Home / Photos
Ashika Ranganath: ತೆಲುಗಿನಲ್ಲಿ ಹವಾ ಎಬ್ಬಿಸುತ್ತಿರುವ ಕನ್ನಡದ 'ಚುಟು ಚುಟು' ನಟಿಯ 'ಮಸ್ತ್' ಫೋಟೋಸ್
ಕನ್ನಡ ನಟಿ ಆಶಿಕಾ ರಂಗನಾಥ್ ಅವರು ತೆಲುಗು, ತಮಿಳು ಸೇರಿದಂತೆ ವಿವಿಧ ಭಾಷೆಗಳ ಸಿನಿಮಾದಲ್ಲಿ ಮಿಂಚುತ್ತಿದ್ದಾರೆ. ಇದೀಗ ಅವರ ತೆಲುಗು ಸಿನಿಮಾ ನಾಸಾಮಿರಂಗ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಈ ಚಿತ್ರದಲ್ಲಿನ ಅವರ ಹಲವು ಫೋಟೊಗಳು ವೈರಲ್ ಆಗಿದ್ದು, ಫೋಟೋ ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ.
1/8
Share
ಕನ್ನಡದ ನಟಿಯಾದ 'ಆಶಿಕಾ ರಂಗನಾಥ್' (Ashika Ranganath) ಅವರು ಹಲವು ವರ್ಷಗಳಿಂದಲೂ ಕನ್ನಡ ಚಿತ್ರರಂಗದಲ್ಲಿದ್ದಾರೆ. ಅನೇಕ ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳ ಮನ ಗೆದ್ದಿದ್ದಾರೆ. ಕನ್ನಡದಿಂದ ಬೇರೆ ಭಾಷೆಗಳ ಚಿತ್ರರಂಗದಲ್ಲಿಯೂ ಬ್ಯೂಸಿಯಾದ ನಟಿಯರಲ್ಲಿ ಆಶಿಕಾ ಸಹ ಒಬ್ಬರು.
2/8
Share
ಆಶಿಕಾ ರಂಗನಾಥ್ ಅವರ 'ಅವತಾರ್ ಪುರುಷ-2, ಗತವೈಭವ' ಸೇರಿದಂತೆ ಕೆಲವು ಸಿನಿಮಾಗಳು ಚಿತ್ರೀಕರಣ ಹಂತದಲ್ಲಿದ್ದು, ಈ ವರ್ಷ ತೆರೆಗೆ ಬರುವ ನಿರೀಕ್ಷೆಗಳು ಇವೆ. ಸದ್ಯ ನಾಸಾಮಿರಂಗ ಸಿನಿಮಾ ಇದೆ ಜ.14ರಂದು ಬಿಡುಗಡೆ ಆಗುತ್ತಿದ್ದು, ಅವರ ಅಭಿಮಾನಿಗಳು ಸಿನಿಮಾ ನೋಡಲು ಕಾರತದಿಂದ ಕಾಯುತ್ತಿದ್ದಾರೆ.
3/8
Share
ಕನ್ನಡ ನಟಿ ಆಶಿಕಾ ರಂಗನಾಥ್ ಕನ್ನಡದ ತೆಲುಗು, ತಮಿಳು ಭಾಷೆಗಳ ಸಿನಿಮಾದಲ್ಲಿ ಸಕ್ರಿಯ ನಟಿಯಾಗಿ ಮಿಂಚುತ್ತಿದ್ದಾರೆ. ಇದೀಗ ಅವರ ತೆಲುಗು ಸಿನಿಮಾ 'ನಾಸಾಮಿರಂಗ' ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಈ ಚಿತ್ರದಲ್ಲಿನ ಅವರ ಹಲವು ಫೋಟೋಗಳು ವೈರಲ್ ಆಗಿದ್ದು, ಫೋಟೋ ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ.
