Home / Photos
ಬೆಂಗಳೂರು- ಚೆನ್ನೈ ಎಕ್ಸ್ಪ್ರೆಸ್ವೇ: 262 ಕಿಮೀ ಮೆಗಾ ಯೋಜನೆ- ಎಷ್ಟು ಸಮಯ ಉಳಿತಾಯ? ಎಷ್ಟು ವೆಚ್ಚ, ಮಾಹಿತಿ, ಅಂಕಿಅಂಶ
ಬೆಂಗಳೂರು-ಚೆನ್ನೈ ನಡುವಿನ ಎಕ್ಸ್ಪ್ರೆಸ್ವೇ ಮಾರ್ಚ್ 2024 ರ ವೇಳೆಗೆ ಕಾರ್ಯಾರಂಭ ಮಾಡುವ ಸಾಧ್ಯತೆಯಿದೆ
1/15
Share
Bengaluru Chennai Expressway: ಉಕ್ಕಿನ ಉತ್ಪಾದನೆಯ ಸಂದರ್ಭದಲ್ಲಿ ಪಡೆಯಲಾಗಿರುವ ಉಪಉತ್ಪನ್ನ ಗ್ರ್ಯಾನ್ಯುಲೇಟೆಡ್ ಬ್ಲಾಸ್ಟ್ ಫರ್ನೇಸ್ ಸ್ಲ್ಯಾಗ್ ಅನ್ನು ಎಕ್ಸ್ಪ್ರೆಸ್ವೇ ನಿರ್ಮಾಣದಲ್ಲಿ ಬಳಸಲಾಗುತ್ತಿದೆ. ಗ್ರ್ಯಾನ್ಯುಲೇಟೆಡ್ ಬ್ಲಾಸ್ಟ್ ಫರ್ನೇಸ್ ಸ್ಲ್ಯಾಗ್ ಎಂಬುದು ಬ್ಲಾಸ್ಟ್ ಫರ್ನೇಸ್ಗಳಲ್ಲಿ ಕಬ್ಬಿಣದ ಅದಿರಿನಿಂದ ಕಬ್ಬಿಣವನ್ನು ಬೇರ್ಪಡಿಸುವ ಸಮಯದಲ್ಲಿ ಪಡೆದ ಸ್ಲ್ಯಾಗ್ ಆಗಿದೆ. ಇದನ್ನು ನೀರಿನ ಜೆಟ್ಗಳೊಂದಿಗೆ ತಂಪುಗೊಳಿಸಲಾಗುತ್ತದೆ.
2/15
Share
Bengaluru Chennai Expressway: ಮೂರು ರಾಜ್ಯಗಳಲ್ಲಿ ಕೈಗಾರಿಕಾ ಅಭಿವೃದ್ಧಿ ಮತ್ತು ವಾಣಿಜ್ಯ ನಿರ್ಮಾಣವನ್ನು ಎಕ್ಸ್ಪ್ರೆಸ್ವೇ ಉತ್ತೇಜಿಸತ್ತದೆ ಎಂದು ನಿರೀಕ್ಷಿಸಲಾಗಿದೆ. ಹೆಚ್ಚಿನ ಮೌಲ್ಯದ ಕೈಗಾರಿಕಾ ಉತ್ಪಾದನೆ ಮತ್ತು ಉದ್ಯೋಗದ ಉತ್ಪಾದನೆಗೆ ಕೊಡುಗೆ ನೀಡುತ್ತದೆ ಎಂದು ಹೇಳಲಾಗಿದೆ.
3/15
Share
Bengaluru Chennai Expressway: ಪ್ರವೇಶ-ನಿಯಂತ್ರಿತ, ಸಿಗ್ನಲ್-ಮುಕ್ತ, ಎಲಿವೇಟೆಡ್ ಎಕ್ಸ್ಪ್ರೆಸ್ವೇ ಅನ್ನು ಮೂಲತಃ ಆಗಸ್ಟ್ 2024 ರೊಳಗೆ ಪೂರ್ಣಗೊಳಿಸಲು ಯೋಜಿಸಲಾಗಿತ್ತು. ಇದನ್ನು ಆದ್ಯತೆಯ ಮೇರೆಗೆ ಮಾರ್ಚ್ 2024 ರೊಳಗೆ ಪೂರ್ಣಗೊಳಿಸುವ ಸಾಧ್ಯತೆ ಇದೆ.
