಹೊಂದಿದ್ದಾರೆ. ಈವರೆಗೆ ಸುಮಾರು 379 ಪೋಸ್ಟ್ಗಳನ್ನು ಮಾಡಿದ್ದಾರೆ. ಅವರ ಒಂದೊಂದು ಪೋಸ್ಟ್ಗೂ ಸಾವಿರಗಟ್ಟಲೇ ಲೈಕ್ಸ್ಗಳು, ಲಕ್ಷಗಟ್ಟಲೇ ವೀವ್ಸ್ಗಳು ಬರುತ್ತವೆ.
5/7
Share
ನಟಿ ಮೇಘಾ ಶೆಟ್ಟಿ ಅವರು ನಟನೆ ಜೊತೆಗೆ ಸೌಂದರ್ಯದ ಕಡೆಗೂ ಹೆಚ್ಚಿನ ಗಮನ ಹರಿಸುತ್ತಾರೆ. ನಿತ್ಯವು ಅವರು ವರ್ಕೌಟ್ ಮಾಡುತ್ತಾರೆ. ಜಿಮ್ ನಲ್ಲಿ ಕಸರತ್ತು ಮಾಡುವ ಅವರು ವ್ಯಾಯಾಮದ ಫೋಟೊಗಳನ್ನು ಈ ಹಿಂದೆ ಶೇರ್ ಮಾಡಿದ್ದರು.
6/7
Share
ಫೇಸ್ಬುಕ್, ಎಕ್ಸ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿ ಮೇಘಾ ಶೆಟ್ಟಿ ತಮ್ಮ ಇತ್ತೀಚಿನ ಪೋಟೋಗಳನ್ನು ಶೇರ್ ಮಾಡಿದ್ದಾರೆ. ಈ ಪೋಸ್ಟ್ಗೆ ಅಭಿಮಾನಿಗಳು ಸೂಪರ್, ಹಾಟ್, ಬ್ಯೂಟಿಫುಲ್, ಮೋರ್ ಪಿಕ್ ಎಂದೆಲ್ಲ ಕಾಮೆಂಟುಗಳನ್ನು ಮಾಡಿದ್ದಾರೆ.
7/7
Share
ಕಿರುತೆರೆಯಲ್ಲಿ ಪ್ರಸಾರವಾಗಿ ಜನಮನ್ನಣೆ ಗಳಿಸಿದ್ದ 'ಜೊತೆ ಜೊತೆಯಲ್ಲಿ' ಧಾರವಾಹಿಯಿಂದ ನಟಿ ಮೇಘಾ ಶೆಟ್ಟಿ ಅವರು ಚಿರಪರಿಚಿತವಾದವರು. ಅಲ್ಲಿಂದ ಅವರು ಕನ್ನಡ ಚಿತ್ರರಂಗದ ಕೆಲವು ನಟರ ಜತೆ ಸಿನಿಮಾ ಮಾಡಿ ಬೆಳ್ಳೆ ತೆರೆಯಲ್ಲೂ ಕಮಾಲ್ ಮಾಡಿದರು. ಇತ್ತೀಚೆಗೆ ಅವರ 'ಕೈವ' ಚಿತ್ರ ತೆರೆಕಂಡು ವಿಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಪಡೆದಿತ್ತು.


Click it and Unblock the Notifications