Home / Photos
Bengaluru's largest KSRTC bus stand: ಬೆಂಗಳೂರಿನ ಅತಿ ದೊಡ್ಡ ಬಸ್ ನಿಲ್ದಾಣದ ಬಗ್ಗೆ ನಿಮಗೆಷ್ಟು ಗೊತ್ತು?
ಬೆಂಗಳೂರಿನ ಈ ಭಾಗದಲ್ಲಿ 9 ವರ್ಷಗಳ ಹಿಂದೆ ನಿರ್ಮಾಣ ಆಗಿದ್ದ ಸುಸಜ್ಜಿತ KSRTC ಬಸ್ ನಿಲ್ದಾಣ ಕೊನೆಗೂ ಬಳಕೆಗೆ ಲಭ್ಯವಾಗಿದೆ. ಹಾಗಾದರೆ ಈ ಬಸ್ ನಿಲ್ದಾಣದ ಹೆಸರೇನು, ಯಾವ ಉದ್ದೇಶಕ್ಕೆ ಇದನ್ನು ಬಳಕೆ ಮಾಡಲಾಗುತ್ತದೆ ಹಾಗೂ ಎಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
1/6
Share
ಪೀಣ್ಯದಲ್ಲಿ ಈ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬದಲು ಕಾರ್ಗೊ ನಿಲ್ದಾಣವನ್ನಾಗಿ ಮಾಡಲಾಗಿದೆ. ಬೆಂಗಳೂರಿನಿಂದ ಕಾರ್ಯಾಚರಣೆ ಮಾಡುವ ಟ್ರಕ್ಗಳಿಗೆ ಪೀಣ್ಯದ ಬಸ್ವೇಶ್ವರ ನಿಲ್ದಾಣವನ್ನು ನಿಲುಗಡೆ ತಾಣವನ್ನಾಗಿ ಕೆಎಸ್ಆರ್ಟಿಸಿ ಉಪಯೋಗಿಸುತ್ತಿದೆ.
2/6
Share
ಕೆಎಸ್ಆರ್ಟಿಸಿ ಈಗಾಗಲೇ ಟ್ರಕ್ಗಳಿಗೆ ಚಾಲನೆ ನೀಡಿದೆ. ಇವುಗಳನ್ನು ಬೇರೆ ಬೇರೆ ಜಿಲ್ಲೆಗಳಿಗೆ ಪಾರ್ಸಲ್ ಸೇರಿದಂತೆ ಇನ್ನಿತರ ಕೆಎಸ್ಆರ್ಟಿಸಿ ಸೇವೆಗೆ ಬಳಸಿಕೊಳ್ಳಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ. 44 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಆಗಿದ್ದ ಈ ನಿಲ್ದಾಣವನ್ನು 2014ರಲ್ಲಿ ಉದ್ಘಾಟನೆ ಮಾಡಲಾಗಿತ್ತು.
3/6
Share
ಮೂರು ಅಂತಸ್ತಿನ ಈ ನಿಲ್ದಾಣದ ನೆಲ ಮಹಡಿಯ ಪ್ಲಾಟ್ಫಾರಂನಿಂದ ಉತ್ತರ ಕರ್ನಾಟಕ ಜಿಲ್ಲೆಗಳಿಗೆ, ಮೊದಲ ಮಹಡಿಯಲ್ಲಿ ದಕ್ಷಿಣ ಕರ್ನಾಟಕದ ಜಿಲ್ಲೆಗಳಿಗೆ ತೆರಳುವ ಬಸ್ಗಳಿಗೆ ನಿಲುಗಡೆ ವ್ಯವಸ್ಥೆ ಮಾಡಲಾಗಿತ್ತು. ಇನ್ನು ಎರಡನೇ ಮಹಡಿಯಲ್ಲಿ ವಸತಿಗೃಹ, ಹೋಟೆಲ್ ಹಾಗೂ ಅಂಗಡಿಗಳಿಗೆ ಮೀಸಲಾಗಿತ್ತು.
