Home / Photos
ಸ್ವಾತಂತ್ರ್ಯ ದಿನಾಚರಣೆ 2024 ಲಾಲ್ ಬಾಗ್ ಫ್ಲವರ್ ಶೋ ಆರಂಭ
By Gururaj S
ಸ್ವಾತಂತ್ರ್ಯ ದಿನಾಚರಣೆ 2024ರ ಬೆಂಗಳೂರಿನ ಲಾಲ್ ಬಾಗ್ನಲ್ಲಿ ಫ್ಲವರ್ ಶೋ ಆರಂಭವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಫ್ಲವರ್ ಶೋ ಉದ್ಘಾಟಿಸಿದರು.
1/6
Share
ತೋಟಗಾರಿಕೆ ಇಲಾಖೆಯು ಬೆಂಗಳೂರಿನ ಲಾಲ್ ಬಾಗ್ನ ಗಾಜಿನ ಮನೆಯ ಸಸ್ಯ ತೋಟದಲ್ಲಿ ಸ್ವಾತಂತ್ರ್ಯ ದಿನಾಚರಣೆ 2024ರ ಅಂಗವಾಗಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನಕ್ಕೆ ಗುರುವಾರ ಚಾಲನೆ ಸಿಕ್ಕಿದೆ. ಒಟ್ಟು 12 ದಿನಗಳ ಕಾಲ ಫಲಪುಷ್ಪ ಪ್ರದರ್ಶನ ನಡೆಯಲಿದ್ದು, ಲಕ್ಷಾಂತರ ಜನರು ಆಗಮಿಸುವ ನಿರೀಕ್ಷೆ ಇದೆ.
2/6
Share
ತೋಟಗಾರಿಕೆ ಇಲಾಖೆ ಆಯೋಜಿಸಿರುವ ಸ್ವಾತಂತ್ರ್ಯ ದಿನಾಚರಣೆ 2024ರ ಫಲಪುಷ್ಪ ಪ್ರದರ್ಶನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವರು, ಶಾಸಕರ ಜೊತೆ ಗುರುವಾರ ಉದ್ಘಾಟಿಸಿದರು. ಫಲಪುಷ್ಪ ಪ್ರದರ್ಶನದ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
3/6
Share
ಈ ಬಾರಿ 'ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ್ ಅವರ ವಿಷಯಧಾರಿತ ಫಲಪುಷ್ಪ ಪ್ರದರ್ಶನವನ್ನು ಆಯೋಜನೆ ಮಾಡಲಾಗಿದೆ. ಅಂಬೇಡ್ಕರ್ ಜನ್ಮಸ್ಥಳ ಸೇರಿ ಒಟ್ಟು 15 ಬಗೆಯ ವಿನ್ಯಾಸಗಳನ್ನು ಲಕ್ಷಾಂತರ ಹೂಗಳ ಮೂಲಕ ಮಾಡಲಾಗಿದೆ.
4/6
Share
12 ದಿನಗಳ ಫಲಪುಷ್ಪ ಪ್ರದರ್ಶನದಲ್ಲಿ 6 ದಿನಗಳಿಗೊಮ್ಮೆ ಹೂಗಳನ್ನು ಬದಲಾವಣೆ ಮಾಡಲಾಗುತ್ತದೆ. 1.70 ಲಕ್ಷ ಹೂಗಳನ್ನು ಬಳಕೆ ಮಾಡಿ ಡಾ. ಅಂಬೇಡ್ಕರ್ ಜನ್ಮಸ್ಥಳ, ಮತ್ತು ಚೈತ್ಯ ಭೂಮಿಯನ್ನು ನಿರ್ಮಾಣ ಮಾಡಲಾಗಿದೆ. ಆಗಸ್ಟ್ 13ರಂದು ಈ ಹೂವುಗಳನ್ನು ಬದಲಾಯಿಸಲಾಗುವುದು ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
5/6
Share
ಫಲಪುಷ್ಪ ಪ್ರದರ್ಶನಕ್ಕೆ ಈ ಬಾರಿ ಸುಮಾರು 10 ಲಕ್ಷ ಜನರು ಆಗಮಿಸುವ ನಿರೀಕ್ಷೆ ಇದೆ. ವಾರಾಂತ್ಯದಲ್ಲಿ, ರಜೆ ದಿನಗಳಲ್ಲಿ ಹೆಚ್ಚು ಜನರು ಆಗಮಿಸಲಿದ್ದು, ಸಂಚಾರಿ ಪೊಲೀಸರು ಸಹ ಲಾಲ್ ಬಾಗ್ ಸುತ್ತಲೂ ವಾಹನ ಸಂಚಾರ ಮಾರ್ಗ, ವಾಹನ ನಿಲುಗಡೆಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿದ್ದಾರೆ.
6/6
Share
ಲಾಲ್ ಬಾಗ್ನಲ್ಲಿ ಸ್ವಾತಂತ್ರ್ಯ ದಿನಾಚರಣೆ 2024ರ ಅಂಗವಾಗಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನಕ್ಕೆ ಶಾಲಾ ಮಕ್ಕಳಿಗೆ ಉಚಿತ ಪ್ರವೇಶವಿದೆ. ವಯಸ್ಕರು 80, ಮಕ್ಕಳು 30 ರೂ. ಪ್ರವೇಶ ಶುಲ್ಕವನ್ನು ಪಾವತಿಸಬೇಕು.


Click it and Unblock the Notifications