Home / Photos
Bengaluru-Hosur Metro: ದಕ್ಷಿಣ ಭಾರತದ ಮೊದಲ ಅಂತರ-ರಾಜ್ಯ ಮೆಟ್ರೋ ಯೋಜನೆ ಬಗ್ಗೆ ತಿಳಿಯಿರಿ
ಬೆಂಗಳೂರಿನ ಬೊಮ್ಮಸಂದ್ರದಿಂದ ತಮಿಳುನಾಡಿನ ಹೊಸೂರಿನ ಕೈಗಾರಿಕಾ ಪ್ರದೇಶಕ್ಕೆ ದಕ್ಷಿಣ ಭಾರತದಲ್ಲಿ ಮೊದಲ ಅಂತರ-ರಾಜ್ಯ ಮೆಟ್ರೋ ಸಂಪರ್ಕ ಕಲ್ಪಿಸಲಿದೆ.
1/10
Share
Bengaluru- Hosur Metro: ಬೆಂಗಳೂರು-ಹೊಸೂರು ಮೆಟ್ರೋದ ಕಾರ್ಯಸಾಧ್ಯತೆಯ ಅಧ್ಯಯನಕ್ಕೆ ಕೇಂದ್ರವು ಅನುಮೋದನೆ ನೀಡಿದೆ. ತಮಿಳುನಾಡು ಸರ್ಕಾರವು ಕಾರ್ಯಸಾಧ್ಯತೆಯ ಅಧ್ಯಯನಕ್ಕಾಗಿ ಸಂಪೂರ್ಣ ಹಣವನ್ನು ವಿನಿಯೋಗಿಸುತ್ತಿದೆ.
2/10
Share
Bengaluru- Hosur Metro: ಪ್ರಮುಖ ಕಂಪನಿಗಳಾದ ಟಿವಿಎಸ್ ಮೋಟಾರ್ಸ್, ಅಶೋಕ್ ಲೇಲ್ಯಾಂಡ್, ಟೈಟಾನ್, ಸುಂದರಂ ಕ್ಲೇಟನ್, ಹರಿತಾ ಸೀಟಿಂಗ್ಸ್, ಹರಿತಾ ಫೆಹ್ರೆರ್, ಜನರಲ್ ಎಲೆಕ್ಟ್ರಿಕ್, ಕನ್ಸೈ ನೆರೋಲಾಕ್ ಪೇಂಟ್ಸ್, ಮೈಲಾನ್, ಜಿಆರ್ಬಿ ಫುಡ್ಸ್, ಕಮಾಜ್ ವೆಕ್ಟ್ರಾ ಮೋಟಾರ್ಸ್, ಆಲ್ಸ್ಟೋಮ್, ಫೈವ್ಲೆ ಟ್ರಾನ್ಸ್ಪೋರ್ಟ್, ಕ್ಯಾಟರ್ಪಿಲ್ಲರ್ ಇಂಕ್., ಕಾರ್ಬೊರಂಡಮ್ ಇನ್ಕ್ವೆರ್ಸ್ ಲಿಮಿಟೆಡ್, ಹಿಂದೂಸ್ತಾನ್ ಮೋಟಾರ್ಸ್ ಹೊಸೂರಿನಲ್ಲಿವೆ.
3/10
Share
Bengaluru- Hosur Metro: ಬೆಂಗಳೂರಿನಿಂದ ಹೊಸೂರಿಗೆ ಈಗಾಗಲೇ ರೈಲು ಹಾಗೂ ರಸ್ತೆ ಸಂಪರ್ಕವಿದೆ. ಪ್ರತಿ ಸಾವಿರಾರು ಜನರು ಈ ಎರಡೂ ನಗರಗಳ ನಡುವೆ ಸಂಚರಿಸುತ್ತಾರೆ. ಬೆಂಗಳೂರಿನ ದಕ್ಷಿಣ ಭಾಗದಿಂದ ನಲವತ್ತು ಕಿಮೀ ದೂರದಲ್ಲಿದೆ. ಹಲವಾರು ಪ್ರಮುಖ ಉತ್ಪಾದನಾ ಕೈಗಾರಿಕೆಗಳಿಗೆ ಹೊಸೂರು ನೆಲೆಯಾಗಿದೆ.