4/6
Share
ಗಂಗಮ್ಮನ ಗುಡಿ ಹೊರ ಠಾಣೆ, ಸುಸಜ್ಜಿತ ಆಸನ ವ್ಯವಸ್ಥೆ, ಲಿಫ್ಟ್, ಕುಡಿಯುವ ನೀರು, ಶೌಚಾಲಯ, ಭದ್ರತೆ, ವೈಫೈ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗಿತ್ತು. 20ಕ್ಕೂ ಹೆಚ್ಚು ಜಿಲ್ಲೆಗಳಿಗೆ ಮೆಜೆಸ್ಟಿಕ್ ಬದಲು ಇಲ್ಲಿಂದಲೇ ಬಸ್ ಸಂಚರಿಸುವಂತೆ ಮಾಡಿ, ಜಿಲ್ಲೆಗಳಿಂದ ಬರುವ ಬಸ್ಗಳಿಗೆ ಇದೇ ಕೊನೇ ನಿಲ್ದಾಣನ್ನಾಗಿ ಮಾಡಿ ನಗರದ ವಾಹನ ದಟ್ಟಣೆಯನ್ನು ಕಡಿಮೆ ಮಾಡಬೇಕು ಎಂಬುದು ಉದ್ದೇಶವಾಗಿತ್ತು.
5/6
Share
ಹೆದ್ದಾರಿಯಿಂದ 1 ಕಿಲೋ ಮೀಟರ್ ಒಳಗೆ ಇರುವ ಈ ಬಸ್ ನಿಲ್ದಾಣದಿಂದ ಕೆಲವೇ ವಾರ ಬಸ್ಗಳು ಸಂಚರಿಸಿದ್ದವು. ಪ್ರಯಾಣಿಕರ ನೀರಸ ಸ್ಪಂದನೆ ಮತ್ತು ಖಾಸಗಿ ಬಸ್ ಮಾಲೀಕರ ಒತ್ತಡದಿಂದಾಗಿ ಬಳಿ ನಿಂತು ಹೋಯಿತು. ಏಪ್ರಿಲ್ 2018ರಲ್ಲಿ ಮತ್ತೆ ಬಸ್ ಸಂಚಾರ ಶುರುವಾಗಿತ್ತು. ಆರಂಭವಾಗಿ ಮೊದಲು 60 ಬಸ್ಗಳು ಬಸವೇಶ್ವರ ಬಸ್ ನಿಲ್ದಾಣದಿಂದ ಕಾರ್ಯಾಚರಣೆ ಶುರು ಮಾಡಿದ್ದವು.
6/6
Share
ಆದರೆ ದೂರದ ಊರಿಗೆ ಪ್ರಯಾಣ ಮಾಡುವವರು ಮೆಜೆಸ್ಟಿಕ್ಗೆ ಬರುವುದನ್ನು ನಿಲ್ಲಿಸಲಿಲ್ಲ. ಪೀಣ್ಯ ಬಸ್ ನಿಲ್ದಾಣಕ್ಕೆ ಹೋಗಲಿಲ್ಲ. ಅಲ್ಲಿಂದ ಸಂಚರಿಸಿದ ಬಸ್ಗಳಲ್ಲಿ ಪ್ರಯಾಣಿಕರಿಲ್ಲದೆ ನಷ್ಟವಾಗಿ, 6 ತಿಂಗಳಲ್ಲಿ ಸಂಚಾರ ಸ್ಥಗಿತಗೊಳಿಸಿದ್ದವು. 2018ರ ಅಕ್ಟೋಬರ್ ನಂತರ ಯಾವುದೇ ಬಸ್ಗಳ ಸಂಚಾರ ಸ್ಥಗಿತವಾಗಿತ್ತು. ಇದೀಗ ಇದನ್ನು ಕಾರ್ಗೋ ಟ್ರಕ್ ನಿಲ್ದಾಣವಾಗಿ ಬಳಸಲಾಗುತ್ತಿದೆ.


Click it and Unblock the Notifications