Home / Photos
ನಿರ್ಮಲಾ ಸೀತಾರಾಮನ್ 2019-25ರವರೆಗೆ ಬಜೆಟ್ ದಿನ ಉಟ್ಟ ಕೈಮಗ್ಗ ಸೀರೆಗಳಲ್ಲಿ ಭಾರತೀಯ ಕಲೆ, ಪರಂಪರೆ ಅನಾವರಣ
By Reshma P
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು 2026ರ ಫೆಬ್ರವರಿ 1ರ ಭಾನುವಾರ ತಮ್ಮ ಸತತ 9ನೇ ಕೇಂದ್ರ ಬಜೆಟ್ ಮಂಡಿಸಲು ಸಜ್ಜಾಗಿದ್ದಾರೆ. ಬಜೆಟ್ನಲ್ಲಿ ಜನಸಾಮಾನ್ಯರಿಗೆ ಏನು ಸಿಗಲಿದೆ ಎಂಬ ಕುತೂಹಲ ಒಂದೆಡೆಯಾದರೆ, ವಿತ್ತ ಸಚಿವರು ಯಾವ ಬಣ್ಣದ ಮತ್ತು ಯಾವ ರಾಜ್ಯದ ವಿಶೇಷ ಸೀರೆ ಧರಿಸಿ ಸಂಸತ್ತಿಗೆ ಬರುತ್ತಾರೆ ಎಂಬ ಕುತೂಹಲವೂ ಮಹಿಳೆಯರು ಮತ್ತು ಜವಳಿ ಪ್ರಿಯರಲ್ಲಿ ಮನೆಮಾಡಿದೆ.
ನಿರ್ಮಲಾ ಸೀತಾರಾಮನ್ ಅವರು ಪ್ರತಿ ಬಜೆಟ್ ದಿನದಂದು ದೇಶದ ವಿವಿಧ ಭಾಗಗಳ ನೇಕಾರರನ್ನು ಮತ್ತು 'ವೋಕಲ್ ಫಾರ್ ಲೋಕಲ್' ಅಭಿಯಾನವನ್ನು ಪ್ರೋತ್ಸಾಹಿಸಲು ವಿಶೇಷವಾದ ಕೈಮಗ್ಗದ ಸೀರೆಗಳನ್ನು ಧರಿಸುತ್ತಾರೆ. 2019ರಿಂದ ಇಲ್ಲಿಯವರೆಗೆ ಅವರ 'ಸೀರೆ ರಾಜತಾಂತ್ರಿಕತೆ' ಹೇಗಿತ್ತು ಎಂಬ ಚಿತ್ರಣ ಇಲ್ಲಿದೆ:
1/8
Share
2019 (ಚೊಚ್ಚಲ ಬಜೆಟ್): ನಿರ್ಮಲಾ ಅವರು ತಮ್ಮ ಮೊದಲ ಬಜೆಟ್ಗೆ ಆಂಧ್ರಪ್ರದೇಶದ ಮಂಗಳಗಿರಿ ಕಾಟನ್ ಮತ್ತು ರೇಷ್ಮೆ ಮಿಶ್ರಿತ ಗುಲಾಬಿ ಬಣ್ಣದ ಸೀರೆ ಧರಿಸಿದ್ದರು. ಇದು ಸರಳತೆ ಮತ್ತು ಗಾಂಭೀರ್ಯದ ಸಂಕೇತವಾಗಿತ್ತು.
2/8
Share
2020ರಲ್ಲಿ: ವಸಂತ ಪಂಚಮಿಯ ಹಿನ್ನೆಲೆಯಲ್ಲಿ, ಹಳದಿ ಬಣ್ಣದ ರೇಷ್ಮೆ ಸೀರೆಯನ್ನು ಧರಿಸಿದ್ದರು. ಇದಕ್ಕೆ ನೀಲಿ ಬಣ್ಣದ ಅಂಚು ಇತ್ತು.
