Home / Photos
Anausuya Bharadwaj: ಫೋಟೋ ಶೂಟ್ನಲ್ಲಿ ಮಿಂಚಿಸುತ್ತಿರುವ 'ಪುಷ್ಪ' ಸಿನಿಮಾ ಖ್ಯಾತಿಯ 'ಅನಸೂಯಾ'
ತೆಲುಗು ಚಿತ್ರರಂಗದಲ್ಲಿ ನಿರೂಪಕಿಯಾಗಿ ಗುರುತಿಸಿಕೊಂಡು ನಂತರ 'ಪುಷ್ಪ' ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡ ನಟಿ ಅನಸೂಯಾ ಭಾರದ್ವಾಜ್ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇದು ಅವರ ಹೊಸ ಫೋಟೊ ಶೂಟ್ನ ಫೋಟೊಗಳಾಗಿವೆ.
1/6
Share
ತೆಲುಗು ಚಿತ್ರರಂಗದಲ್ಲಿ ನಿರೂಪಕಿಯಾಗಿ ಗುರುತಿಸಿಕೊಂಡು ನಂತರ ಹಲವು ಸಿನಿಮಾಗಳಲ್ಲಿ ನಟಿ ಅನಸೂಯಾ ಭಾರದ್ವಾಜ್ (Anasuya Bharadwaj) ನಟಿಸಿದ್ದಾರೆ. 'ಪುಷ್ಪ' (Pushpa film) ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡ ಅವರು ಇತ್ತೀಚಿನ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
2/6
Share
ತೆಲುಗಿನ ಸ್ಟಾರ್ ನಟಿ ಅಲ್ಲು ಅರ್ಜುನ್ (Allu Arjun) ನಟನೆಯ 'ಪುಷ್ಪ' ಸಿನಿಮಾದಲ್ಲಿ ನಟಿ ಅನಸೂಯಾ ನಟನೆಯನ್ನು ಪ್ರೇಕ್ಷಕರು ಮೆಚ್ಚಿದ್ದಾರೆ. ಇದೀಗ ಅವರ ಕೈಯಲ್ಲಿ ಸಾಕಷ್ಟು ಸಿನಿಮಾಗಳು ಇವೆ ಎನ್ನಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಅನಸೂಯಾ ಅವರು ಹೊಸ ಫೋಟೋ ಶೂಟ್ ಮಾಡಿದ್ದಾರೆ.
3/6
Share
ತೆಲುಗಿನ ಬಹುನಿರೀಕ್ಷೆಯ 'ಪುಷ್ಪಾ-2' (Pushpa -2) ನಲ್ಲೂ ನಟಿ ಅನಸೂಯಾ ಭಾರದ್ವಾಜ್ ನಟಿಸುತ್ತಿದ್ದಾರೆ. ಈ ಸಿನಿಮಾ ನಂತರ ಅವರಿಗೆ ಚಿತ್ರರಂಗದಲ್ಲಿ ಸಾಕಷ್ಟು ಅವಕಾಶಗಳು ಬರುತ್ತವೆ. ಈ ಹಿಂದೆ ಒಂದೆರಡು ಭಾರಿ ನಟರ ಕುರಿತು ಅವರು ನೀಡಿದ್ದ ಹೇಳಿಕೆಗಳು ವಿವಾದ ಸೃಷ್ಟಿಸಿದ್ದು ಉಂಟು.
4/6
Share
ಸಿನಿಮಾ ರಂಗದ ಜತೆಗೆ ಪತಿ ಮತ್ತು ಮಕ್ಕಳಿಗೂ ಹೆಚ್ಚು ಸಮಯ ಕೊಡುವ ನಟಿ ಅನಸೂಯಾ ಆಗಾಗ ಕುಟುಂಬದ ಜತೆ ಟ್ರಾವೆಲ್ ಮಾಡುತ್ತಾರೆ. ಈ ಹಿಂದೆ ಬೀಚ್ನಲ್ಲಿನ ನಟಿ ಮತ್ತವರ ಪತಿಯ ಫೋಟೊಗಳು ವೈರಲ್ ಆಗಿದ್ದವು. ತಮ್ಮ ನಟನೆ, ಸೌಂದರ್ಯದ ಮೂಲಕವೇ ಸಾಕಷ್ಟು ಅಭಿಮಾನಿಗಳನ್ನು ಅನಸೂಯ ಅವರು ಸಂಪಾದಿಸಿದ್ದಾರೆ.
5/6
Share
ನಟಿ ಅನಸೂಯಾ ಅವರು ಇನ್ಸ್ಸ್ಟಾಗ್ರಾಮ್, ಫೇಸ್ಬುಕ್ ನಲ್ಲಿ ಹೊಸ ಫೋಟೊಗಳನ್ನು ಶೇರ್ ಮಾಡಿದ್ದಾರೆ. ಇದಕ್ಕೆ ಸುಮಾರು 79 ಸಾವಿರ ಮಂದಿ ಲೈಕ್ ಒತ್ತಿದ್ದಾರೆ. ಅವರ ಅಭಿಮಾನಿಗಳು ಫೋಟೊಗಳಿಗೆ ಬ್ಯೂಟಿಫುಲ್, ನೈಸ್, ಕ್ಯೂಟ್ ಎಂದೆಲ್ಲ ಕಾಮೆಂಟ್ ಮಾಡಿದಲ್ಲದ ಹಾರ್ಟ್ ಎಮೋಜಿ ಕಳುಹಿಸಿದ್ದಾರೆ.
6/6
Share
ಇನ್ಸ್ಸ್ಟಾಗ್ರಾಮ್ ಖಾತೆಯಲ್ಲಿ ನಟಿ ಅನಸೂಯಾ ಅವರು ಬರೋಬ್ಬರಿ 1.4 ಫಾಲೋವರ್ಸ್ಗಳನ್ನು ಹೊಂಡಿದ್ದಾರೆ. ಈವರೆಗೆ ಅವರು 2510 ಪೋಸ್ಟ್ ಮಾಡಿದ್ದಾರೆ. ಬಿಡುವಿನ ವೇಳೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ, ಫ್ಯಾಮಿಲಿ ಜತೆಗಿನ ಫೋಟೊಗಳು ಹಂಚಿಕೊಳ್ಳುತ್ತಾರೆ.


Click it and Unblock the Notifications