Home / Photos
'ಮೋದಿ ಮತ್ತೊಮ್ಮೆ' ಬೆಂಗಳೂರು ಗ್ರಾಮಾಂತರದಲ್ಲಿ ಬೈಕ್ ರ್ಯಾಲಿ
By Gururaj S
ಬಿಜೆಪಿ ನಾಯಕರು ಬೈಕ್ ರ್ಯಾಲಿ ಮೂಲಕ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಡಾ. ಸಿ. ಎನ್. ಮಂಜುನಾಥ್ ಪರ ಪ್ರಚಾರ ನಡೆಸಿದರು.
1/6
Share
'ಮೋದಿ ಮತ್ತೊಮ್ಮೆ' ಎಂಬ ಹೆಸರಿನಲ್ಲಿ ಬೈಕ್ ರ್ಯಾಲಿ ಮೂಲಕ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಚುನಾವಣಾ ಪ್ರಚಾರ ನಡೆಸಿತು. ಪಕ್ಷದ ಅಭ್ಯರ್ಥಿ ಡಾ. ಸಿ. ಎನ್. ಮಂಜುನಾಥ್ ಪರವಾಗಿ ಮತಯಾಚನೆ ಮಾಡಲಾಯಿತು.
2/6
Share
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿದರಗುಪ್ಪೆ, ಅತ್ತಿಬೆಲೆ, ನೆರಳೂರು, ಬೊಮ್ಮಸಂದ್ರ, ಹೆಬ್ಬಗೋಡಿ ಮುಂತಾದ ಕಡೆಗಳಲ್ಲಿ ಬೈಕ್ ರ್ಯಾಲಿ ನಡೆಸಿ ಡಾ. ಸಿ. ಎನ್. ಮಂಜುನಾಥ್ ಪರವಾಗಿ ಚುನಾವಣಾ ಪ್ರಚಾರ ನಡೆಸಲಾಯಿತು.
3/6
Share
ಪ್ರತಿಪಕ್ಷ ನಾಯಕ ಆರ್. ಅಶೋಕ, ಕೇಂದ್ರ ಸಚಿವ ಎ. ನಾರಾಯಣಸ್ವಾಮಿ, ಶಾಸಕ ಗಾಲಿ ಜನಾರ್ದನ ರೆಡ್ಡಿ ಸೇರಿದಂತೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.
4/6
Share
ಎನ್ಡಿಎ ಮೈತ್ರಿಕೂಟದ ಅಭ್ಯರ್ಥಿ ಡಾ. ಸಿ. ಎನ್ ಮಂಜುನಾಥ್ ಅವರನ್ನು ಬಹುದೊಡ್ಡ ಮತಗಳ ಅಂತರದಿಂದ ಗೆಲ್ಲಿಸಿಬೇಕೆಂದು ಬೈಕ್ ರ್ಯಾಲಿ ಮೂಲಕ ಜನರಲ್ಲಿ ಮನವಿ ಮಾಡಲಾಯಿತು.
5/6
Share
ನೂರಾರು ಯುವಕರು, ಹಿರಿಯರು ಬಹಳ ಉತ್ಸಾಹದಿಂದ ಸುಮಾರು 3-4 ಗಂಟೆಯವರೆಗೆ ಸುಡು ಬಿಸಿಲನ್ನು ಲೆಕ್ಕಿಸದೆ ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಡಾ. ಸಿ. ಎನ್ ಮಂಜುನಾಥ್ ಬೆಂಬಲಿಸುವಂತೆ ಮನವಿ ಮಾಡಿದರು.
6/6
Share
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮತದಾನ ಏಪ್ರಿಲ್ 26ರಂದು ನಡೆಯಲಿದೆ. ಬಿಜೆಪಿಯಿಂದ ಡಾ. ಸಿ. ಎನ್. ಮಂಜುನಾಥ್, ಕಾಂಗ್ರೆಸ್ನಿಂದ ಡಿ. ಕೆ. ಸುರೇಶ್ ಎದುರಾಳಿಗಳು.


Click it and Unblock the Notifications