Home / Photos
Ragini Dwivedi: ಪ್ಯಾಂಟ್ ಬಟನ್ ಹಾಕದ ತುಪ್ಪದ ಬೆಡಗಿ; ರೋಸ್ಟ್ ಮಾಡಿದ ಟ್ರೋಲರ್ಸ್
By Mamatha M
ಸ್ಯಾಂಡಲ್ವುಡ್ ನಟಿ ರಾಗಿಣಿ ದ್ವಿವೇದಿ ಮತ್ತೆ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಸಕತ್ ಆಕ್ಟಿವ್ ಆಗಿದ್ದಾರೆ. ಆಗ್ಗಾಗೆ ಸೋಶಿಯಲ್ ಮೀಡಿಯಾದಲ್ಲಿ ಹಾಟ್ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.
1/6
Share
ತುಪ್ಪದ ಬೆಡಗಿ ಎಂದು ಕರೆಸಿಕೊಳ್ಳುವ ನಟಿ ರಾಗಿಣಿ ದ್ವಿವೇದಿ ಹೊಸ ಪೋಟೋಶೂಟ್ ಮಾಡಿಸಿದ್ದಾರೆ. ಫೋಟೋಗಳಲ್ಲಿ ಸಕತ್ ಹಾಟ್ ಆಗಿ ಕಾಣಿಸುತ್ತಿರುವ ಅವರು, ತಮ್ಮ ಪ್ಯಾಂಟ್ ಬಟನ್ ಹಾಗೆಯೇ ಬಿಟ್ಟಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ.
2/6
Photo Credit: Rragini Dwivedi@instagram
Share
ತುಪ್ಪದ ಬೆಡಗಿ ಎಂದರೆ ತಟ್ಟನೆ ನೆನಪಾಗುವುದು ರಾಗಿಣಿ ದ್ವಿವೇದಿ. ತಮ್ಮ ದೇಹವನ್ನು ಫಿಟ್ ಆಗಿ ಇರಿಸಿಕೊಂಡಿರುವ ಅವರು, ಜೀನ್ಸ್ ಪ್ಯಾಂಟ್, ಕ್ರಾಪ್ ಟಾಪ್ ತೊಟ್ಟು ಕ್ಯಾಮರಾಗೆ ಫೋಸ್ ನೀಡಿದ್ದಾರೆ. ಇಲ್ಲೊಂದು ಟ್ವಿಸ್ಟ್ ಎಂದರೆ ಜೀನ್ಸ್ ಪ್ಯಾಂಟ್ ಬಟನ್ ತೆಗೆದು ಮಾದಕ ನೋಟ ಬೀರಿದ್ದಾರೆ.
3/6
Photo Credit: Rragini Dwivedi@instagram
Share
ನಟಿ ರಾಗಿಣಿ ದ್ವಿವೇದಿ ಅವರ ಬೋಲ್ಡ್ನೆಸ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಬಿಂದಾಸ್ ಫೋಟೊಗಳಿಗೆ ತರಹೇವಾರಿ ಕಾಮೆಂಟುಗಳು ಬರುತ್ತಿವೆ. ಹಲವರು ಕೆಟ್ಟ ಕಾಮೆಂಟ್ಗಳ ಮೂಲಕ ಸಕತ್ ಟ್ರೋಲ್ ಮಾಡುತ್ತಿದ್ದಾರೆ. ಮತ್ತಷ್ಟು ಜನ ಪೋಟೋಗಳನ್ನು ಹಂಚಿಕೊಂಡು ವೈರಲ್ ಮಾಡುತ್ತಿದ್ದಾರೆ.
4/6
Photo Credit: Rragini Dwivedi@instagram
Share
ಸ್ಯಾಂಡಲ್ವುಡ್ನಲ್ಲಿ ವೀರ ಮದಕರಿ ಸಿನಿಮಾ ಮೂಲಕ ಕಾಲಿಟ್ಟ ನಟಿ ರಾಗಿಣಿ ದ್ವಿವೇದಿ, ಕೆಂಪೇಗೌಡ ಸಿನಿಮಾ ಮೂಲಕ ಖ್ಯಾತಿ ಗಳಿಸಿದರು. ಕಿಚ್ಚ ಸುದೀಪ್ ಅವರ ಜೋಡಿಯಾಗಿ ಚಿತ್ರರಂಗಕ್ಕೆ ಬಂದ ಅವರು, ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಡ್ರಗ್ಸ್ ಪ್ರಕರಣದ ಬಳಿಕ ಸಿನಿಮಾಗಳು ಕಡಿಮೆಯಾಗಿವೆ.
5/6
Photo Credit: Rragini Dwivedi@instagram
Share
ಮೂರು ವರ್ಷಗಳ ಹಿಂದಿನ ಡ್ರಗ್ಸ್ ಪ್ರಕರಣ ಸೇರಿ ಸಾಕಷ್ಟು ಏಳು ಬೀಳುಗಳನ್ನು ಕಂಡಿರುವ ನಟಿ ರಾಗಿಣಿ ದ್ವಿವೇದಿ ಅವರ ಅಭಿಮಾನಿ ಬಳಗ ಕೂಡ ದೊಡ್ಡದಿದೆ. ಅವರಿಗೆ ಇನ್ಸ್ಟಾಗ್ರಾಮ್ನಲ್ಲಿ ಒಂಬತ್ತು ಲಕ್ಷದ ಹತ್ತಿರಕ್ಕೆ ಫಾಲೋವರ್ಸ್ ಇದ್ದಾರೆ. ಇತ್ತೀಚೆಗೆ ಹೆಚ್ಚು ಫೋಟೋಶೂಟ್ಗಳನ್ನು ಮಾಡಿಸಿ ಫೋಟೋ ಶೇರ್ ಮಾಡುತ್ತಾರೆ.
6/6
Photo Credit: Rragini Dwivedi@instagram
Share
ಜಟ್ಟ ಮತ್ತು ಮೈತ್ರಿಯಂತಹ ಚಿತ್ರಗಳಿಗೆ ಹೆಸರುವಾಸಿಯಾದ ನಿರ್ದೇಶಕ ಬಿಎಂ ಗಿರಿರಾಜ್ ಅವರ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾಗೆ ನಟಿ ರಾಗಿಣಿ ದ್ವಿವೇದಿ ಆಯ್ಕೆಯಾಗಿದ್ದಾರೆ. ಮೇ 24 ರಂದು ನಟಿಯ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರದ ಪಾತ್ರವರ್ಗ, ಕಥಾವಸ್ತು ಮತ್ತು ಫಸ್ಟ್ ಲುಕ್ ಪೋಸ್ಟರ್ಗೆ ಸಂಬಂಧಿಸಿದ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಾಗುತ್ತದೆ.


Click it and Unblock the Notifications