Home / Photos
ಕೊಪ್ಪಳ ಶ್ರೀ ಗವಿಸಿದ್ದೇಶ್ವರ ಜಾತ್ರೆಯಲ್ಲಿ ಪಾಲ್ಗೊಂಡ ಡಿಕೆ ಶಿವಕುಮಾರ್
By Gururaj S
ಕರ್ನಾಟಕದ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರೆ 2024ರಲ್ಲಿ ಪಾಲ್ಗೊಂಡರು. ಸಾಮಾಜಿಕ ಕಳಕಳಿಗೆ ಗವಿಸಿದ್ದೇಶ್ವರ ಜಾತ್ರೆ ಮಾದರಿಯಾಗಿದೆ ಎಂದು ಹೇಳಿದರು.
1/6
Share
ಕರ್ನಾಟಕದ ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ದಕ್ಷಿಣ ಭಾರತದ ಮಹಾ ಕುಂಭಮೇಳ ಎಂದೇ ಪ್ರಸಿದ್ಧವಾದ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ 2024ರಲ್ಲಿ ಪಾಲ್ಗೊಂಡರು. ಪಲ್ಲಕ್ಕಿಗೆ ಹೆಗಲು ನೀಡಿ ಭಕ್ತರೊಂದಿಗೆ ಪಾಲ್ಗೊಂಡು, ಸ್ವಾಮಿಯ ಪ್ರಸಾದ ಸೇವಿಸಿದರು.
2/6
Share
ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಜನವರಿ 27ರಂದು ದಕ್ಷಿಣ ಭಾರತದ ಕುಂಬಮೇಳ ಎಂದೇ ಪ್ರಸಿದ್ದಿ ಪಡೆದಿರುವ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ-2024ರ ಮಹಾರಥೋತ್ಸವದಲ್ಲಿ ಪಾಲ್ಗೊಂಡರು.
3/6
Share
ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ-2024ರಲ್ಲಿ ಪಾಲ್ಗೊಂಡ ಡಿ. ಕೆ. ಶಿವಕುಮಾರ್ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವವು ವಿಶೇಷವಾದ ಈ ಭಾಗದ ಧಾರ್ಮಿಕ ಚರಿತ್ರೆಯುಳ್ಳ ಒಂದು ಜಾತ್ರೆಯಾಗಿದೆ. ಇದರಲ್ಲಿ ಜನರ ಭಾವನೆ, ಅವರ ನಂಬಿಕೆಗೆ ನಾವು ಜೊತೆಗಿದ್ದೇವೆ ಎಂದು ಹೇಳಿದರು.
4/6
Share
ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಕೊಪ್ಪಳದ ಪ್ರಸಿದ್ಧ ಗವಿಮಠದ ಶ್ರೀ ಗವಿಸಿದ್ದೇಶ್ವರ ಸ್ವಾಮಿಯ ಸನ್ನಿಧಿಗೆ ಭೇಟಿ ನೀಡಿ, ನಾಡಿನ ಒಳಿತಿಗಾಗಿ ಪ್ರಾರ್ಥನೆಯನ್ನು ಸಲ್ಲಿಸಿದರು. ಬಳಿಕ ಲಕ್ಷಾಂತರ ಭಕ್ತರ ಜೊತೆ ಶ್ರೀ ಗವಿಸಿದ್ದೇಶ್ವರ ಜಾತ್ರೆ 2024ರಲ್ಲಿ ಪಾಲ್ಗೊಂಡರು.
5/6
Share
ಕೊಪ್ಪಳ ಶ್ರೀ ಗವಿಸಿದ್ದೇಶ್ವರ ಜಾತ್ರೆ 2024ಕ್ಕೆ ಆಗಮಿಸಿದ ಡಿ. ಕೆ. ಶಿವಕುಮಾರ್ ಗವಿಮಠದ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಅವರನ್ನು ಭೇಟಿಮಾಡಿ, ಅವರ ಆಶೀರ್ವಾದ ಪಡೆದರು. ಶ್ರೀಗಳು ಶ್ರೀಮಠ ಜವಬ್ದಾರಿ ತೆಗೆದುಕೊಂಡ ಬಳಿಕ ಪ್ರತಿವರ್ಷ ಹೊಸ-ಹೊಸ ಆಚಾರ ವಿಚಾರಗಳಿಗೆ ಹೆಜ್ಜೆ ಹಾಕುತ್ತಿದ್ದಾರೆ. ಸಾಮಾಜಿಕವಾದ ಬದಲಾವಣೆಗೂ ಸಹ ಹೆಚ್ಚಿನ ಶಕ್ತಿ ತುಂಬುತ್ತಿದ್ದಾರೆ ಎಂದು ಬಣ್ಣಿಸಿದರು.
6/6
Share
ಶ್ರೀ ಗವಿಸಿದ್ದೇಶ್ವರ ಜಾತ್ರೆಯು ಸಾಮಾಜಿಕ ಕಳಕಳಿಗೆ ಮಾದರಿಯಾಗಿದೆ. ಗವಿಮಠದ ಇತಿಹಾಸವನ್ನು ಕೇಳಿದ್ದೇನೆ. ಗವಿಮಠಕ್ಕೆ ಎರಡು ಮೂರು ಬಾರಿ ಭೇಟಿ ಕೊಟ್ಟಿದ್ದೇನೆ. ಇಷ್ಟು ದೊಡ್ಡ ಜಾತ್ರೆಯಲ್ಲಿ ಪಾಲ್ಗೊಳ್ಳಬೇಕು ಎಂಬ ದೊಡ್ಡ ಅಭಿಲಾಶೆ, ಉತ್ಸಾಹ ಮತ್ತು ನಂಬಿಕೆ ಇತ್ತು. ಈ ವರ್ಷ ಜಾತ್ರೆಯಲ್ಲಿ ಪಾಲ್ಗೊಳ್ಳಲು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳೀಯ ಶಾಸಕರು ಸೇರಿ ಹಲವರಿಂದ ನನಗೆ ಒತ್ತಾಯವಿತ್ತು ಎಂದರು.


Click it and Unblock the Notifications