Home / Photos
‘ನ್ಯಾಚುರಲ್ ಬ್ಯೂಟಿ’ ಮಲೈಕಾ ಫುಲ್ ಮಿಂಚಿಂಗ್ ಗುರೂ!
By Malathesha M
ಸೀರಿಯಲ್ ಮೂಲಕ ಫೇಮಸ್ ಆಗಿದ್ದ ನಟಿ ಮಲೈಕಾ ವಸುಪಾಲ್ ಅವರು ಈಗ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲೂ ಮಿಂಚು ಹರಿಸುತ್ತಿದ್ದಾರೆ. ‘ಉಪಾಧ್ಯಕ್ಷ’ ಸಿನಿಮಾ ಮೂಲಕ ಈ ನಟಿ ಗಳಿಸಿರುವ ಯಶಸ್ಸು ಎಷ್ಟು ದೊಡ್ಡದು ಗೊತ್ತಾ?
1/5
Share
‘ಉಪಾಧ್ಯಕ್ಷ’ ಸಿನಿಮಾ ಮೂಲಕ ಇದೀಗ ಚಿಕ್ಕಣ್ಣ ಮಿಂಚುತ್ತಿದ್ದಾರೆ. ಅದರಲ್ಲೂ ಹೀರೋ ಆಗಿ ಮೊದಲನೆ ಎಂಟ್ರಿಯಲ್ಲೇ ಚಿಕ್ಕಣ್ಣ ದೊಡ್ಡ ಹವಾ ಎಬ್ಬಿಸಿದ್ದಾರೆ. ಈ ಜೊತೆಗೆ ‘ಹಿಟ್ಲರ್ ಕಲ್ಯಾಣ’ ಧಾರಾವಾಹಿ ನಟಿ ಮಲೈಕಾ ವಸುಪಾಲ್ ಕೂಡ, ‘ಉಪಾಧ್ಯಕ್ಷ’ ಸಿನಿಮಾದಲ್ಲಿ ಮಿಂಚಿದ್ದು ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಅದರಲ್ಲೂ ‘ಉಪಾಧ್ಯಕ್ಷ’ ಸಿನಿಮಾ ಈಗಾಗಲೇ ಕೋಟಿ ಕೋಟಿ ರೂಪಾಯಿ ಬಾಚಿದ್ದು, ಭರ್ಜರಿ ಸೌಂಡ್ ಕೂಡ ಮಾಡುತ್ತಿದೆ.
2/5
Share
ಚಿಕ್ಕಣ್ಣ & ರಾಕಿಂಗ್ ಸ್ಟಾರ್ ಯಶ್ ನಡುವೆ ಅಣ್ಣ ತಮ್ಮನ ಸಂಬಂಧ ಇದ್ದು. ಚಿಕ್ಕಣ್ಣಗೆ ಒಳ್ಳೆ ಒಳ್ಳೆ ಪಾತ್ರ ನೀಡಿ, ಅವರ ಸಿನಿಮಾಗೆ ಸಪೋರ್ಟ್ ಕೂಡ ಮಾಡಿದ್ದಾರೆ. ಹೀಗಿದ್ದಾಗ ನಟ ಚಿಕ್ಕಣ್ಣ ಹೀರೋ ಆಗಿ ಎಂಟ್ರಿ ಕೊಟ್ಟಿದ್ದು ಉಪಾಧ್ಯಕ್ಷನಿಗೆ ಯಶ್ ತಬ್ಬಿಕೊಂಡು ಶುಭಾಶಯ ಕೋರಿದ್ದರು. ಇದೇ ವೇಳೆ, ನಟಿ ಮಲೈಕಾ ಅವರಿಗೂ ವಿಶ್ ಮಾಡಿದ್ದರು ನಟ ಯಶ್.
3/5
Share
ಈ ಸಮಯದಲ್ಲೇ ಮಲೈಕಾ ಅವರಿಗೆ ಸಿಕ್ಕಾಪಟ್ಟೆ ಆಫರ್ಸ್ ಕೂಡ ಬರುತ್ತಿವೆಯಂತೆ. ಇನ್ನು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ನಟಿ ಮಲೈಕಾ ಬ್ಯುಸಿ ಆಗೋದು ಬಹುತೇಕ ಪಕ್ಕಾ ಆಗುತ್ತಿದೆ. ಹಾಗಾದರೆ ಸೀರಿಯಲ್ ಅಂದ್ರೆ ಧಾರಾವಾಹಿ ಕಥೆ ಏನು? ನಟಿ ಮಲೈಕಾ ಧಾರಾವಾಹಿಯನ್ನ ಬಿಟ್ಟು ಫುಲ್ ಟೈಂ ಸಿನಿಮಾಗೆ ಬರ್ತಾರಾ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
4/5
Share
ನಟ ದರ್ಶನ್ ಅವರ ಆತ್ಮೀಯ ಗೆಳೆಯ ಚಿಕ್ಕಣ್ಣ ಕೂಡ ಹೀರೋ ಆಗಿ ಹೊಸ ಲೈಫ್ ಶುರು ಮಾಡಿದ್ದಾರೆ. ಚಿಕ್ಕಣ್ಣರ ಸಿನಿಮಾ ‘ಉಪಾಧ್ಯಕ್ಷ’ ನೋಡಿದ್ದರು ಡಿ-ಬಾಸ್ ದರ್ಶನ್ ಅವರು. ಈ ವೇಳೆ ನಟಿ ಮಲೈಕಾ ಅವರ ನಟನೆಯನ್ನ ಕೂಡ ದರ್ಶನ್ ಅವರು ಮೆಚ್ಚಿಕೊಂಡಿದ್ದಾರೆ. ಹಾಗೇ ಮಲೈಕಾ ಅವರು ಕೂಡ ದರ್ಶನ್ ಅವರಿಂದ ಹೊಗಳಿಕೆ ಪಡೆದಿದು ಖುಷಿಯಾಗಿದ್ದರು.
5/5
Share
‘ಉಪಾಧ್ಯಕ್ಷ’ ಸಿನಿಮಾ ಹೀರೋಯಿನ್ ಮಲೈಕಾ ಅವರು ನ್ಯಾಚುರಲ್ ಬ್ಯೂಟಿ ಅಂತಾನೇ ವೈರಲ್ ಆಗುತ್ತಿದ್ದಾರೆ. ಮಲೈಕಾಗೆ ಮೊದಲ ಸಿನಿಮಾದಲ್ಲೇ ಕೋಟಿ, ಕೋಟಿ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಇಂತಿಪ್ಪ ನಟಿ ಮಲೈಕಾ ಅವರು ಯಾವುದೇ ಕಾಸ್ಟ್ಯೂಮ್ ಹಾಕಿದರೂ ಮಿಂಚುತ್ತಾರೆ. ಸಾಂಪ್ರದಾಯಿಕ ಉಡುಗೆಯೇ ಆಗಿರಲಿ ಅಥವಾ ಸಾಂಪ್ರದಾಯಿಕ ಉಡುಗೆಯೇ ಆಗಿರಲಿ. ಮಲೈಕಾ ತೆರೆ ಮೇಲೆ ಕಮಾಲ್ ಮಾಡುತಿದ್ದಾರೆ. ಹೀಗೆ ಮಲೈಕಾ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಮಿಂಚು ಹರಿಸಿದ್ದಾರೆ.


Click it and Unblock the Notifications