4/15
Share
Bengaluru Chennai Expressway: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮೂರು ಹಂತಗಳಲ್ಲಿ ಮತ್ತು 10 ಪ್ಯಾಕೇಜ್ಗಳಲ್ಲಿ ಈ ರಸ್ತೆಯನ್ನು ನಿರ್ಮಿಸುತ್ತಿದೆ.
5/15
Share
Bengaluru Chennai Expressway: ಇದು ನಾಲ್ಕು-ಲೇನಿನ ಡಬಲ್ ಡೆಕ್ಕರ್ ಎಲಿವೇಟೆಡ್ ಎಕ್ಸ್ಪ್ರೆಸ್ವೇ ಆಗಿದೆ. ಇದು ಎಂಟು ಪ್ರಮುಖ ಸೇತುವೆಗಳು, 103 ಸಣ್ಣ ಸೇತುವೆಗಳು ಮತ್ತು 17 ಫ್ಲೈಓವರ್ಗಳನ್ನು ಒಳಗೊಂಡಿರುತ್ತದೆ.
6/15
Share
Bengaluru Chennai Expressway: ಇದು ಸಣ್ಣಕಣಗಳಾಗಿ ಬದಲಾಗುತ್ತದೆ. ಆ ನಂತರ ಪುಡಿಯಾಗುತ್ತದೆ. ಇದು ಹಸಿರು ಎಕ್ಸ್ಪ್ರೆಸ್ವೇಗೆ ಹೇಳಿಮಾಡಿಸಿದ ವಸ್ತುವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ, ಇದು ಕಾರ್ಬನ್ ಡೈಆಕ್ಸೈಡ್ ಅನ್ನು ಸಾಕಷ್ಟು ಕಡಿಮೆ ಮಾಡುತ್ತದೆ ಎಂದು ತಜ್ಞರು ಹೇಳಿದ್ದಾರೆ.
7/15
Share
Bengaluru Chennai Expressway: ಎಕ್ಸ್ಪ್ರೆಸ್ವೇ ಒಟ್ಟಾರೆ ವೆಚ್ಚವನ್ನು 17,000 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಬೆಂಗಳೂರು-ಮಾಲೂರು ವಿಭಾಗಕ್ಕೆ ಮಾತ್ರ 1,160 ಕೋಟಿ ರೂಪಾಯಿ ವೆಚ್ಚವಾಗಲಿದೆ. 2022 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಯೋಜನೆಗೆ ಚಾಲನೆ ನೀಡಿದ್ದಾರೆ.
8/15
Share
Bengaluru Chennai Expressway: ಮಾಲೂರು, ಬಂಗಾರಪೇಟೆ, ಕೋಲಾರ, ವೆಂಕಟಗಿರಿ ಕೋಟಾ, ಪಲಮನೇರ್, ಬಂಗಾರುಪಾಲೆಂ, ಚಿತ್ತೂರು ಮತ್ತು ರಾಣಿಪೇಟೆ ಮೂಲಕ ಎಕ್ಸ್ಪ್ರೆಸ್ವೇ ಹಾದು ಹೋಗಲಿದೆ.
9/15
Share
Bengaluru Chennai Expressway: ನಿರ್ಮಾಣ ಹಂತದಲ್ಲಿರುವ ಎಕ್ಸ್ಪ್ರೆಸ್ವೇ ಅಸ್ತಿತ್ವದಲ್ಲಿರುವ ಎರಡು ಹೆದ್ದಾರಿಗಳ ನಡುವೆ ಹಾದುಹೋಗುತ್ತದೆ. ಬೆಂಗಳೂರಿನ ಹೊರವಲಯದಲ್ಲಿರುವ ಹೊಸಕೋಟೆಯಲ್ಲಿ ಆರಂಭವಾಗಿ, ಚೆನ್ನೈ ಹೊರಗಿನ ಶ್ರೀಪೆರಂಬದೂರಿನಲ್ಲಿ ಇದು ಕೊನೆಗೊಳ್ಳುತ್ತದೆ.


Click it and Unblock the Notifications