Home / Photos
ಬೆಣ್ಣೆನಗರಿ ದಾವಣಗೆರೆ ಹೊಸ ಆಕರ್ಷಣೆ 'ಗ್ಲಾಸ್ ಹೌಸ್': ವಿಶೇಷತೆ, ಹೇಗೆ ತಲುಪಬೇಕು, ಶುಲ್ಕದ ವಿವರ
1/12
Share
ಬೆಣ್ಣೆನಗರಿಯಲ್ಲಿನ ಗಾಜಿನ ಮನೆ ಪ್ರವಾಸಿಗರ ಗಮನ ಸೆಳೆಯುವುದರ ಜೊತೆಗೆ, ರಾಷ್ಟ್ರಮಟ್ಟದಲ್ಲಿಯೂ ಪ್ರಖ್ಯಾತಿ ಪಡೆದಿದೆ.
2/12
Share
ಸುಮಾರು 108 ಮೀ. ಉದ್ದವಿರುವ ಗಾಜಿನ ಮನೆಯ ಅಗಲ 68 ಮೀ. ಇದ್ದು, 18 ಮೀ. ಎತ್ತರ ಇದೆ. ಇದನ್ನು ಸೇಂಟ್ ಗೊಬೇನ್ ಗ್ಲಾಸ್ಗಳನ್ನು ಬಳಸಿ ನಿರ್ಮಾಣ ಮಾಡಲಾಗಿದೆ.
3/12
Share
ಪ್ರಾರಂಭಿಕವಾಗಿ ಗಾಜಿನ ಮನೆ ನಿರ್ಮಾಣಕ್ಕೆ 25 ಕೋಟಿ 63 ಲಕ್ಷ ರೂಪಾಯಿ ವೆಚ್ಚ ತಗುಲುತ್ತದೆ ಎಂದು ಹೇಳಲಾಗಿದ್ದು, ದಿನಗಳು ಕಳೆದಂತೆ ವೆಚ್ಚವೂ ಹೆಚ್ಚಾಯಿತು.
4/12
Share
2013-14ನೇ ಸಾಲಿನಲ್ಲಿ ಗಾಜಿನ ಮನೆ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದ್ದು, ಒಟ್ಟು 47.31 ಕೋಟಿ ರೂಪಾಯಿ ಹಣ ಮಂಜೂರಾಗಿತ್ತು.
5/12
Share
ಗಾಜಿನ ಮನೆಗೆ ಸ್ಪೈನ್, ಫಿಲಿಫೈನ್ಸ್, ಥೈಲಾಂಡ್ನಿಂದ 300 ರಿಂದ 400 ಗಿಡಗಳನ್ನು ತಂದು ನೆಡಲಾಗಿದೆ. ಸಂಗೀತ ಕಾರಂಜಿಯೂ ಇಲ್ಲಿದ್ದು, ಪ್ರವಾಸಿಗರಿಗೆ ಮತ್ತಷ್ಟು ರಂಗು ನೀಡುತ್ತಿದೆ.
6/12
Share
ಈಗಾಗಲೇ ಗಾಜಿನ ಮನೆಯ ಸಿಂಗಾರಕ್ಕೆ ಸುಮಾರು 50 ಕೋಟಿ ರೂಪಾಯಿಗೂ ಅಧಿಕ ಖರ್ಚಾಗಿದ್ದು, ಇದು ಹಲವು ವೈಶಿಷ್ಟ್ಯತೆಗಳನ್ನು ಹೊಂದಿದೆ.
7/12
Share
ಕುಂದುವಾಡಕ್ಕೆ ಹೋಗುವ ಮಾರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಗಾಜಿನ ಮನೆ ಇದ್ದು, ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಲೇ ಇದೆ.
8/12
Share
ಗಾಜಿನ ಮನೆಯಲ್ಲಿ ವಿದೇಶಿ ಗಿಡಗಳು ಕೂಡ ಇವೆ. ಇವುಗಳನ್ನು ಜಪಾನ್, ಅಮೇರಿಕಾ ಸೇರಿದಂತೆ ಬೇರೆ ಬೇರೆ ದೇಶಗಳಿಂದ ತರಿಸಿರುವುದು ವಿಶೇಷವಾಗಿದೆ.
9/12
Share
ಗಾಜಿನ ಕಟ್ಟಡ ನಿರ್ಮಾಣ ವಿಭಾಗದಲ್ಲಿ, ಬೆಣ್ಣೆನಗರಿ ದಾವಣಗೆರೆಯಲ್ಲಿನ ಗಾಜಿನ ಮನೆಯು 2018ನೇ ಸಾಲಿನ ಝಾಕ್ ರಾಷ್ಟ್ರೀಯ ಪ್ರಶಸ್ತಿಗೆ ಪಾತ್ರವಾಗಿದೆ.


Click it and Unblock the Notifications