3/8
Share
2021ರಲ್ಲಿ: ತೆಲಂಗಾಣದ ಪ್ರಸಿದ್ಧ ಪೋಚಂಪಳ್ಳಿ (Pochampally) ರೇಷ್ಮೆ ಸೀರೆಯಲ್ಲಿ ಕಂಗೊಳಿಸಿದ್ದರು. ಕೆಂಪು ಮತ್ತು ಬಿಳಿ ಬಣ್ಣದ ಈ ಸೀರೆ ಇಕ್ಕತ್ ಶೈಲಿಯನ್ನು ಹೊಂದಿತ್ತು.
4/8
Share
2022ರಲ್ಲಿ: ಒಡಿಶಾದ ಬೊಮ್ಕೈ (Bomkai) ಅಥವಾ ಬೊಮ್ಮೆ ಶೈಲಿಯ ಕೈಮಗ್ಗದ ಸೀರೆ. ಕಂದು ಬಣ್ಣದ ಈ ಸೀರೆ ಒಡಿಶಾದ ಸಂಸ್ಕೃತಿಯನ್ನು ಬಿಂಬಿಸಿತ್ತು.
5/8
Share
2023ರಲ್ಲಿ (ಕರ್ನಾಟಕದ ಕೊಡುಗೆ): ಈ ವರ್ಷ ಅವರು ಧರಿಸಿದ್ದು ಕರ್ನಾಟಕದ ಧಾರವಾಡದ ಕಸೂತಿ ಕಲೆಯುಳ್ಳ ಕೆಂಪು ಬಣ್ಣದ ಇಳಕಲ್ ರೇಷ್ಮೆ ಸೀರೆ. ಇದನ್ನು ಧಾರವಾಡದ ಆರತಿ ಹಿರೇಮಠ ಅವರ ನೇತೃತ್ವದ ಮಹಿಳಾ ತಂಡ ಸಿದ್ಧಪಡಿಸಿತ್ತು. ರಥ, ಗೋಪುರ ಮತ್ತು ನವಿಲಿನ ಚಿತ್ತಾರ ಇದರ ವಿಶೇಷವಾಗಿತ್ತು.
6/8
Share
2024ರಲ್ಲಿ (ಮಧ್ಯಂತರ ಬಜೆಟ್): ಪಶ್ಚಿಮ ಬಂಗಾಳದ ಸಂಪ್ರದಾಯವನ್ನು ಎತ್ತಿಹಿಡಿಯುವ ನೀಲಿ ಬಣ್ಣದ ಟಸ್ಸಾರ್ ರೇಷ್ಮೆ (Tussar Silk) ಸೀರೆ. ಇದರ ಮೇಲೆ ಕಾಂತಾ ಎಂಬ ಕಸೂತಿ ಕೆಲಸವಿತ್ತು.
7/8
Share
2024ರಲ್ಲಿ (ಪೂರ್ಣ ಬಜೆಟ್): ನೇರಳೆ ಮತ್ತು ಬಿಳಿ ಬಣ್ಣದ ಕಾಂಬಿನೇಷನ್ ಇರುವ ಮಣಿಪುರಿ ಕೈಮಗ್ಗದ ಸೀರೆಯನ್ನು ಧರಿಸಿದ್ದರು.
8/8
Share
2025ರಲ್ಲಿ: ಬಿಹಾರದ ಮಧುಬನಿ (Madhubani) ಕಲೆ ಇರುವ ಕ್ರೀಮ್ ಬಣ್ಣದ ಸೀರೆ. ಇದನ್ನು ಪದ್ಮಶ್ರೀ ಪುರಸ್ಕೃತೆ ದುಲಾರಿ ದೇವಿ ಅವರು ಸಚಿವರಿಗೆ ಉಡುಗೊರೆಯಾಗಿ ನೀಡಿದ್ದರು. ಸೀರೆಯ ಸೆರಗಿನಲ್ಲಿ ಮೀನಿನ ಚಿತ್ರಗಳಿದ್ದವು.


Click it and Unblock the Notifications