Home / Photos
ಕೊಪ್ಪಳದ ಗವಿಮಠ ಜಾತ್ರೆಯಲ್ಲಿ ಜನವೋ ಜನ: ಮಹಾರಥೋತ್ಸವಕ್ಕೆ ಲಕ್ಷಾಂತರ ಭಕ್ತರು
By Reshma P
ಕೊಪ್ಪಳದ ಗವಿಮಠದಲ್ಲಿ ನಡೆದ ಮಹಾರಥೋತ್ಸವದ ವಿಶೇಷ ಫೋಟೋ ಗ್ಯಾಲರಿ. ಲಕ್ಷಾಂತರ ಭಕ್ತರ ಭಕ್ತಿ, ಬೃಹತ್ ತೇರು, ಶಿಸ್ತು, ಸ್ವಚ್ಛತೆ ಹಾಗೂ ಸಂಭ್ರಮದ ಕ್ಷಣಗಳನ್ನು ಇಲ್ಲಿ ನೋಡಿ.
1/7
Photo Credit: ಶರಣು ಚಕ್ರಸಾಲಿ
Share
ಲಕ್ಷಾಂತರ ಜನ ಬಂದರೂ ಸ್ವಚ್ಛತೆಯಲ್ಲಿ ಗವಿಮಠ ಮಾದರಿಯಾಯಿತು ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಸ್ವತಃ ಸ್ವಚ್ಛತೆಗೆ ಕೈಜೋಡಿಸುವುದು ಜನರಿಗೆ ಪ್ರೇರಣೆಯಾಯಿತು.
2/7
Photo Credit: ಶರಣು ಚಕ್ರಸಾಲಿ
Share
ಜಾತ್ರೆಗೆ ಮುನ್ನವೇ ಬೃಹತ್ ತೇರು ನಿರ್ಮಾಣ ಕಾರ್ಯ ಕೈಗೊಳ್ಳಲಾಯಿತು ಸೂರ್ಯೋದಯಕ್ಕೂ ಮುನ್ನ ಪಾದಯಾತ್ರೆ ಮೂಲಕ ಭಕ್ತರು ಮಠ ತಲುಪಿದರು.
3/7
Photo Credit: ಶರಣು ಚಕ್ರಸಾಲಿ
Share
ದಕ್ಷಿಣ ಭಾರತದ ಕುಂಭಮೇಳ ಎಂದೇ ಖ್ಯಾತಿ ಪಡೆದ ಗವಿಮಠ ಜಾತ್ರೆ ಶಿಸ್ತುಬದ್ಧವಾಗಿ ನಡೆಯಿತು, ಎನ್ಸಿಸಿ, ಎನ್ಎಸ್ಎಸ್, ಸ್ಕೌಟ್ ಅಂಡ್ ಗೈಡ್ಸ್ ಹಾಗೂ ಸ್ವಯಂಸೇವಕರ ಪಾತ್ರ ಮಹತ್ವಪೂರ್ಣ ಆಗಿತ್ತು.
4/7
Photo Credit: ಶರಣು ಚಕ್ರಸಾಲಿ
Share
ಲಕ್ಷಾಂತರ ಭಕ್ತರ ಭಕ್ತಿಸಮರ್ಪಣೆಯೊಂದಿಗೆ ಮಹಾರಥೋತ್ಸವ ಭವ್ಯವಾಗಿ ನಡೆಯಿತು ತೇರು ಯಾತ್ರೆ ಸುರಕ್ಷಿತವಾಗಿ ಪೂರ್ಣಗೊಂಡಾಗ ಜನರು ಚಪ್ಪಾಳೆ ಹೊಡೆದು ಸಂಭ್ರಮಿಸಿದರು.
5/7
Photo Credit: ಶರಣು ಚಕ್ರಸಾಲಿ
Share
ಮೇಘಾಲಯದ ರಾಜ್ಯಪಾಲರಾದ ಮೂಲತಃ ಕೊಪ್ಪಳ ಜಿಲ್ಲೆಯ ಬಿನ್ನಾಳ ಗ್ರಾಮದ ಸಿ.ಎಚ್. ವಿಜಯಶಂಕರ್ ಧ್ವಜ ಹಾರಿಸಿ ಮಹಾರಥೋತ್ಸವಕ್ಕೆ ಚಾಲನೆ ನೀಡಿದರು.
6/7
Photo Credit: ಶರಣು ಚಕ್ರಸಾಲಿ
Share
ಜಾತ್ರಾ ಮಹೋತ್ಸವ ಕಾರ್ಯಕ್ರಮ ಆರಂಭವಾಗಿ ನಾಲ್ಕು ದಿನಗಳ ಕಳೆದರೂ ಮಹಾರಥೋತ್ಸವಕ್ಕೆ ಅತ್ಯಧಿಕ ಆದ್ಯತೆ ಮತ್ತು ಜನಸಾಗರ ಕಂಡುಬಂದಿತು.
7/7
Photo Credit: ಶರಣು ಚಕ್ರಸಾಲಿ
Share
ಗೋದೂಳಿಯ ಸಮಯದಲ್ಲಿ ಮಹಾರಥೋತ್ಸವಕ್ಕೆ ಸಾಕ್ಷಿಯಾದ ಭಕ್ತರಲ್ಲಿ ಅಪಾರ ಧನ್ಯತಾಭಾವ ಮೂಡಿತು ಸೋಮವಾರ ಎಲ್ಲ ದಿಕ್ಕುಗಳಿಂದ ಗವಿಮಠಕ್ಕೆ ಜನ ಪ್ರವಾಹದಂತೆ ಹರಿದುಬಂದರು,


Click it and Unblock the Notifications