ದಾವಣಗೆರೆ ಮಾತ್ರವಲ್ಲದೇ, ರಾಜ್ಯದ ಬೇರೆ ಬೇರೆ ಕಡೆಗಳಿಗೂ ಸಹ ಇಲ್ಲಿಂದ ಮಂಡಕ್ಕಿಯನ್ನು ಕಳುಹಿಸಿಕೊಡಲಾಗುತ್ತಿದ್ದು, ಇಲ್ಲಿ ಇದ್ದಷ್ಟು ಮಂಡಕ್ಕಿ ಭಟ್ಟಿಗಳು ರಾಜ್ಯದಲ್ಲಿ ಬೇರೆ ಕಡೆ ಸಿಗುವುದು ಅಪರೂಪ.
ಸಂಜೆ ಆದರೆ ಸಾಕು ಮಿರ್ಚಿ, ಮಂಡಕ್ಕಿ, ನರ್ಗಿಸ್ ಸೇವಿಸಲು ಜನರ ದಂಡೇ ನೆರೆದಿರುತ್ತದೆ. ಬೇರೆ ಕಡೆಯಿಂದ ಬಂದವರೂ ಸಹ ಇಲ್ಲಿನ ರುಚಿಯನ್ನು ಸವಿದು ಖುಷಿಪಡುತ್ತಿದ್ದು, ಈ ಉದ್ಯಮವೂ ಬೃಹದ್ಧಾಕಾರವಾಗಿ ಬೆಳೆದಿದೆ.