Home / Photos
Agricultural: ಭಾರತದೊಡನೆ ಕೃಷಿ ಯಂತ್ರೋಪಕರಣಗಳ ವ್ಯಾಪಾರಕ್ಕೆ ಮುಂದಾದ ಇಟಲಿ
ಬೆಂಗಳೂರಿನಲ್ಲಿ ಗುರುವಾರ ನಡೆದ ಕೃಷಿ ಯಂತ್ರೋಪಕರಣ ವಸ್ತು ಪ್ರದರ್ಶನದಲ್ಲಿ ಇಟಲಿಯ ಮುಖ್ಯಸ್ಥರು ಪಾಲ್ಗೊಂಡಿದ್ದರು. ಭಾರತದೊಂದಿಗೆ ಕೃಷಿ ಯಂತ್ರೋಪಕರಣ ವ್ಯಾಪಾರ ಮಾಡಲು ಇಟಲಿ ಮನಸ್ಸು ಮಾಡಿದೆ. ಮುಂದಿನ ದಿನಗಳಲ್ಲಿ ಭಾರತದಲ್ಲಿ ಯಂತ್ರೋಪಕರಣಗಳ ರಫ್ತು ಹೆಚ್ಚಾಗಲಿದೆ.
1/6
Share
ಭಾರತದೊಡನೆ ಇಟಲಿ ದೇಶವು ಕೃಷಿ ಯಂತ್ರೋಪಕರಣ ವ್ಯಾಪಾರ ವಹೀವಾಟು ನಡೆಸಲು ಮುಂದಾಗಿದೆ. ಮುಂದಿನ ದಿನಗಳಲ್ಲಿ ಇಟಲಿ ಮತ್ತು ಭಾರತದ ನಡುವೆ ಉತ್ತಮ ವ್ಯಾಪಾರ ಸಂಬಂಧ ಹೊಂದಲಿದೆ. ಕೃಷಿ ಯಂತ್ರೋಪಕರಣಗಳ ಮೇಲೆ ಭಾರತ ನಿರ್ದಿಷ್ಟ ಗಮನ ಹರಿಸಿದೆ.
2/6
Share
ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿರುವ ಇಟಲಿಯ ಕಾನ್ಸುಲೇಟ್ ಜನರಲ್ನ ಕಾನ್ಸುಲ್ ಜನರಲ್ ವತಿಯಿಂದ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (GKVK) ಕ್ಯಾಂಪಸ್ನಲ್ಲಿ ಕೃಷಿ ಯಂತ್ರೋಪಕರಣಗಳು ಮತ್ತು ಸಲಕರಣೆಗಳ ಪ್ರದರ್ಶನ ಗುರುವಾರ ನಡೆಯಿತು.
3/6
Share
ಇಟಲಿ ಮತ್ತು ಭಾರತದ ನಡುವಿನ ಕೃಷಿ ಉಪಕರಣಗಳ ವ್ಯಾಪಾರದ ಸಮತೋಲನವು ಇದೀಗ ಹೆಚ್ಚಾಗಲಿದೆ. ಕೃಷಿ ಯಂತ್ರೋಪಕರಣಗಳು ವ್ಯಾಪಾರವು ಎರಡ ದೇಶಗಳ ವ್ಯಾಪಾರ ಸಂಬಂಧ ಪ್ರಮುಖ ಅಂಶವಾಗಿದೆ ಎಂದು ಇಟಲಿಯ ಕಾನ್ಸುಲೇಟ್ ಜನರಲ್ ಅಲ್ಫೊನ್ಸೊ ತ್ಯಾಗ್ಲಿಯಾಫೆರಿ ಹೇಳಿದರು.
4/6
Share
ಬ್ಯಾಕ್-ಟು-ಬ್ಯಾಕ್ ವ್ಯಾಪಾರದ ಗುರಿ ಹೊಂದಿದ್ದೇವೆ. ಇದರ ಭಾಗವಾಗಿ ವ್ಯಾಪಾರ ವಿಸ್ತರಿಸಲಾಗಿದೆ. ಎರಡು ರಾಷ್ಟ್ರಗಳ ಪ್ರಧಾನ ಮಂತ್ರಿಗಳು ಮತ್ತು ಭಾರತದಲ್ಲಿ ತನ್ನ ಅಸ್ತಿತ್ವವನ್ನು ಹೆಚ್ಚಿಸಲು ಇಟಲಿಯ ಉತ್ಸುಕವಾಗಿದೆ. ಆರು ತಿಂಗಳ ಮೊದಲು ಬೆಂಗಳೂರಿನಲ್ಲಿ ಹೊಸ ರಾಜತಾಂತ್ರಿಕ ಹುದ್ದೆಯ ಕಾರ್ಯತಂತ್ರದ ಪ್ರಾರಂಭವು ದಕ್ಷಿಣ ಭಾರತದಲ್ಲಿ ಇಟಲಿಯ ನೆಲೆಯನ್ನು ಬಲಪಡಿಸುವ ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ತ್ಯಾಗ್ಲಿಯಾಫೆರಿ ಅಭಿಪ್ರಾಯಪಟ್ಟರು.
5/6
Share
ಕೃಷಿ ಯಂತ್ರೋಪಕರಣಗಳ ರಫ್ತು ಏರಿಕೆ ಆಗಲಿದೆ. ದಕ್ಷಿಣ ಭಾರತದಲ್ಲಿ ಪ್ರಚಲಿತದಲ್ಲಿರುವ ವಿಶೇಷ ಬೆಳೆಗಳಿಗೆ ಇಟಾಲಿಯನ್ ಯಂತ್ರಗಳ ಅನನ್ಯವಾಗಿ ಹೊಂದಾಣಿಕೆ ಆಗಲಿವೆ. ಯಂತ್ರೋಪಕರಣಗಳ ಆರಂಭಿಕ ವೆಚ್ಚಗಳ ಹೊರತಾಗಿಯೂ ಇವು ರೈತರಿಗೆ ದೀರ್ಘಾವಧಿಯ ಆರ್ಥಿಕ ಪ್ರಯೋಜನ ನೀಡಲಿವೆ ಎಂದು ಅವರು ತಿಳಿಸಿದರು.
6/6
Share
FICCI ಕರ್ನಾಟಕದ ಅಧ್ಯಕ್ಷರಾದ ಉಲ್ಲಾಸ್ ಕಾಮತ್ ಅವರು ಭಾರತದ ಜಿಡಿಪಿ ಮತ್ತು ಉದ್ಯೋಗಿಗಳಿಗೆ ಕೃಷಿಯ ಮಹತ್ವದ ಕೊಡುಗೆ ಕುರಿತು ವಿವರಿಸಿದರು. ಯಾಂತ್ರೀಕೃತಗೊಂಡ ಮತ್ತು ಸುಧಾರಿತ ವಿದ್ಯುತ್ ಲಭ್ಯತೆಯೊಂದಿಗೆ ಕೃಷಿ ಬೆಳವಣಿಗೆ ಹೆಚ್ಚಾಗಿದೆ. ಕೃಷಿ ಜಿಡಿಪಿಯ 17.2 ಪ್ರತಿಶತ ಇದ್ದು, ಶೇಕಡಾ 46 ಪ್ರತಿಶತದಷ್ಟು ಉದ್ಯೋಗಿಗಳು ಈ ಕ್ಷೇತ್ರದಲ್ಲಿ ತೊಡಗಿದ್ದಾರೆ ಎಂದು ಹೇಳಿದರು.


Click it and Unblock the Notifications