Home / Photos
Photos: ಅಜಿತ್ ಪವಾರ್, ವೈಎಸ್ಆರ್ ಸೇರಿ ವಿಮಾನ ದುರಂತದಲ್ಲಿ ಪ್ರಾಣ ಕಳೆದುಕೊಂಡ ರಾಜಕಾರಣಿಗಳು
By Reshma P
ಅಜಿತ್ ಪವಾರ್, ವೈಎಸ್ಆರ್ ಸೇರಿ ವೈಮಾನಿಕ ದುರಂತದಲ್ಲಿ ಅಂತ್ಯ ಕಂಡ ರಾಜಕಾರಣಿಗಳು.
1/5
Share
28-01-2026: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಪ್ರಯಾಣಿಸುತ್ತಿದ್ದ ಲಿಯರ್ಜೆಟ್ 45 ವಿಮಾನ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಇಳಿಯುವ ವೇಳೆ ಗಂಭೀರ ಅಪಘಾತಕ್ಕೀಡಾಗಿದೆ. ಈ ದುರ್ಘಟನೆಯಲ್ಲಿ ಅಜಿತ್ ಪವಾರ್ ಅವರು ಮೃತಪಟ್ಟಿದ್ದಾರೆ.
2/5
Share
12-06-2025: ಅಹಮದಾಬಾದ್ನಿಂದ ಟೇಕ್ ಆಫ್ ಕೆಲವೇ ಕ್ಷಣಗಳಲ್ಲಿ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿತ್ತು. ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಗುಜರಾತ್ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿದಂತೆ 241 ಜನರು ಸಾವನ್ನಪ್ಪಿದ್ದರು.
3/5
Share
08-12-2021: ಭಾರತೀಯ ಸೇನಾ ಪಡೆಗಳ ಮುಖ್ಯಸ್ಥರಾಗಿದ್ದ ಬಿಪಿನ್ ರಾವತ್ ಅವರು ಸಹ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟಿದ್ದರು. 2021ರ ಡಿ. 8ರಂದು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಎಂಐ-17 ವಿ5 ಪತನವಾಗಿತ್ತು.
4/5
Share
02-09-2009: ಆಂಧ್ರಪ್ರದೇಶದ ಆಗಿನ ಮುಖ್ಯಮಂತ್ರಿಯಾಗಿದ್ದ ವೈಎಸ್ಆರ್ ಎಂದೇ ಜನಪ್ರಿಯರಾಗಿದ್ದ ವೈಎಸ್ ರಾಜಶೇಖರ ರೆಡ್ಡಿ ಅವರು ಸೆಪ್ಟೆಂಬರ್ 2, 2009 ರಂದು ನಲ್ಲಮಲ ಬೆಟ್ಟಗಳಲ್ಲಿ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದರು.
5/5
Share
17-04-2004: ಕನ್ನಡವು ಸೇರಿದಂತೆ ದಕ್ಷಿಣ ಭಾರತೀಯ ಭಾಷೆಗಳಲ್ಲಿ ಮಿಂಚಿದ್ದ ಬಹುಭಾ ನಟಿ ಸೌಂದರ್ಯ ಅವರು ಏಪ್ರಿಲ್ 17, 2004 ರಂದು ವಿಮಾನ ಅಪಘಾತದಲ್ಲಿ ಅಕಾಲಿಕ ಮರಣಕ್ಕೀಡಾಗಿದ್ದರು.


Click it and Unblock the Notifications