Home / Photos
1 ವರ್ಷ ಮುಗಿಸಿದ ಇಸ್ರೇಲ್ & ಗಾಜಾ ಯುದ್ಧ ನಿಲ್ಲುವುದು ಯಾವಾಗ?
By Malathesha M
2023ರ ಅಕ್ಟೋಬರ್ 7 ರಂದು ಶುರುವಾಗಿದ್ದ ಇಸ್ರೇಲ್ & ಹಮಾಸ್ ನಡುವಿನ ಯುದ್ಧದಲ್ಲಿ ಈಗಾಗಲೇ ಸಾವಿರ ಸಾವಿರ ಜನರ ಜೀವ ಬಲಿಯಾಗಿದೆ. ಗಾಜಾದ ಭಾಗಶಃ ಕಟ್ಟಡಗಳು ಪೀಸ್ ಪೀಸ್ ಆಗಿವೆ.
1/6
Share
ಮಧ್ಯಪ್ರಾಚ್ಯ ಭಾಗದಲ್ಲಿ ಯುದ್ಧಗಳು ಜೋರಾಗಿವೆ. ಅದರಲ್ಲೂ ಇಸ್ರೇಲ್ ತನ್ನ ಶತ್ರು ಪಡೆಗಳ ವಿರುದ್ಧ ಘೋರ ಕಾಳಗ ನಡೆಸುತ್ತಿದೆ. ಇಸ್ರೇಲ್ ಇದೀಗ ಗಾಜಾ ಪಟ್ಟಿ ಭಾಗದಲ್ಲಿನ ತನ್ನ ಕಾರ್ಯಾಚರಣೆಗೆ ಮತ್ತಷ್ಟು ವೇಗ ನೀಡಲು ಮುಂದಾಗಿದೆ.
2/6
Share
ಈ ಬಾರಿ ಮತ್ತೊಂದು ಮಹಾಯುದ್ಧ ನಡೆದರೆ ಜಗತ್ತು ಪೂರ್ತಿ ನಾಶವಾಗುವುದು ಪಕ್ಕಾ. ಯಾಕಂದ್ರೆ ಮನುಷ್ಯರ ಬಳಿ ಭೂಮಿಯನ್ನೇ ನಾಶ ಮಾಡಬಲ್ಲ ಬಾಂಬ್ಗಳು ಇವೆ. ಹೀಗಿದ್ದಾಗ ಗಾಜಾ ಭಾಗದಲ್ಲಿ ಘರ್ಷಣೆ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿರುವುದು ಆತಂಕ ಮೂಡಿಸಿದೆ.
3/6
Share
2023ರ ಅಕ್ಟೋಬರ್ 7 ರಂದು ಶುರುವಾಗಿದ್ದ ಇಸ್ರೇಲ್ & ಹಮಾಸ್ ನಡುವಿನ ಯುದ್ಧದಲ್ಲಿ ಈಗಾಗಲೇ ಸಾವಿರ ಸಾವಿರ ಜನರ ಜೀವ ಬಲಿಯಾಗಿದೆ. ಗಾಜಾದ ಭಾಗಶಃ ಕಟ್ಟಡಗಳು ಪೀಸ್ ಪೀಸ್ ಆಗಿವೆ. ಜನ ಜೀವ ಉಳಿಸಿಕೊಳ್ಳಲು ನೂರಾರು ಕಿ.ಮೀ. ದೂರ ಓಡಿ ಹೋಗಿದ್ದಾರೆ.
4/6
Share
ಹಮಾಸ್ ಉಗ್ರರು ಎಸಗಿದ ಕೃತ್ಯಕ್ಕೆ ಗಾಜಾಪಟ್ಟಿ ಸಾಮಾನ್ಯ ಜನರು ನಲುಗಿದ್ದು ಅಕ್ಟೋಬರ್ 7ರ ಶನಿವಾರ ಹಮಾಸ್ ಉಗ್ರರು, ಇಸ್ರೇಲ್ ವಿರುದ್ಧ 5000 ರಾಕೆಟ್ ಉಡಾಯಿಸಿದ್ದರು. ಹೀಗಾಗಿ ಘೋರ ಕಾಳಗ ಶುರುವಾಗಿದ್ದು, ಶಾಂತಿ ಮಾತುಕತೆಗಳು ಫಲ ನೀಡುತ್ತಿಲ್ಲ.
5/6
Share
ಭಾರತದ ನಿಲುವು ಯುದ್ಧದ ವಿಚಾರದಲ್ಲಿ ಗಟ್ಟಿಯಾಗಿದ್ದು, ಯಾವುದೇ ಕಾರಣಕ್ಕೆ ಈ ಜಗತ್ತಿನಲ್ಲಿ ಯುದ್ಧಗಳು ಬೇಡವೇ ಬೇಡ ಅಂತಾ ಭಾರತ ಒತ್ತಾಯ ಮಾಡುತ್ತಿದೆ. ಅಲ್ಲದೆ, ಈ ವಿಚಾರದಲ್ಲಿ ಭಾರತ ಶಾಂತಿಯ ಹಾದಿ ಪಾಲಿಸಲು ಸಲಹೆ ನೀಡುತ್ತಿದೆ. ಒಂದು ಭೂಮಿ.. ಒಂದು ಕುಟುಂಬ.. ಎಂಬ ಒಗ್ಗಟ್ಟಿನ ಸಂದೇಶ ಸಾರುತ್ತಿದೆ ಭಾರತ.
6/6
Share
ಒಟ್ನಲ್ಲಿ ಹಮಾಸ್ & ಇಸ್ರೇಲ್ ಸೇನೆ ನಡುವಿನ ಸಮರ ದಿನದಿಂದ ದಿನಕ್ಕೆ ರಕ್ತಮಯ ಆಗ್ತಿದೆ. ಒಂದು ಕಡೆ ವಿಶ್ವಸಂಸ್ಥೆ ಈ ಯುದ್ಧ ನಿಲ್ಲಿಸಲು ಪ್ರಯತ್ನ ಮುಂದುವರಿಸಿದೆ. ಅದೇ ಸಮಯಕ್ಕೆ ಪರಿಸ್ಥಿತಿ ಕೈಮೀರಿ ಹೋಗುತ್ತಿದ್ದು, ಯುದ್ಧ ನಿಲ್ಲಿಸುವ ಪ್ರಯತ್ನಗಳು ಫಲ ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇದೀಗ ಜಗತ್ತಿನಾದ್ಯಂತ ಆತಂಕದ ವಾತಾವರಣ ನಿರ್ಮಾಣವಾಗಿದೆ.


Click it and Unblock the Notifications