Home / Photos
ಬೆಂಗಳೂರು ವಿವಿ ಪುರಂ ಸುಬ್ರಮಣ್ಯ ಸ್ವಾಮಿ ಬೆಳ್ಳಿ ತೇರು ಉತ್ಸವ
By Gururaj S
ಸ್ಕಂದ ಷಷ್ಠಿ ಅಂಗವಾಗಿ ಬೆಂಗಳೂರಿನ ವಿ. ವಿ. ಪುರಂನ ಶ್ರೀ ಸುಬ್ರಮಣ್ಯ ಸ್ವಾಮಿ ದೇವಾಲಯದ ಬ್ರಹ್ಮರಥೋತ್ಸವ (ಬೆಳ್ಳಿ ತೇರು ಉತ್ಸವ) ನಡೆಯಿತು.
1/6
Share
ಸ್ಕಂದ ಷಷ್ಠಿಯ ಅಂಗವಾಗಿ ಬೆಂಗಳೂರು ನಗರದ ವಿ. ವಿ. ಪುರಂನ ಶ್ರೀ ಸುಬ್ರಮಣ್ಯ ಸ್ವಾಮಿ ದೇವಾಲಯದ ಬ್ರಹ್ಮರಥೋತ್ಸವ ನಡೆಯಿತು. ವಾರ್ಷಿಕವಾಗಿ ನಡೆಯುವ ಉತ್ಸವದಲ್ಲಿ ದೇವರ ಮೂರ್ತಿಯನ್ನು ಬೆಳ್ಳಿ ತೇರಿನಲ್ಲಿ ಕೂರಿಸಲಾಗುತ್ತದೆ. ಇದು ಬೆಳ್ಳಿ ತೇರು ಉತ್ಸವ ಎಂದೇ ಪ್ರಸಿದ್ಧಿ.
2/6
Share
ಬೆಂಗಳೂರಿನ ವಿ.ವಿ.ಪುರಂನ ಶ್ರೀ ಸುಬ್ರಮಣ್ಯ ಸ್ವಾಮಿ ದೇವಸ್ಥಾನದ ಬ್ರಹ್ಮರಥೋತ್ಸವ ಬೆಳ್ಳಿ ತೇರಿನ ಉತ್ಸವದಲ್ಲಿ ದೇವಸ್ಥಾನದ ಸಿಬ್ಬಂದಿ, ಅಪಾರ ಭಕ್ತರು ಪಾಲ್ಗೊಂಡಿದ್ದರು.
3/6
Share
ವಿ. ವಿ. ಪುರಂನ ಶ್ರೀ ಸುಬ್ರಮಣ್ಯ ಸ್ವಾಮಿ ದೇವಾಲಯದ ಬೆಳ್ಳಿ ತೇರು ಉತ್ಸವದಲ್ಲಿ ಚಿಕ್ಕಪೇಟೆ ಕ್ಷೇತ್ರದ ಬಿಜೆಪಿ ಶಾಸಕ ಉದಯ್ ಗರುಡಾಚಾರ್ ಸೇರಿದಂತೆ ಅಪಾರ ಭಕ್ತರು ಪಾಲ್ಗೊಂಡಿದ್ದರು. ವಾರ್ಷಿಕವಾಗಿ ಸ್ಕಂದ ಷಷ್ಠಿಯಂದು ರಥೋತ್ಸವ ನಡೆಯುತ್ತದೆ.
4/6
Share
ವಿ. ವಿ. ಪುರಂನ ಶ್ರೀ ಸುಬ್ರಮಣ್ಯ ಸ್ವಾಮಿ ದೇವಾಲಯದ ಬೆಳ್ಳಿ ತೇರು ಉತ್ಸವದ ಹಿಂದಿನ ದಿನ ಅಂದರೆ ಭಾನುವಾರ ರಾತ್ರಿ 'ತಾರಕಾಸುರ ಸಂಹಾರ' ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಶಾಸಕ ಉದಯ್ ಗರುಡಾಚಾರ್ ಪಾಲ್ಗೊಂಡಿದ್ದರು.
5/6
Share
ಚಿಕ್ಕಪೇಟೆ ಕ್ಷೇತ್ರದ ಬಿಜೆಪಿ ಶಾಸಕ ಉದಯ್ ಗರುಡಾಚಾರ್ ವಿ.ವಿ.ಪುರಂನ ಶ್ರೀ ಸುಬ್ರಮಣ್ಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆಯನ್ನು ಸಲ್ಲಿಕೆ ಮಾಡಿದರು. 'ತಾರಕಾಸುರ ಸಂಹಾರ' ಕಾರ್ಯಕ್ರಮದ ಬಳಿಕ ಬೆಳ್ಳಿ ತೇರಿನ ಉತ್ಸವ ನಡೆಯುತ್ತದೆ.
6/6
Share
ಜಯನಗರದ ಬಿಜೆಪಿ ಶಾಸಕ ಸಿ. ಕೆ. ರಾಮಮೂರ್ತಿ ಅವರು ವಿ. ವಿ. ಪುರಂನ ಶ್ರೀ ಸುಬ್ರಮಣ್ಯ ಸ್ವಾಮಿ ದೇವಾಲಯದ ಬೆಳ್ಳಿ ತೇರು ಉತ್ಸವದಲ್ಲಿ ಪಾಲ್ಗೊಂಡು ದೇವದ ಆಶೀರ್ವಾದ ಪಡೆದರು. ನಾಡಿಗೆ ಒಳಿತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.


Click it and Unblock the Notifications