ಉಡುಪಿಯ ಪ್ರಸಿದ್ಧ ಅನಂತೇಶ್ವರ ದೇವಸ್ಥಾನದ ವಾರ್ಷಿಕ ಉತ್ಸವ
ಅದರೊಳಗೆ ಪುರಾತನ ಮಾದರಿಯ ಒಂದು ಸುತ್ತಿನ ಪೌಳಿ ಇದೆ. ಗರ್ಭ ಗುಡಿಯಿಂದ ಹೊರ ಬಂದರೆ ಅನೆಕಲ್ಲಿನ ಮಾದರಿಯ ಮೆಟ್ಟಿಲುಗಳು, ಹೊರಗೆ ಮತ್ತೆ ಅತಿ ವಿಶಾಲವಾದ ಪ್ರದಕ್ಷಿಣೆ ಬೀದಿ ಇದೆ.
ಈ ದೇವಾಲಯವು ಅತಿ ವಿಶಾಲವಾಗಿ ಹಜಪೃಷ್ಠಾಕಾರದ ಅಥವಾ ಇಂಗ್ಲಿಷಿನ ಖೀ ಅಕ್ಷರದ ಮಾದರಿಯಲ್ಲಿದೆ. ದೇವಾಲಯದೊಳಗೆ ಪ್ರವೇಶಿಸುತ್ತಿದ್ದಂತೆ ಸುಂದರವಾದ ಹಳೆಯ ವಾಸ್ತುಕಲೆಯ ಭವ್ಯತೆಯು ಕಾಣಸಿಗುತ್ತದೆ.
ಇದು ಉಡುಪಿಯ ಅತ್ಯಂತ ಪ್ರಾಚೀನ ದೇವಸ್ಥಾನ. ಇಲ್ಲಿ ಆರಾಧನೆಗೊಳ್ಳುತ್ತಿರುವ ಮುಖ್ಯ ದೇವತೆ ಅನಂತೇಶ್ವರನ ರೂಪದಲ್ಲಿರುವ ಶ್ರೀನಾರಾಯಣ. ಅನಂತ ಅಂದರೆ ಶೇಷ, ಅನಂತೇಶ್ವರಂದರೆ ಶೇಷ ಶಯನನಾದ ನಾರಾಯಣ.
ಅನಂತೇಶ್ವರ ಉಡುಪಿಯ ಪುರ ಜನರಿಗೆ ಪ್ರೀತಿಯ ಅಜ್ಜನಾಗಿ ಕಾಣಿಸಿಕೊಮಡರೆ, ಶಿವಳ್ಳಿ ಜನಾಂಗದ ಗ್ರಾಮದೇವತೆಯಾಗಿ ಗುರುಸತಿಸಿಕೊಂಡ ದೈವವೂ ಹೌದು.
ಈ ದೇವಾಲಯ ಹಿಂದೆ ಪಡು ದೇವಾಲಯವೆಂದು ಕರೆಯಲ್ಪಟ್ಟಿದೆ. ಒಂದು ನಂಬಿಕೆಯ ಪ್ರಕಾರ, ಪಾಂಡವರು ತಮ್ಮ ವನವಾಸದ ಅವಧಿಯಲ್ಲಿ ಈ ದೇವಾಲಯ ನಿರ್ಮಿಸಿದರೆಂದು ಹೇಳಲಾಗುತ್ತದೆ.
ಅನಂತೇಶ್ವರನನ್ನು ಅನಂತಾಸನ, ಅನಂತ ಪದ್ಮನಾಭ ಎಂತಲೂ ಕರೆಯುತ್ತಿದ್ದರು. ಇಲ್ಲಿ ಅನಂತೇಶ್ವರನು ಲಿಂಗದ ರೂಪದಲ್ಲಿ ಪೂಜೆಗೊಳ್ಳುತ್ತಿರುವುದು ವಿಶೇಷ.


Click it and Unblock the Notifications