Home / Photos
Ganesh Chaturthi celebration Photos: ದೇಶದೆಲ್ಲೆಡೆ ಗಣೇಶ ಚತುರ್ಥಿಯ ಸಂಭ್ರಮ ಹೇಗಿದೆ ನೋಡಿ..
By Sunitha B
ದೇಶದೆಲ್ಲೆಡೆ ಇಂದು ಗಣೇಶ ಚತುರ್ಥಿ ಹಬ್ಬವನ್ನು ಅತ್ಯಂತ ಸಂಭ್ರ ಸಡಗರದಿಂದ ಆಚರಿಸಲಾಗುತ್ತಿದೆ. ನಾಗ್ಪುರ, ಶಿಮ್ಲಾ, ಕೋಲ್ಕತ್ತಾ, ಮುಂಬೈನಲ್ಲಿ ಬೃಹತ್ ಗಾತ್ರದ ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ. ಇಂದು ಗಣೇಶನನ್ನು ಅತ್ಯಂತ ಸಂಭ್ರಮ ಸಡಗರದಿಂದ ಮೆರವಣಿಗೆ ಮೂಲಕ ಸ್ವಾಗತಿಸಲಾಗಿದೆ.
1/8
Share
ನಾಗ್ಪುರ: ನಾಗ್ಪುರದಲ್ಲಿ ‘ಗಣೇಶ ಚತುರ್ಥಿ’ ಹಬ್ಬದ ಮುನ್ನಾದಿನದಂದು ಮೆರವಣಿಗೆಯಲ್ಲಿ ಭಕ್ತರು ಗಣೇಶನ ವಿಗ್ರಹವನ್ನು ತಂದರು. ಬೃಹತ್ ಗಣೇಶನನ್ನು ನೃತ್ಯ ಮಾಡುವ ಮೂಲಕ, ಸಂಭ್ರಮ ಸಡಗರದಿಂದ ಭಕ್ತರು ಬರಮಾಡಿಕೊಂಡರು.
2/8
Share
ಮುಂಬೈ: ಮುಂಬೈನಲ್ಲಿ ಗಣೇಶ ಚತುರ್ಥಿ ಹಬ್ಬದಂದು (ಸೆ. 7, 2024) ಲಾಲ್ಬೌಚಾ ರಾಜಾದಲ್ಲಿ ಭಕ್ತರು ಗಣೇಶನಿಗೆ ಪ್ರಾರ್ಥನೆ ಸಲ್ಲಿಸುತ್ತಿರುವ ದೃಶ್ಯ...
3/8
Share
ಮುಂಬೈ: ಮುಂಬೈನಲ್ಲಿ ಗಣೇಶ ಚತುರ್ಥಿ ಹಬ್ಬಕ್ಕಾಗಿ ಭಕ್ತರು ಗಣೇಶನ ವಿಗ್ರಹವನ್ನು ಮೆರವಣಿಗೆ ಮೂಲಕ ತೆಗೆದುಕೊಂಡು ಹೋಗುತ್ತಿರುವ ದೃಶ್ಯವಿದು. ಇಂದು ಬೆಳಿಗ್ಗೆ ಗಣೇಶನನ್ನು ಪ್ರತಿಷ್ಟಾಪಿಸಲಾಯಿತು.
4/8
Share
ನಾಡಿಯಾ: ನಾಡಿಯಾದಲ್ಲಿ ಗಣೇಶ ಚತುರ್ಥಿ ಹಬ್ಬದಂದು ಪುರೋಹಿತರು ಗಣೇಶನಿಗೆ ಪೂಜೆ ಸಲ್ಲಿಸಿದರು. ಬೃಹತ್ ಗಣೇಶನನ್ನು ಕಂಡು ಜನ ಸಂತೋಷದಿಂದ ಪೂಜಾ ಕಾರ್ಯದಲ್ಲಿ ಆಭಗಿಯಾದರು.
5/8
Share
ಶಿಮ್ಲಾ: ಭಕ್ತಾದಿಗಳು ಗಣೇಶ ಚತುರ್ಥಿ ಹಬ್ಬದಂದು ಗಣೇಶನ ವಿಗ್ರಹವನ್ನು ಒಯ್ಯುತ್ತಿರುವ ದೃಶ್ಯವಿದು. ಇಂದು (ಶನಿವಾರ, ಸೆಪ್ಟೆಂಬರ್ 7) ಭಕ್ತರು ಗಣೇಶನ ವಿಗ್ರಹವನ್ನು ಪಾಟಾಕಿ ಸಿಡಿಸುವ ಮೂಲಕ ಸ್ವಾಗತಿಸಿದರು.
6/8
Share
ಕೋಲ್ಕತ್ತಾ: ಕೋಲ್ಕತ್ತಾದಲ್ಲಿ (ಶನಿವಾರ, ಸೆಪ್ಟೆಂಬರ್. 7, 2024) ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಭಕ್ತರು ಗಣೇಶನ ಮುಂದೆ 'ಹವನ' ಮಾಡುತ್ತಿರುವ ದೃಶ್ಯವಿದು...
7/8
Share
ಮುಂಬೈ: ಮುಂಬೈನಲ್ಲಿ ಗಣೇಶ ಚತುರ್ಥಿ ಹಬ್ಬದಂದು ಅತಿ ಎತ್ತರದ ಗಣೇಶನ ವಿಗ್ರಹವನ್ನು ಇಡಲಾಗಿದೆ. ಕೈಯಲ್ಲಿ ಕತ್ತಿ ಹಿಡಿದುಕೊಂಡ ಗಣೇಶ ಮೆಟ್ಟುಲುಗಳ ಮೇಲಿಂದ ಇಳಿದು ಬರುತ್ತಿರುವ ವಿಗ್ರಹ ಇದಾಗಿದ್ದು, ನೋಡಲು ಆಕರ್ಷಕವಾಗಿದೆ.
8/8
Share
ಹುಬ್ಬಳ್ಳಿ: ಶನಿವಾರ ಹುಬ್ಬಳ್ಳಿಯಲ್ಲಿ ‘ಗಣೇಶ ಚತುರ್ಥಿ’ ಹಬ್ಬದಂದು (ಸೆಪ್ಟೆಂಬರ್ 7, 2024) ಭಕ್ತಾದಿಗಳು ಗಣೇಶನ ವಿಗ್ರಹವನ್ನು ಒಯ್ಯುತ್ತಿರುವ ದೃಶ್ಯ.


Click it and Unblock the Notifications