Home / Photos
ಬೆಂಗಳೂರು: ಸುಧಾಮೂರ್ತಿ, ರಾಮಲಿಂಗಾ ರೆಡ್ಡಿ ಕುಟುಂಬ ಸೇರಿದಂತೆ ಅನೇಕರು ಮತ ಚಲಾಯಿಸಿದರು: ಫೋಟೋ
ಬೆಂಗಳೂರು ವ್ಯಾಪ್ತಿಯ ಮೂರು ಕ್ಷೇತ್ರಗಳಲ್ಲಿ ಗಣ್ಯರು, ರಾಜಕಾರಣಿಗಳು ಕುಟುಂಬ ಸಮೇತರಾಗಿ ಬಂದು ಮತ ಚಲಾಯಿಸಿದರು. ಇನ್ಫೋಸಿಸ್ ಸುಧಾಮೂರ್ತಿ ದಂಪತಿ, ನಿರ್ಮಲಾ ಸೀತಾರಾಮನ್, ರಾಮಲಿಂಗಾ ರೆಡ್ಡಿ ಕುಟುಂಬ ಸೇರಿದಂತೆ ಅಭ್ಯರ್ಥಿಗಳು ಹತ್ತಿರದ ಮತಗಟ್ಟೆಗೆ ಬಂದು ಮತದಾನ ಮಾಡಿದರು.
1/7
Share
ಇನ್ಫೋಸಿಸ್ ಸಂಸ್ಥಾಪಕರಾದ ಎನ್ಆರ್ ನಾರಾಯಣಮೂರ್ತಿ ಹಾಗೂ ರಾಜ್ಯಸಭಾ ಸದಸ್ಯೆ ಸುಧಾಮೂರ್ತಿಯವರು ಇಂದು ಶುಕ್ರವಾರ ಬೆಂಗಳೂರಿನ ದಕ್ಷಿಣ ಲೋಕಸಭಾ ಕ್ಷೇತ್ರವ್ಯಾಪ್ತಿಯಲ್ಲಿನ ಜಯನಗರದ ಮತಗಟ್ಟೆಯಲ್ಲಿ ಮತ ಹಕ್ಕು ಚಲಾಯಿಸಿದರು.
2/7
Share
ಬೆಂಗಳೂರಿನ ಬಿಇಎಸ್ ಮತಗಟ್ಟೆಯಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮತದಾನ ಮಾಡಿದರು. ತಾವು ಮತದಾನ ಮಾಡಿರುವುದಾಗಿ ಕೈಬೆರಳಿಗೆ ಹಾಕಿ ಶಾಹಿ ಪ್ರದರ್ಶಿಸಿದರು.
3/7
Share
ಬೆಂಗಳೂರು ಕೇಂದ್ರ ಲೋಕಸಭಾ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮನ್ಸೂರ್ ಅಲಿಖಾನ್ ಅವರು ಇಂದು ಬೆಳಗ್ಗೆ ಹತ್ತಿರದ ಮತಗಟ್ಟೆಗೆ ತೆರಳಿ ಅವರು ಮತ ಚಲಾಯಿಸಿದರು.
4/7
Share
ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿಯಾಗಿರುವ ಮಾಜಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಕುಟುಂಬ ಸಮೇತರಾಗಿ ಬಂದು ತಮ್ಮ ಕ್ಷೇತ್ರದಲ್ಲಿ ಮತದಾನ ಮಾಡಿದರು. ಮತದಾನ ಮಾಡಿ ಕೈಬೆರಳಿಗೆ ಹಾಕಿಸಿಕೊಂಡು ಶಾಹಿ ತೋರಿಸಿದರು.
5/7
Share
ಕರ್ನಾಟಕ ರಾಜ್ಯ ಬಿಜೆಪಿ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು ಇಂದು ಕರ್ನಾಟಕ ಲೋಕಸಭಾ ಚುನಾವಣೆಯ ಮೊದಲ ಹಂತದ ಚುನಾವಣೆಯಲ್ಲಿ ಮತದಾನ ಚಲಾಯಿಸಿದರು. ಮತದಾನ ಬಳಿಕ ಆರ್ ಅಶೋಕ್ ದಂಪತಿ ಶಾಹಿ ಗುರುತನ್ನು ಪ್ರದರ್ಶಿಸಿದರು.
6/7
Share
ಕರ್ನಾಟಕ ರಾಜ್ಯ ಸಚಿವರಾದ ಬಿ.ಝಡ್ ಜಮ್ಮೀರ್ ಅಹ್ಮದ್ ಅವರು ಇಂದು ಶುಕ್ರವಾರ ಮತದಾನ ಮಾಡಿದರು. ಎಲ್ಲರೂ ತಪ್ಪದೇ ಮತದಾನ ಮಾಡುವಂತೆ ಪ್ರೇರೇಪಿಸಿದರು.
7/7
Share
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾರೆಡ್ಡಿ ಮತ್ತು ಸಚಿವ ರಾಮಲಿಂಗಾ ರೆಡ್ಡಿ ಅವರು ಕುಟುಂಬ ಸಮೇತರಾಗಿ ಬಂದ ಮತದಾನ ಮಾಡಿದರು. ಮತ ಹಕ್ಕು ಚಲಾಯಿಸಿದ ನಂತರ ಫೋಟೋಗೆ ಫೋಸ್ ಕೊಟ್ಟರು.


Click it and Unblock the Notifications