Home / Photos
Tanisha Kuppanda: ನವಿಲಾದ ಬೆಂಕಿ ತನಿಶಾ ಕುಪ್ಪಂಡ ಬ್ಯೂಟಿಗೆ ಫ್ಯಾನ್ಸ್ ಫುಲ್ ಬೋಲ್ಡ್
By Mamatha M
ಬಿಗ್ ಬಾಸ್ ಸೀಸನ್ ಹತ್ತರ ಸ್ಪರ್ಧಿಯಾಗಿ ದೊಡ್ಮನೆಯಲ್ಲಿ ಬೆಂಕಿ ಎಂದೇ ಹೆಸರು ಪಡೆದವರು ತನಿಶಾ ಕುಪ್ಪಂಡ. ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಅವರು, ಇತ್ತೀಚೆಗೆ ಸುಂದರ ಫೋಟೋ ಶೂಟ್ ಮಾಡಿಸಿದ್ದಾರೆ. ನವಿಲಿನಂತೆ ಕಂಡ ನಟಿಯನ್ನು ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.
1/7
Photo Credit: Tanisha Kuppanda@ instagram
Share
ಕನ್ನಡ ಚಿತ್ರರಂಗ ಮತ್ತು ಕಿರುತೆರೆಯ ಉದಯೋನ್ಮುಖ ತಾರೆ ತನಿಶಾ ಕುಪ್ಪಂಡ. ತನಿಶಾ ಕುಪ್ಪಂಡ ಹಲವಾರು ಟಿವಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕನ್ನಡ ಮತ್ತು ತಮಿಳು ಕಿರುತೆಯಲ್ಲಿ ಕೆಲಸ ಮಾಡುವ ಇವರು, ಹಲವು ತಮಿಳು ಧಾರಾವಾಹಿಗಳಿಗೂ ಬಣ್ಣಹಚ್ಚಿದ್ದಾರೆ. ಜೊತೆಗೆ ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.
2/7
Photo Credit: Tanisha Kuppanda@ instagram
Share
ಕನ್ನಡ 'ಪಾರಿಜಾತ' ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನು ಮಾಡಿದ ನಂತರ, ತನಿಶಾ ಕುಪ್ಪಂಡ ಖ್ಯಾತಿ ಗಳಿಸಿದರು. ನಂತರ, ಅವರು ಮಂಗಳ ಗೌರಿ ಮತ್ತು ಸಾಕ್ಷಿಯಂತಹ ಧಾರಾವಾಹಿಗಳಲ್ಲಿ ಕಾಣಿಸಿಕೊಂಡು ಸಕತ್ ಸುದ್ದಿಯಾದರು. ಜೊತೆ ಜೊತೆಗೆ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದರು.
3/7
Photo Credit: Tanisha Kuppanda@ instagram
Share
ಬಿಗ್ ಬಾಸ್ ಸೀಸನ್ ಹತ್ತರ ಸ್ಪರ್ಧಿಯಾಗಿ ದೊಡ್ಮನೆಯಲ್ಲಿ ಬೆಂಕಿ ಎಂದೇ ಹೆಸರು ಪಡೆದವರು ತನಿಶಾ ಕುಪ್ಪಂಡ. ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಅವರು, ಇತ್ತೀಚೆಗೆ ಸುಂದರ ಫೋಟೋ ಶೂಟ್ ಮಾಡಿಸಿದ್ದಾರೆ. ನವಿಲಿನಂತೆ ಕಂಡ ನಟಿಯನ್ನು ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.
4/7
Photo Credit: Tanisha Kuppanda@ instagram
Share
ತನಿಶಾ ಕುಪ್ಪಂಡ ಪಲ್ಲದ ಮನೆ ಹುಡುಗಿಯ ಹಾಗೆ ಕಾಣಿಸುತ್ತಾರೆ. ಹೀಗಾಗಿಯೇ ಅವರಿಗೆ ಕಿರುತೆರೆಯಲ್ಲಿ ಹೆಚ್ಚು ಅವಕಾಶಗಳಿವೆ. ಜೊತೆಗೆ ಪೆಂಟಗಾನ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸಿನಿಮಾಗಳಲ್ಲಿ ಹೆಚ್ಚಾಗಿ ನಾಯಕಿಯ ಸ್ನೇಹಿತ ಅಥವಾ ಸಹೋದರಿಯಾಗಿ ಕಾಣಿಸಿಕೊಂಡಿದ್ದಾರೆ.
5/7
Photo Credit: Tanisha Kuppanda@ instagram
Share
ಬಿಗ್ ಬಾಸ್ ಮನೆಗೆ ಬರುವ ಮೊದಲು ತನಿಶಾ ಕುಪ್ಪಂಡ ಅವರು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದರು. ಹಳ್ಳಿ ದುನಿಯಾ ಕಾರ್ಯಕ್ರಮ ಅವರಿಗೆ ದೊಡ್ಡ ಹೆಸರು ತಂದಿತ್ತು. ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ಸಾಕಷ್ಟು ಫಾಲೋವರ್ಸ್ ಹೊಂದಿರುವ ಅವರು, ಸಾಮಾಜಿಕ ಮಾಧ್ಯಮದಲ್ಲಿ ಸಕತ್ ಆಕ್ಟಿವ್ ಆಗಿದ್ದಾರೆ. ಜೊತೆಗೆ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ವೀಡಿಯೊಗಳನ್ನು ಅಪ್ಲೋಡ್ ಮಾಡುತ್ತಾರೆ.
6/7
Photo Credit: Tanisha Kuppanda@ instagram
Share
ತನಿಶಾ ಕುಪ್ಪಂಡ ಅವರು ಆಗಸ್ಟ್ 10, 1990 ರಂದು ಕೊಡಗಿನಲ್ಲಿ ಜನಿಸಿದರು. ತನಿಶಾ ಕುಪ್ಪಂಡ ತನ್ನ ಶಾಲಾ ಶಿಕ್ಷಣವನ್ನು ಬೆಂಗಳೂರಿನ ಎಸ್ಆರ್ವಿಎಸ್ ರಾಷ್ಟ್ರೀಯ ಶಾಲೆಯಲ್ಲಿ ಮುಗಿಸಿದರು. ಎನ್ಎಂಕೆಆರ್ವಿ ಮಹಿಳಾ ಕಾಲೇಜಿನಲ್ಲಿ ಬಿಬಿಎಂ ಮುಗಿಸಿ ಬಳಿಕ ಸಿನಿಮಾರಂಗಕ್ಕೆ ಕಾಲಿಟ್ಟಿದ್ದಾರೆ.
7/7
Photo Credit: Tanisha Kuppanda@ instagram
Share
ತನಿಶಾ ಕುಪ್ಪಂಡ ಪದವಿ ಪಡೆದ ನಂತರ ಚಿತ್ರರಂಗಕ್ಕೆ ಕಾಲಿಟ್ಟರು. ತನಿಶಾ ಕುಪ್ಪಂಡ ಅವರು ಕೆಲವು ತಮಿಳು ಚಿತ್ರಗಳಿಗೆ ಆಡಿಷನ್ ನೀಡಿ ಅಲ್ಲಿ ಹಲವಾರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಹೋಟೇಲ್ ಉದ್ಯಮಕ್ಕೆ ಕಾಲಿಟ್ಟಿರುವ ಇವರು ಬೆಂಗಳೂರಿನಲ್ಲಿ ಅಪ್ಪು ಹೆಸರಿನಲ್ಲಿ ಹೋಟೆಲ್ ತೆರೆದಿದ್ದಾರೆ.

Click it and Unblock the Notifications