Home / Photos
ನಾಗು ಸಾಧುವಿನ ಕಾಲು ಹಿಡಿದು ಆಶೀರ್ವಾದ ಪಡೆದ ಶ್ರೀರಾಮುಲು: ಇಲ್ಲಿದೆ ಫೋಟೋಗಳು
By Mallika P
ಮಾಜಿ ಸಚಿವ ಶ್ರೀರಾಮುಲು ದೇವರಕೊಳ್ಳದ ನಾಗಸಾಧು ಶ್ರೀ ದಿಗಂಬರ ರಾಜ ಭಾರತಿ ಆಶೀರ್ವಾದ ಪಡೆದಿದ್ದಾರೆ. ಇನ್ನಷ್ಟು ಓದಿ.
1/7
Share
ಲೋಕಸಭಾ ಚುನಾವಣೆಯಿಂದ ಮತ್ತೊಮ್ಮೆ ರಾಜಕೀಯ ಅದೃಷ್ಟದ ಪರೀಕ್ಷೆ ಎದುರಿಸಲು ಸಿದ್ಧರಾಗಿರುವ ಶ್ರೀರಾಮುಲು ಲೋಕಸಭೆ ಚುನಾವಣೆಯಲ್ಲಿ ಯಶಸ್ಸು ಕಾಣಲು ತಮ್ಮ ಪ್ರಯತ್ನಕ್ಕೆ ಅಲೌಕಿಕ ಆಧ್ಯಾತ್ಮದ ಬೆಂಬಲ ಪಡೆಯಲು ಹೊರಟಿದ್ದಾರೆ.
2/7
Share
ಚುನಾವಣಾ ರಾಜಕೀಯದಲ್ಲಿ ಬಹುತೇಕ ಯಶಸ್ಸನ್ನೇ ಕಂಡಿದ್ದ ಶ್ರೀರಾಮುಲು, 2023ರ ವಿಧಾನಸಭೆ ಚುನಾವಣೆಯ ಸೋಲಿನ ಬಳಿಕ ಅಲ್ಪ ಕಾಲ ಸೈಲೆಂಟ್ ಆಗಿದ್ದರು. ಮನೆಯಲ್ಲಿ ಶುಭ ಕಾರ್ಯಗಳ ಕಾರಣದಿಂದಲೂ ಕೂಡ ಅವರು ರಾಜಕೀಯ ಚಟುವಟಿಕೆಗಳಿಗೆ ಅಲ್ಪ ವಿರಾಮ ಪಡೆದಿದ್ದರು.
3/7
Share
ಈ ಹಿಂದೆ ಡಿ.ಕೆ.ಶಿವಕುಮಾರ್, ಉಗ್ರಪ್ಪ, ತುಕಾರಾಂ, ಎಂ.ಪಿ. ಪ್ರಕಾಶ್, ಜನಾರ್ದನ ರೆಡ್ಡಿ, ಸೋಮಶೇಖರ್ ರೆಡ್ಡಿ, ಆನಂದ ಸಿಂಗ್, ಸಂತೋಷ ಲಾಡ್, ಅನಿಲ್ ಲಾಡ್ ಸೇರಿದಂತೆ ಹತ್ತು ಹಲವು ನಾಯಕರು ನಾಗಸಾಧು ಶ್ರೀ ದಿಗಂಬರ ರಾಜ ಭಾರತಿ ಭೇಟಿ ನೀಡಿ ಆಶೀರ್ವಾದ ಪಡೆದಿದ್ದರು.
4/7
Share
ಈ ನಾಗಸಾಧುಗಳ ಆಶೀರ್ವಾದ ಪಡೆದವರು ಯಾರು ಸೋತಿಲ್ಲ ಎನ್ನುವ ಪ್ರತೀತಿ ಇದೆ. ಯಾವುದೇ ಫಲಾಪೇಕ್ಷೆ ಇಲ್ಲದೇ ಸಾತ್ವಿಕ ಸನ್ಯಾಸಿ ಜೀವನ ನಡೆಸುತ್ತಿರುವ ಈ ನಾಗಸಾಧು ಆಶೀರ್ವಾದ ಪಡೆಯಲು ರಾಜಕೀಯ ಮುಖಂಡರು ಹೆಚ್ಚು ಹೆಚ್ಚು ಬರುತ್ತಿರುತ್ತಾರೆ.
5/7
Share
ಸಂಡೂರು ತಾಲೂಕಿನ ದೇವರ ಕೊಳ್ಳ ಪ್ರದೇಶದಲ್ಲಿ ನೆಲೆಸಿರುವ ನಾಗಸಾಧು ಶ್ರೀ ದಿಗಂಬರ ರಾಜ ಭಾರತಿ ಬಳ್ಳಾರಿ ಜಿಲ್ಲೆಯನ್ನು ಮೀರಿ ಪ್ರಭಾವನ್ನು ಹೊಂದಿದ್ದಾರೆ. ದಟ್ಟ ಅರಣ್ಯದಲ್ಲಿರುವ ಗುಡ್ಡದ ಮೇಲೆ ವಾಸ ಮಾಡುತ್ತಿರುವ ಈ ನಾಗಸಾಧು ಆರು ತಿಂಗಳು ಮಾತನಾಡಿದರೇ, ಇನ್ನಾರು ತಿಂಗಳು ಮೌನವೃತದಲ್ಲಿರುತ್ತಾರೆ.
6/7
Share
ರಾಜ್ಯ ಬಿಜೆಪಿಯ ಪ್ರಭಾವಿ ನಾಯಕರಲ್ಲಿ ಒಬ್ಬರಾದ ಶ್ರೀರಾಮುಲು ಕೂಡಾ ಲೋಕಸಭಾ ಟಿಕೆಟ್ ಆಕಾಂಕ್ಷಿಯಾಗಿದ್ದು, ಬಳ್ಳಾರಿ ಕ್ಷೇತ್ರದಿಂದ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ. ಈಗಾಗಲೇ ಚುನಾವಣಾ ತಯಾರಿಯ ಗ್ರೌಂಡ್ವರ್ಕ್ ಮಾಡಲು ಆರಂಭಿಸಿರುವ ಅವರು ಯಶಸ್ಸಿಗಾಗಿ ಶತ ಪ್ರಯತ್ನ ಮಾಡಲು ಸಜ್ಜಾಗಿದ್ದಾರೆ.
7/7
Share
ಲೋಕಸಭಾ ಚುನಾವಣೆ ಸಮಿಪಿಸುತ್ತಿದ್ದಂತೆ ಮಾಜಿ ಸಚಿವ ಶ್ರೀರಾಮುಲು ಹಲವು ಪುಣ್ಯ ಕ್ಷೇತ್ರಗಳ ದರ್ಶನ ಮಾಡಿದ್ದು, ಇತ್ತೀಚಿಗೆ ದೇವರಕೊಳ್ಳದ ನಾಗಸಾಧು ಶ್ರೀ ದಿಗಂಬರ ರಾಜ ಭಾರತಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಶ್ರೀರಾಮುಲು ಮಾಜಿ ಸಚಿವರು, ಸಾಧು ಸಂತರ ಹಾಗೂ ಸ್ವಾಮೀಜಿಗಳ ಭೇಟಿಯಾಗಿ ಆಶೀರ್ವಾದ ಪಡೆಯುತ್ತಿದ್ದಾರೆ.


Click it and Unblock the Notifications