Home / Photos
Darshan Birthday: 'ನನ್ನ ಪ್ರೀತಿಯ ಚಾಲೆಂಜಿಂಗ್ ಸ್ಟಾರ್ಗೆ ಹುಟ್ಟುಹಬ್ಬದ ಶುಭಾಶಯ', ದರ್ಶನ್ಗೆ ಸ್ಪೆಷಲ್ ವಿಶ್
By Mallika P
ನಟ ದರ್ಶನ್ ಹುಟ್ಟುಹಬ್ಬಕ್ಕೆ ಚಿತ್ರರಂಗದ ನಟ-ನಟಿಯರು ಶುಭಾಶಯ ಕೋರಿದ್ದಾರೆ.
1/7
Share
ಕನ್ನಡ ಚಿತ್ರಂಗದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೊಸ ವಸಂತಕ್ಕೆ ಕಾಲಿಟ್ಟಿದ್ದು 47ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಹುಟ್ಟುಹಬ್ಬ ಹಬ್ಬದ ಸಂಭ್ರಮದಲ್ಲಿರುವ ದರ್ಶನ್ಗೆ ಹಿರಿಯ ನಟಿ, ಸಂಸದೆ ಸುಮಲತಾ ಪ್ರೀತಿಯಿಂದ ಶುಭಾಶಯ ತಿಳಿಸಿದ್ದಾರೆ. ನನ್ನ ಪ್ರೀತಿಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟು ಹಬ್ಬಕ್ಕೆ ಹಾರ್ದಿಕ ಶುಭಾಶಯಗಳು ಎಂದು ಸುಮಲತಾ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
2/7
Share
ನನ್ನ ಪ್ರೀತಿಯ ಚಾಲೇಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟು ಹಬ್ಬಕ್ಕೆ ಹಾರ್ದಿಕ ಶುಭಾಶಯಗಳು. ಸಿನಿಮಾ ರಂಗಕ್ಕೆ ಬಂದು 25 ವರ್ಷಗಳು, ಕಾಟೇರ 50 ದಿನ ಪೂರೈಸಿದ ಖುಷಿ, ಈ ಸಾಧನೆಯ ಹೆಜ್ಜೆಗೆ, ಬೆಳ್ಳಿ ಹಬ್ಬದ ಸಂಭ್ರಮಕ್ಕೆ ಅಭಿನಂದನೆಗಳು ಎಂದು ಸುಮಲತಾ, ಹಿರಿಯ ನಟ ಅಂಬರೀಷ್ ಹಾಗೂ ಅಭಿಷೇಕ್ ಅಂಬರೀಷ್ ಜೊತೆಗಿನ ದರ್ಶನ್ ಫೋಟೋ ಶೇರ್ ಮಾಡಿದ್ದಾರೆ.
3/7
Share
ನಿಮ್ಮ ಬೆಳವಣಿಗೆ, ಕನ್ನಡ ಚಿತ್ರರಂಗಕ್ಕೆ ಕೊಟ್ಟ ಕೊಡುಗೆ ಎಲ್ಲವೂ ಮೆಚ್ಚುವಂಥದ್ದು. ನೂರಾರು ವರ್ಷಗಳ ಕಾಲ ಅಭಿಮಾನಿಗಳನ್ನು ರಂಜಿಸುತ್ತಾ, ಸುಖ ಪಯಣ ನಿಮ್ಮದಾಗಲಿ ಎಂದು ಹಾರೈಸುವೆ ಎಂದು ಸುಮಲತಾ ಪ್ರೀತಿಯಿಂದ ಶುಭಾಶಯ ತಿಳಿಸಿದ್ದಾರೆ.
4/7
Share
ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ಹುಟ್ಟು ಹಬ್ಬದ ಸಂಭ್ರಮದ ಜೊತೆ ಅವರ ಹೊಸ ಸಿನಿಮಾದ ಡೆವಿಲ್ ಫಸ್ಟ್ ಲುಕ್ ರಿಲೀಸ್ ಆಗಿರುವ ಸಂಭ್ರಮದಲ್ಲಿದ್ದಾರೆ. ಈ ಖುಷಿಗಳಲ್ಲಿರುವ ದರ್ಶನ್ಗೆ ಶಾಸಕ ದರ್ಶನ್ ಪುಟ್ಟಣಯ್ಯ ಶುಭಾಶಯ ತಿಳಿಸಿದ್ದು, ಆತ್ಮೀಯ ಸ್ನೇಹಿತರಾದ, ಭೂಮಿಪುತ್ರ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಎಂದಿದ್ದಾರೆ.
5/7
Share
ನಟ ದರ್ಶನ್ಗೆ ಚೆಲುವಿನಿ ಚಿತ್ತಾರದ ಬೆಡಗಿ ಅಮೂಲ್ಯ ವಿಶೇಷವಾಗಿ ಶುಭಾಶಯ ತಿಳಿಸಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಹಾಗೂ ತಮ್ಮ ಕ್ಯೂಟ್ ಫ್ಯಾಮಿಲಿ ಜೊತೆಗಿನ ಫೋಟೋ ಹಂಚಿಕೊಂಡಿರುವ ಅಮೂಲ್ಯ, ಜಗದ ಸುಖವೆಲ್ಲವೂ ಇರಲಿ ಈ ಕೈಯಲ್ಲಿ ಇರುವವರೆಗೂ ಕೊನೆಯವರೆಗೂ ಎಂದು ವಿಶ್ ಮಾಡಿದ್ದಾರೆ.
6/7
Share
ದರ್ಶನ್ ಕಾಟೇರ ಸಿನಿಮಾ ಗೆದ್ದ ಖುಷಿಯಲ್ಲಿದ್ದರೆ, ಇತ್ತ ನಟ ಚಿಕ್ಕಣ್ಣ ಕೂಡ ಉಪಾಧ್ಯಕ್ಷ ಸಿನಿಮಾ ಗೆದ್ದ ಖುಷಿಯಲ್ಲಿದ್ದಾರೆ. ತಮ್ಮ ಸಿನಿಮಾಗೆ ಬೆಂಬಲರಾಗಿದ್ದ ದರ್ಶನ್ಗೆ ನಟ ಚಿಕ್ಕಣ್ಣ ಫೋಟೋ ಶೇರ್ ಮಾಡಿ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.
7/7
Share
ದರ್ಶನ್ 47ನೇ ಹುಟ್ಟುಹಬ್ಬ ಸಂಭ್ರಮದಿಂದ ಆಚರಿಸಲಾಯಿತು ಪ್ರತಿ ವರ್ಷದಂತೆ ಈ ವರ್ಷವೂ ಸಾವಿರಾರು ಸಂಖ್ಯೆಯಲ್ಲಿ ದರ್ಶನ್ ನಿವಾಸದ ಎದುರು ಅಭಿಮಾನಿಗಳು ಜಮಾಯಿಸಿ ಶುಭಾಶಯ ತಿಳಿಸಿದರು. ಈ ವೇಳೆ ನಟ ಧನ್ವೀರ್ ಕೂಡ ದರ್ಶನ್ ನಿವಾಸಕ್ಕೆ ಭೇಟಿ ನೀಡಿ ಶುಭಾಶಯ ತಿಳಿಸಿದ್ದಾರೆ.


Click it and Unblock the Notifications