Home / Photos
Assam Train Accident: ಹಳಿತಪ್ಪಿದ ಅಗರ್ತಲಾ-ಲೋಕಮಾನ್ಯ ತಿಲಕ್ ಎಕ್ಸ್ಪ್ರೆಸ್ ರೈಲು
ಕಳೆದ ಚೆನ್ನೈ ಉಪನಗರದಲ್ಲಿ ರೈಲು ಅಪಘಾತ ಬೆನ್ನಲ್ಲೆ ಅಸ್ಸಾಂ ನಲ್ಲಿ ಮತ್ತೊಂದು ರೈಲು ಅಪಘಾತ ಸಂಭವಿಸಿದೆ. ಎಂಟು ಬೋಗಿಗಳು ಹಳಿಯಿಂದ ಜಾರಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ.
1/6
Share
ತ್ರಿಪುರಾದಿಂದ ಎಂದಿನಂತೆ ಮುಂಬೈಗೆ ಪ್ರಯಾಣ ಬೆಳೆಸಿದ್ದ ಅಗರ್ತಲಾ-ಲೋಕಮಾನ್ಯ ತಿಲಕ್ ಎಕ್ಸ್ಪ್ರೆಸ್ ರೈಲು ಹಳಿತಪ್ಪಿ ಬಿದ್ದ ಘಟನೆ ಅಸ್ಸಾಂ ನಲ್ಲಿ ಗುರುವಾರ ಸಂಜೆ ಸುಮಾರು 4 ಗಂಟೆಗೆ ನಡೆದಿದೆ. ಈ ವಾರದಲ್ಲಿ ದಾಖಲಾದ ಎರಡನೇ ರೈಲು ದುರಂತ ಇದಾಗಿದೆ.
2/6
Share
ವೇಗವಾಗಿ ಬಂದ ರೈಲು ಅಸ್ಸಾಂನ ದಿಬೋಲಾಂಗ್ ನಿಲ್ದಾಣ ಬಳಿಕ ಹಳಿಯಿಂದ ಹೊರಕ್ಕೆ ಉರುಳಿದೆ. ಇಂಜಿನ್ ಸೇರಿ ಒಟ್ಟು ಎಂಟು ಬೋಗಿಗಳು ಹಳಿ ತಪ್ಪಿವೆ. ಅದೃಷ್ಟವಶಾತ್ ದುರಂತದಲ್ಲಿ ಯಾರಿಗೆ ಪ್ರಾಣ ಹಾನಿಯಾಗಿಲ್ಲ ಎಂದು ವರದಿ ಆಗಿದೆ. ಚಿಕ್ಕಪುಟ್ಟ ಗಾಯಗಳು ಆಗಿರಬಹುದು ಎನ್ನಲಾಗಿದೆ. ಸ್ಥಳಕ್ಕೆ ಸಂಬಂಧಿಸಿದಂತೆ ರೈಲ್ವೆ ವಿಭಾಗಾಧಿಕಾರಿಗಳು, ರೈಲ್ವೆ ಪೊಲೀಸರು ದೌಡಾಯಿಸಿ ಪರಿಸ್ಥಿತಿ ಪರಿಶೀಲಿಸಿದ್ದಾರೆ.
3/6
Share
ಗುರುವಾರ ಬೆಳಗ್ಗೆ ಅಗರ್ತಲಾದಿಂದ ಮುಂಬೈನತ್ತ ರೈಲು ಪ್ರಯಾಣ ಬೆಳೆಸಿತ್ತು. ನೋಡ ನೋಡುತ್ತಿದ್ದಂತೆ ಇಂಜಿನ್ ಸೇರಿ ಒಂದೊಂದಾಗೇ ಬೋಗಿಗಳು ಹಳಿಯಿಂದ ಜರಿದವು. ರೈಲಿನ ವೇಗ ದಿಢೀರ್ ಕಡಿಮೆ ಆಗಿ ಬ್ರೇಕ್ ಹಾಕಿದ ಅನುಭವ ಆಗುತ್ತಿದ್ದಂತೆ ಒಳಗಿದ್ದ ಪ್ರಯಾಣಿಕರು ಕೆಲ ಕಾಲ ಆತಂಕಕ್ಕೆ ಒಳಗಾದರು.
4/6
Share
ಅಗರ್ತಲಾ- ಲೋಕಮಾನ್ಯ ತಿಲಕ್ ಎಕ್ಸ್ಪ್ರೆಸ್ ರೈಲು ಹಳಿ ತಪ್ಪಿದ ಬಳಿಕ ಈ ಮಾರ್ಗದಲ್ಲಿ ಓಡಾಡುವ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಶೀಘ್ರವೇ ಈ ಎಕ್ಸ್ಪ್ರೆಸ್ ರೈಲು ಬೋಗಿಗಳನ್ನು ತೆರವು ಗೊಳಿಸಿ ಸಂಚಾರ ಸುಗಮಗೊಳಿಸುವಲ್ಲಿ ರೈಲ್ವೆ ಅಧಿಕಾರಿಗಳು, ಸಿಬ್ಬಂದಿ ನಿರತರಾಗಿದ್ದಾರೆ.
5/6
Share
ಇತ್ತೀಚೆಗೆ ಚೆನ್ನೈ ಉಪನಗರದಲ್ಲಿ ಬೆಂಗಳೂರಿನಿಂದ ಹೊಗಿದ್ದ ಮೈಸೂರು ಧರ್ಬಾಂಗ್ ಎಕ್ಸ್ಪ್ರೆಸ್ ರೈಲು ಅಪಘಾತಕ್ಕೆ ಈಡಾಗಿತ್ತು. ನಿಂತಿದ್ದ ಗೂಡ್ಸ್ ರೈಲಿಗೆ ಹಿಂದಿನಿಂದ ಹೋಗಿ ಡಿಕ್ಕಿ ಹೊಡೆದಿತ್ತು. ಇದಕ್ಕೆ ಸಿಗ್ನಲ್ ಲೋಪದೋಷ ಕಾರಣ ಎನ್ನಲಾಗಿದೆ. ಇದರ ಬೆನ್ನಲ್ಲೆ ಮತ್ತೊಂದು ರೈಲು ಅವಘಡ ನಡೆಯಲು ಕಾರಣವೇನು ಎಂಬುದು ಗೊತ್ತಾಗಬೇಕಿದೆ.
6/6
Share
ಸದ್ಯ ಹಳಿತಪ್ಪಿದ ಅಗರ್ತಲಾ- ಲೋಕಮಾನ್ಯ ತಿಲಕ್ ಎಕ್ಸ್ಪ್ರೆಸ್ ರೈಲು ಅಪಘಾತ ಪ್ರಕರಣದಿಂದ ರೈಲ್ವೆ ಇಲಾಖೆಗೆ ತಲೆ ಬಿಸಿಯಾಗಿದೆ. ಪದೇ ಪದೇ ಇಂತಹ ಘಟನೆಗಳು ಮರುಕಳಿಸುತ್ತಿರುವುದಕ್ಕೆ ನಿಖರ ಕಾರಣ ಪತ್ತೆ ಮಾಡಲು ಇಲಾಖೆ ಸಜ್ಜಾಗಿದೆ. ಇಂದಿನ ಘಟನೆ ಬಗ್ಗೆ ಶೀಘ್ರವೇ ತನಿಖೆ ನಡೆಸಿ ಕಾರಣ ತಿಳಿಸಲು ಸರ್ಕಾರ ಸೂಚನೆ ನೀಡಿದೆ ಎನ್ನಲಾಗಿದೆ.


Click it and Unblock the Notifications