4/8
Share
ತೆಲುಗಿನ 'ನಾಸಾಮಿರಂಗ' (Naa Saami Ranga) ಸಿನಿಮಾದಲ್ಲಿ ನಟ ನಾಗಾರ್ಜುನ್ ಜತೆ ನಟಿಸಿರುವ ಆಶಿಕಾ ರಂಗನಾಥ್ ಅವರಿಗೆ ಉತ್ತಮ ಪಾತ್ರ ಸಿಕ್ಕಿದ್ದು, ಸೀರೆಯಲ್ಲಿ ಮಿಂಚಿದ್ದಾರೆ. ಅವರ ಈ ಚಿತ್ರದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿವೆ. ಸೀರೆ, ಹೂ, ಕಾಡಿಗೆ ಹಚ್ಚಿ 'ಕನ್ನಡತಿ'ಯಾಗಿ ತೆಲುಗು ಸಿನಿಮಾದಲ್ಲಿ ಮಿಂಚಿದ್ದಾರೆ.
5/8
Share
ಕನ್ನಡದಲ್ಲಿ ನಟ ಅಜಯ್ ರಾವ್, ಗೋಲ್ಡನ್ ಸ್ಟಾರ್ ಗಣೇಶ್, ಶರಣ್, ನಟ ಸುದೀಪ್ ಸೇರಿದಂತೆ ವಿವಿಧ ಸ್ಟಾರ್ ನಟರ ಜತೆ ತೆರೆ ಹಂಚಿಕೊಂಡಿದ್ದಾರೆ. ಉತ್ತಮ ನಟನೆ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇದೀಗ ಅವರು ತೆಲಗಿನ 'ನಾಸಾರಾಮಿರಂಗ' ಸಿನಿಮಾದಲ್ಲಿ ನಟಿಸಿದ್ದಾರೆ.
6/8
Share
2016ರಲ್ಲಿ ತೆರೆಕಂಡ ಕನ್ನಡದ 'ಕ್ರೇಜಿ ಬಾಯ್' ಚಿತ್ರದ ಮೂಲಕ ಆಶಿಕಾ ರಂಗನಾಥ್ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು. ನಂತರ ಕನ್ನಡದ ''ರಾಜು ಕನ್ನಡ ಮೀಡಿಯಂ, ಮುಗುಳುನಗೆ, ತಾಯಿಗೆ ತಕ್ಕ ಮಗ, ಅವತಾರ್ ಪುರುಷ, ರಾಂಬೋ, ಕೋಟಿಗೊಬ್ಬ 3 (ಸಾಂಗ್), ಹಾಗೂ ತಮಿಳಿನ 'ಪಟ್ಟತು ಅರಸನ್', 'ಒಮಿಗೋಸ್' ಸೇರಿದಂತೆ ಹಲವು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.
7/8
Share
ತಮ್ಮ ಕ್ಯೂಟ್ ನಗುವಿನ ಮೂಲಕ, ರೀಲ್ಸ್ಗಳ ಮೂಲಕ ಅಭಿಮಾನಿಗಳ ಮುಂದೆ ಬರುತ್ತಲೇ ಇರುತ್ತಾರೆ. ಆಗಾಗ ಫೋಟೋಗಳನ್ನು ಪೋಸ್ಟ್ ಮಾಡುವ ನಟಿ ಆಶಿಕಾ ರಂಗನಾಥ್ ಅವರು ಇನ್ಸ್ಸ್ಟಾಗ್ರಾಮ್ನಲ್ಲಿ 2ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.
8/8
Share
ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಆಶಿಕಾ ರಂಗನಾಥ್ ಅವರು ತಮ್ಮ ಫೋಟೋಗಳನ್ನು ಪೋಸ್ಟ್ ಮಾಡಿದಾಗಲೆಲ್ಲ ಲಕ್ಷಾಂತರ ವೀವ್ಸ್, ಲೈಕ್ಸ್ಗಳು ಬರುತ್ತವೆ. ಈವರೆಗೆ ಅವರು 774 ಪೋಸ್ಟ್ ಹಾಕಿದ್ದಾರೆ.


Click it and Unblock the Notifications