Home / Photos
ಮಕ್ಕಳ ಜೊತೆ ಬಿಸಿಯೂಟ ಸವಿದ ಕಲಬುರಗಿ ಜಿಲ್ಲಾ ಪಂಚಾಯಿತಿ ಸಿಇಒ
By Gururaj S
ಕಲಬುರಗಿ ಜಿಲ್ಲಾ ಪಂಚಾಯತ್ ಸಿಇಒ ಭಂವಾರ್ ಸಿಂಗ್ ಮೀನಾ ವಸತಿ ಶಾಲೆಗೆ ಭೇಟಿ ನೀಡಿ ಮಧ್ಯಾಹ್ನದ ಬಿಸಿಯೂಟವನ್ನು ಮಕ್ಕಳ ಜೊತೆ ಸವಿದರು.
1/6
Share
ಕಲಬುರಗಿ ಜಿಲ್ಲಾ ಪಂಚಾಯತಿ ಸಿಇಓ ಭಂವಾರ್ ಸಿಂಗ್ ಮೀನಾ ಚಿತ್ತಾಪುರ ತಾಲೂಕಿನ ಗುಂಡಗುರ್ತಿ ಮೂರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಮಧ್ಯಾಹ್ನದ ಬಿಸಿಯೂಟ ಸೇವಿಸಿದರು. ಊಟವನ್ನು ಪರಿಶೀಲಿಸಿದರು.
2/6
Share
ಸಿಇಓ ಭಂವಾರ್ ಸಿಂಗ್ ಮೀನಾ ನರೇಗಾ ಯೋಜನೆಯಲ್ಲಿ ಪುನಶ್ಚೇತನಗೊಳಿಸಿರುವ ಪುರಾತನ ಕಲ್ಯಾಣಿ ವೀಕ್ಷಿಸಿದರು. ಬಾವಿಯಲ್ಲಿರುವ ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷಿಸಿ ಗ್ರಾಮಸ್ಥರಿಗೆ ಕುಡಿಯುವ ನೀರು ಪೂರೈಸಬೇಕು ಎಂದು ಸೂಚಿಸಿದರು.
3/6
Share
ಸಿಇಓ ಭಂವಾರ್ ಸಿಂಗ್ ಮೀನಾ ಪದವಿ ಪೂರ್ವ ಕಾಲೇಜಿನಲ್ಲಿ ಭೌತಶಾಸ್ತ್ರ ಹಾಗೂ ರಸಾಯನ ಶಾಸ್ಥ್ರ ವಿಷಯ ಬೋಧಕರ ಹುದ್ದೆ ಖಾಲಿ ಇರುವ ಕುರಿತು ವಿದ್ಯಾರ್ಥಿಗಳಿಂದ ಮಾಹಿತಿ ಪಡೆದರು.
4/6
Share
ಮಹಾಗಾಂವ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಭಂವಾರ್ ಸಿಂಗ್ ಮೀನಾ ವೈದ್ಯರಿಂದ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ, ನೀಡಲಾಗುತ್ತಿರುವ ವೈದ್ಯೋಪಚಾರ ಕುರಿತು ಮಾಹಿತಿ ಪಡೆದರು.
5/6
Share
ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಆಸ್ಪತ್ರೆಯ ಒಳ-ಹೊರ ರೋಗಿಗಳ ಸಂಖ್ಯೆ, ಹೆರಿಗೆ ಕುರಿತು ವೈದ್ಯರಿಂದ ಮಾಹಿತಿ ಪಡೆದರು. ಆಸ್ಪತ್ರೆಯಲ್ಲಿ ಅಂಬ್ಯುಲೆನ್ಸ್ ಇಲ್ಲ. 24 ಗಂಟೆ ನಿರಂತರ ವಿದ್ಯುತ್ ಸರಬರಾಜು ಅವಶ್ಯಕತೆ ಇದೆ ಎಂದು ಸಿಇಒ ಗಮನಕ್ಕೆ ತರಲಾಯಿತು.
6/6
Share
ಕಮಲಾಪುರ ತಾಲೂಕಿನ ನಾಗೂರ ಗ್ರಾಮ ಪಂಚಾಯತ ವ್ಯಾಪ್ತಿಯ ಹರಕಂಚಿ ಗ್ರಾಮದ ಶಾಲೆಯ ಆವರಣದಲ್ಲಿ ನರೇಗಾ ಯೋಜನೆಯಡಿ ನಿರ್ಮಾಣ ಮಾಡಿರುವ ಆಟದ ಮೈದಾನ, ಶೌಚಾಲಯವನ್ನು ಸಿಇಒ ವೀಕ್ಷಣೆ ಮಾಡಿದರು.


Click it and Unblock the Notifications