4/10
Share
ಯೋಜನೆಯು ರೂಪುಗೊಂಡರೆ, ದಕ್ಷಿಣ ಭಾರತದಲ್ಲಿ ಮೊದಲ ಅಂತರ-ರಾಜ್ಯ ಮೆಟ್ರೋ ಸಂಪರ್ಕವಾಗಲಿದೆ. ಲೋಕಸಭೆಯಲ್ಲಿ ಮೆಟ್ರೊ ಸಂಪರ್ಕದ ಕುರಿತು ಪ್ರಸ್ತಾಪಿಸಿದ ಕೃಷ್ಣಗಿರಿ ಸಂಸದ ಡಾ.ಎ.ಚೆಲ್ಲಕುಮಾರ್ ಅವರು, ಹೊಸೂರಿನಿಂದ ಬೆಂಗಳೂರಿಗೆ ನಿತ್ಯ ಸಂಚರಿಸುವ ಸಾವಿರಾರು ಪ್ರಯಾಣಿಕರ ಪಾಲಿಗೆ ಇದೊಂದು ಕನಸಿನ ಯೋಜನೆಯಾಗಿದೆ ಎಂದು ಹೇಳಿದ್ದಾರೆ.
5/10
Share
Bengaluru- Hosur Metro: ನಂತರ ತಮಿಳುನಾಡು ಸರ್ಕಾರವು ಸಿಎಂಆರ್ಎಲ್ಗೆ ಕಾರ್ಯಸಾಧ್ಯತಾ ಅಧ್ಯಯನ ಮಾಡಲು ವಿನಂತಿಸಿತು. ಪ್ರಸ್ತುತ ಬೊಮ್ಮಸಂದ್ರ ಮೆಟ್ರೊ ನಿಲ್ದಾಣದಿಂದ ಹೊಸೂರುವರೆಗೆ ಹೊಸ ಮಾರ್ಗ ನಿರ್ಮಾಣವಾಗಲಿದೆ. ಇದ ಅಧ್ಯಯನಕ್ಕೀಗ ಆರಂಭ ದೊರಕಿದೆ.
6/10
Share
Bengaluru- Hosur Metro: ಕರ್ನಾಟಕ ಸರ್ಕಾರವು 2022 ರಲ್ಲಿ MoHUA ಗೆ ಪತ್ರ ಬರೆದು ಯೋಜನೆಗೆ ತನ್ನ ಬೆಂಬಲವನ್ನು ವ್ಯಕ್ತಪಡಿಸಿತು. ಇದು ಹೊಸೂರು ಮತ್ತು ಬೆಂಗಳೂರು ನಡುವೆ ಲಕ್ಷಾಂತರ ಜನರಿಗೆ ಪ್ರಯಾಣಿಸಲು ಸುಲಭವಾಗುತ್ತದೆ.
7/10
Share
Bengaluru- Hosur Metro: ತಮಿಳುನಾಡು ಸರ್ಕಾರದ ಪ್ರಕಾರ, ಹೊಸೂರು ಮತ್ತು ಬೆಂಗಳೂರು ನಡುವಿನ ಮೆಟ್ರೋ ಸಂಪರ್ಕವು 2,000 ಕ್ಕೂ ಹೆಚ್ಚು ಕಂಪನಿಗಳಿಗೆ ನೆಲೆಯಾಗಿರುವ ಕೈಗಾರಿಕಾ ಪಟ್ಟಣದ ( ಹೊಸೂರು) ಬೆಳವಣಿಗೆ ಮತ್ತಷ್ಟು ಉತ್ತೇಜಿಸಲಿದೆ.
8/10
Share
Bengaluru- Hosur Metro: ಈ ಮೆಟ್ರೋ ಸಂಪರ್ಕಕ್ಕಾಗಿ ಯೋಜಿಸಿದ ಮಾರ್ಗವು 20.5 ಕಿಮೀ ಉದ್ದವಿದ್ದು, ಕರ್ನಾಟಕದಲ್ಲಿ 11.7 ಕಿಮೀ ಮತ್ತು ಉಳಿದ 8.8 ಕಿಮೀ ತಮಿಳುನಾಡಿನಲ್ಲಿ ಬರುತ್ತದೆ. CMRL ಕಾರ್ಯಸಾಧ್ಯತೆಯ ಅಧ್ಯಯನಕ್ಕೆ ವೆಚ್ಚವನ್ನು ಭರಿಸಲಿದೆ.
9/10
Share
Bengaluru- Hosur Metro: ಬೆಂಗಳೂರು ಮತ್ತು ಹೊಸೂರು ನಡುವೆ ಮೆಟ್ರೋ ಸಂಪರ್ಕವನ್ನು ನಿರ್ಮಿಸುವ ಕಾರ್ಯಸಾಧ್ಯತೆಯನ್ನು ಅಧ್ಯಯನ ಮಾಡಲು ತಮಿಳುನಾಡು ಸರ್ಕಾರ ಅನುಮತಿ ಕೋರಿತ್ತು. CMRL ನ ಮನವಿಗೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ (MoHUA) ಅನುಮೋದನೆ ನೀಡಿದ ಪರಿಣಾಮವಾಗಿ ಅಧ್ಯಯನ ಶುರುವಾಗಿದೆ.


Click it and Unblock the Notifications