Home / Photos
Mohan kumar: ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಿಂಚಿದ ಶಿವರಾಜ್ಕುಮಾರ್ ನಟನೆಯ ವೇದ ಸಿನಿಮಾದ "ಜುಂಜಪ್ಪ" ಸಿಂಗರ್..
ಕನ್ನಡ ರಾಜ್ಯೋತ್ಸವ ಅಂಗವಾಗಿ ಬೆಂಗಳೂರಿನ ನಂದಿ ಸಿಟಾಡೆಲ್ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಈ ವೇಳೆ ನಟ ಶಿವರಾಜ್ಕುಮಾರ್ ನಟನೆಯ ವೇದ ಸಿನಿಮಾದ "ಜುಂಜಪ್ಪ" ಸಿಂಗರ್ ಮೋಹನ್ ಕುಮಾರ್ ಅವರು ನೆರೆದಿದ್ದ ಕಲಾವಿದರ ಜೊತೆ ಬೆರೆತು ಜಾನಪದ ಕಲೆಯ ಮಹತ್ವವನ್ನು ಸಾರಿದರು.
1/9
Share
ರಾಜ್ಯದಲ್ಲಿ ಕನ್ನಡ ಹಬ್ಬ ಎಂದರೆ ಅದು ಕನ್ನಡ ರಾಜ್ಯೋತ್ಸವ. ಈ ಕನ್ನಡ ಹಬ್ಬದ ಅಂಗವಾಗಿ ಬೆಂಗಳೂರಿನ ನಂದಿ ಸಿಟಾಡೆಲ್ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಈ ವೇಳೆ ನಟ ಶಿವರಾಜ್ಕುಮಾರ್ ನಟನೆಯ ವೇದ ಸಿನಿಮಾದ "ಜುಂಜಪ್ಪ" ಸಿಂಗರ್ ಮೋಹನ್ ಕುಮಾರ್ ಅವರು ನೆರೆದಿದ್ದ ಕಲಾವಿದರ ಜೊತೆ ಬೆರೆತು ಗಮನ ಸೆಳೆದರು.
2/9
Share
ವೇದ ಸಿನಿಮಾದ "ಜುಂಜಪ್ಪ" ಸಿಂಗರ್ ಮೋಹನ್ ಜೊತೆ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದ ಕಲಾವಿದರ ಬಳಗ.
3/9
Share
ಹುಲಿ ಕುಣಿತದ ಸ್ಪರ್ಧಾಳುಗಳಿಗೆ ಸಾಥ್ ನೀಡಿದ ಸಿಂಗರ್ ಮೋಹನ್ ಕುಮಾರ್.
4/9
Share
ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಸಕ್ತಿಯಿಂದ ವೀಕ್ಷಿಸಿದ್ದಲ್ಲದೆ, ಆ ಅದ್ಭುತ ದೃಶ್ಯಗಳನ್ನು ಫೋನ್ಗಳಲ್ಲಿ ಸೆರೆಹಿಡಿದ ಮಕ್ಕಳು.
5/9
Share
ಸಾಮಾನ್ಯ ಹಬ್ಬಗಳ ಸಂದರ್ಭದಲ್ಲಿ ಡೊಳ್ಳುಗಳನ್ನು ನಮ್ಮ ಹಿರಿಯರು ಹೆಚ್ಚಾಗಿ ಬಳಕೆ ಮಾಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಈ ಕಲೆ ಎಲ್ಲೋ ಒಂದು ಕಡೆ ಮರೆಯಾಗುತ್ತಿದ್ದು, ಇದೀಗ ಇದನ್ನು ಮತ್ತೆ ಪರಿಚಯಿಸಲು ಕನ್ನಡ ಹಬ್ಬವೇ ಬರಬೇಕಾಯಿತು. ಬೆಂಗಳೂರಿನಲ್ಲಿ ರಾಜ್ಯೋತ್ಸವ ಪ್ರಯುಕ್ತ ಯುವಕರ ಗುಂಪೊಂದು ಡೊಳ್ಳು ಬಾರಿಸಿ, ಈ ಕಲೆಯ ಮಹತ್ವವನ್ನು ಸಾರುವ ಕೆಲಸವನ್ನು ಮಾಡಿತು.
6/9
Share
ರಾಜ್ಯೋತ್ಸವ ಅಂಗವಾಗಿ ಬೆಂಗಳೂರಿನ ನಂದಿ ಸಿಟಾಡೆಲ್ನಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳ ಉಸ್ತುವಾರಿ ವಹಿಸಿಕೊಂಡು ಕಾರ್ಯನಿರ್ವಹಿಸಿದ ವೇದ ಸಿನಿಮಾದ "ಜುಂಜಪ್ಪ" ಸಿಂಗರ್ ಮೋಹನ್ ಕುಮಾರ್.
7/9
Share
ಡೊಳ್ಳು ಸದ್ದಿಗೆ ಕುಳಿದು ಕುಪ್ಪಳಿಸಿದ ಪುಟ್ಟ.. ಪುಟ್ಟ ಬಾಲಕರ ಗುಂಪು.
8/9
Share
ನೋಡುಗರ ಗಮನ ಸೆಳೆದ ಹುಲಿ ಕುಣಿತ ಸ್ಪರ್ಧೆ.
9/9
Share
ಹಲವು ಭಾಗಗಳಿಂದ ಬಂದಿದ್ದ ಕಲಾವಿದರ ಜೊತೆ ಬೆರೆತು ಕನ್ನಡ ಹಬ್ಬವನ್ನು ಸಂಭ್ರಮಿಸಿದ ಸಿಂಗರ್ ಮೋಹನ್ ಕುಮಾರ್.


Click it and Unblock the Notifications