Home / Photos
ಹಿರಿಯೂರು ಸಮೀಪ ಸ್ಲೀಪರ್ ಅಪಘಾತ: ಪ್ರಯಾಣಿಕರು ಸಜೀವ ದಹನ
ಗೋಕರ್ಣಕ್ಕೆ ತೆರಳುತ್ತಿದ್ದ ಖಾಗಿ ಬಸ್ಗೆ ಬೆಂಕಿ ತಗುಲಿದ ಪರಿಣಾಮ 11 ಜನ ಪ್ರಯಾಣಿಕರು ಸಾವನ್ನಪಿದ ಘಟನೆ ಹಿರಿಯೂ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ.
1/12
Share
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಬಳಿ NH-48ರಲ್ಲಿ ಗೋಕರ್ಣಕ್ಕೆ ತೆರಳುತ್ತಿದ್ದ ಖಾಸಗಿ ಸ್ಲೀಪರ್ ಬಸ್ಗೆ ಭೀಕರ ಬೆಂಕಿ ತಗುಲಿದೆ. ಲಾರಿಯೊಂದು ಡಿವೈಡರ್ ದಾಟಿ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ.
2/12
Share
ಈ ದುರ್ಘಟನೆಯಲ್ಲಿ 11 ಮಂದಿ ಪ್ರಯಾಣಿಕರು ಸ್ಥಳದಲ್ಲೇ ಸುಟ್ಟು ಸಾವನ್ನಪ್ಪಿದ್ದಾರೆ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
3/12
Share
ಬಸ್ನಲ್ಲಿ ಚಾಲಕ-ಕಂಡಕ್ಟರ್ ಸೇರಿ ಸುಮಾರು 30 ಜನ ಪ್ರಯಾಣಿಸುತ್ತಿದ್ದರು ಡಿಕ್ಕಿ ಹೊಡೆದ ಕೆಲವೇ ಕ್ಷಣಗಳಲ್ಲಿ ಬಸ್ ಸಂಪೂರ್ಣವಾಗಿ ಹೊತ್ತಿ ಉರಿದಿದೆ.
4/12
Share
ಕೆಲ ಪ್ರಯಾಣಿಕರು ಸಮಯಕ್ಕೆ ಸರಿಯಾಗಿ ಬಸ್ನಿಂದ ಜಿಗಿದು ಜೀವ ಉಳಿಸಿಕೊಂಡಿದ್ದಾರೆ, ಹಲವರಿಗೆ ಬಸ್ನಿಂದ ಹೊರಬರಲು ಸಾಧ್ಯವಾಗಲಿಲ್ಲ. ಗಾಯಗೊಂಡವರನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
5/12
Share
ಘಟನೆ ಡಿಸೆಂಬರ್ 25ರ ಬೆಳಗಿನ ಜಾವ 3:45ರ ಸುಮಾರಿಗೆ ನಡೆದಿದೆ ಬಸ್ ರಾತ್ರಿ 12ಕ್ಕೆ ಬೆಂಗಳೂರಿನಿಂದ ಗೋಕರ್ಣಕ್ಕೆ ಹೊರಟಿತ್ತು.
6/12
Share
ಮಾಹಿತಿ ಪಡೆದ ತಕ್ಷಣ ಪೊಲೀಸರು ಮತ್ತು ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿದ್ದಾರೆ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ.
7/12
Share
ಅಪಘಾತದಿಂದ NH-48ರಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ ಶಿರಾ–ಹಿರಿಯೂರು ನಡುವೆ ಕಿಲೋಮೀಟರ್ಗಟ್ಟಲೇ ವಾಹನಗಳು ನಿಂತಿದ್ದವು.
8/12
Share
ರಕ್ಷಣಾ ಕಾರ್ಯಾಚರಣೆಗೆ ಆಂಬುಲೆನ್ಸ್ಗಳು ಸ್ಥಳಕ್ಕೆ ದೌಡಾಯಿಸಿವೆ ಈಗ ನಿಧಾನವಾಗಿ ಟ್ರಾಫಿಕ್ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ.
9/12
Share
ಹಿರಿಯೂರು ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ 09 ಜನರ ಜೀವ ಬಲಿ ಪಡೆದ ಭೀಕರ ಬಸ್ ಅಪಘಾತದ ಸ್ಥಳಕ್ಕೆ ದಾವಣಗೆರೆ ಪೂರ್ವ ವಲಯದ ಐಜಿಪಿ ಡಾ. ಬಿ.ಆರ್. ರವಿಕಾಂತೇಗೌಡ ಅವರು ಇಂದು ಬೆಳಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.


Click it and Unblock the Notifications