Home / Photos
ಬೆಂಗಳೂರು: ಈ ಮಾರ್ಗಗಳಲ್ಲಿ ಡಬಲ್ ಡೆಕ್ಕರ್ ಬಸ್
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಟೆಂಡರ್ ಕರೆಯುವ ಮೂಲಕ ಡಬಲ್ ಡೆಕ್ಕರ್ ಬಸ್ಗಳನ್ನು ಈ ಮಾರ್ಗಗಳಿಗೆ ಮಾತ್ರ ಪರಿಚಯಿಸಲು ನಿರ್ಧರಿಸಿದೆ. ಹಾಗಾದರೆ ಯಾವ್ಯಾವ ಮಾರ್ಗಗಳಲ್ಲಿ ಈ ಸೇವೆಯನ್ನು ಒದಗಿಸಲಾಗುತ್ತದೆ ಗೊತ್ತಾ?-ಇಲ್ಲಿದೆ ನೋಡಿ ಮಾಹಿರತಿ.
1/6
Share
ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದೀಗ ಪ್ರಸ್ತುತ ಬಸ್ಗಳು ತುಂಬಿ ತುಳುಕುತ್ತಿದೆ. ಈ ನಿಟ್ಟಿನಲ್ಲಿ ಬಿಎಂಟಿಸಿ ಟೆಂಡರ್ ಕರೆಯುವ ಮೂಲಕ ಡಬಲ್ ಡೆಕ್ಕರ್ ಬಸ್ಗಳನ್ನು ಮರು ಪರಿಚಯಿಸಲು ಸಜ್ಜಾಗುತ್ತಿದೆ.
2/6
Share
ಇನ್ನು ಈ ಬಗ್ಗೆ ಹಿರಿಯ ಅಧಿಕಾರಿಯೊಬ್ಬರು, "ಭಾರೀ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸುವ ದೃಷ್ಟಿಯಿಂದ ನಾವು ಹೆಚ್ಚು ಡಬಲ್ ಡೆಕ್ಕರ್ ಬಸ್ಗಳನ್ನು ಪ್ರಾರಂಭಿಸಲು ಬಯಸುತ್ತೇವೆ ಎಂದರು.
3/6
Share
ಆದರೆ ಹೆಚ್ಚಿನ ರಸ್ತೆಗಳು ಡಬಲ್ ಡೆಕ್ಕರ್ ಸ್ನೇಹಿಯಾಗಿ ಇರುವುದಿಲ್ಲ. ಕಳೆದ 25 ವರ್ಷಗಳಲ್ಲಿ, ರಸ್ತೆಗಳು ಒಟ್ಟು 42 ಮೇಲ್ಸೇತುವೆಗಳನ್ನು ಪರಿವರ್ತಿಸಿವೆ. 28 ಅಂಡರ್ಪಾಸ್ಗಳನ್ನು ಆರಂಭಿಸಲಾಗಿದೆ.
4/6
Share
ಕಳೆದ 25 ವರ್ಷಗಳಲ್ಲಿ ಡಬಲ್ ಡೆಕ್ಕರ್ ಬಸ್ ಮತ್ತೆ ಆರಂಭಿಸುವ ಪ್ರಸ್ತಾಪ ಬರಬಹುದು ಎಂಬ ಸೂಚನೆಯಿಲ್ಲದೆಯೇ ಈಗಾಗಲೇ 42 ಮೇಲ್ಸೇತುವೆ, 28 ಅಂಡರ್ಪಾಸ್ಗಳನ್ನು ಪ್ರಾರಂಭಿಸಲಾಗಿದೆ. ಇದರ ಜೊತೆಗೆ ಕಡಿಮೆ ಎತ್ತರದ ಗ್ಯಾಂಟ್ರಿಗಳು ಮತ್ತು ಇತರ ರಚನೆಗಳ ಜೊತೆ ಜನನಿಬಿಡ ರಸ್ತೆಗಳಲ್ಲಿ ನೂರಾರು ಸ್ಕೈವಾಕ್ಗಳಿವೆ.
5/6
Share
ಕೊನೆಯ ಬಾರಿಗೆ 1997ರಲ್ಲಿ ನಗರದ ರಸ್ತೆಗಳಲ್ಲಿ ಡಬಲ್ ಡೆಕ್ಕರ್ ಬಸ್ಗಳು ಸಂಚರಿಸುತ್ತಿದ್ದವು. ಅದಾದ ಬಳಿಕ ಕಾರ್ಯಾಚರಣೆ ಮತ್ತು ನಿರ್ವಹಣೆ ಸಮಸ್ಯೆಗಳ ಕಾರಣದಿಂದ ಅವುಗಳನ್ನು ಹಂತಹಂತವಾಗಿ ಸ್ಥಗಿತಗೊಳಿಸಲಾಯಿತು.
6/6
Share
ಆದರೆ ಟೆಕ್-ಕ್ಯಾಪಿಟಲ್ನಲ್ಲಿ ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸುವ ಡ್ರೈವ್ನ ಭಾಗವಾಗಿ ಡಬಲ್ ಡೆಕ್ಕರ್ ಬಸ್ಗಳ ಬಗ್ಗೆ ನವೀಕೃತ ಆಸಕ್ತಿಯು ಇತ್ತೀಚೆಗೆ ಪ್ರಾರಂಭವಾಯಿತು. ಇದು ವಿಶ್ವದ ಅಗ್ರ 10 ಜನದಟ್ಟಣೆಯ ನಗರಗಳಲ್ಲಿ ಒಂದಾಗಿದೆ. ಮೆಜೆಸ್ಟಿಕ್ (ಕೆಂಪೇಗೌಡ ಬಸ್ ನಿಲ್ದಾಣ) ಶಿವಾಜಿನಗರ, ಮೆಜೆಸ್ಟಿಕ್ನಿಂದ ಅತ್ತಿಬೆಲೆ ಮತ್ತು ವಿಜಯನಗರದಿಂದ ಕಲಾಸಿಪಾಳ್ಯವನ್ನು ಮಾರ್ಗಗಳನ್ನು ಗುರುತಿಸಿದೆ.


Click it and Unblock the Notifications