Home / Photos
Radhika Pandit: ನೀವೊಮ್ಮೆ ಕಮೆಂಟ್ಸ್ನ ನೋಡಬಾರದೆ? ರಾಧಿಕಾ ಪಂಡಿತ್ಗೆ ಫ್ಯಾನ್ ಹೀಗೆ ಕೇಳಿದ್ಯಾಕೆ?
By Mallika P
ನಟಿ ರಾಧಿಕಾ ಪಂಡಿತ್ ಹೊಸ ಫೋಟೋಶೂಟ್ನ ಚಿತ್ರಗಳು
1/8
Photo Credit: Radhika Pandith/ Instagram
Share
ಸ್ಯಾಂಡಲ್ವುಡ್ನ ಸಿಂಡ್ರೆಲ್ಲಾ ನಟಿ ರಾಧಿಕಾ ಪಂಡಿತ್ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಹೊಸ ಫೋಟೋಶೂಟ್ವೊಂದನ್ನು ಹಂಚಿಕೊಂಡಿದ್ದಾರೆ. ಫೆಬ್ರವರಿ ತಿಂಗಳನ್ನು ವೆಲ್ಕಮ್ ಮಾಡಿ ರಾಧಿಕಾ ಪಂಡಿತ್ ಫೋಟೋ ಹಂಚಿಕೊಂಡಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ.
2/8
Photo Credit: Radhika Pandith/ Instagram
Share
ಪ್ರೇಮಿಗಳ ದಿನ ಆಚರಿಸಿರುವ ಫೆಬ್ರವರಿ ತಿಂಗಳನ್ನು ಸ್ಯಾಂಡಲ್ವುಡ್ನ ಸಿಂಡ್ರೆಲ್ಲಾ ವೆಲ್ಕಮ್ ಮಾಡಿ ಮಾಡಿದ್ದು, ‘ಹಲೋ ಟು ಮಂತ್ ಆಫ್ ಲವ್’ ಎಂದು ಪ್ರೇಮಿಗಳ ತಿಂಗಳಿನ ಮೊದಲ ದಿನದಂದು ಇನ್ಸ್ಟಾಗ್ರಾಮ್ ಹಾಗೂ ಫೇಸ್ಬುಕ್ನಲ್ಲಿ ಹೊಸ ಫೋಟೋ ಶೇರ್ ಮಾಡಿದ್ದಾರೆ.
3/8
Photo Credit: Radhika Pandith/ Instagram
Share
ಚಿನ್ನದ ಬಣ್ಣದ ಡ್ರೆಸ್ನಲ್ಲಿ ನಟಿ ರಾಧಿಕಾ ಪಂಡಿತ್ ರಾಣಿಯಂತೆ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಮೆಚ್ಚುಗೆಯ ಮಹಾಪೂರವೇ ಹರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ರಾಕಿಂಗ್ ಸ್ಟಾರ್ ಪತ್ನಿಯ ಫೋಟೋ ಸಖತ್ ವೈರಲ್ ಆಗುತ್ತಿದ್ದು, ನಿಮ್ಮ ಸೌಂದರ್ಯದ ಗುಟ್ಟೇನು ಎಂದು ಹಲವರು ಪ್ರಶ್ನಿಸಿದ್ದಾರೆ.
4/8
Photo Credit: Radhika Pandith/ Instagram
Share
ನಟಿ ರಾಧಿಕಾ ಪಂಡಿತ್ ಹೊಸ ಫೋಟೋಗೆ ಅಭಿಮಾನಿಗಳು ವಿವಿಧ ರೀತಿಯಲ್ಲಿ ಕಮೆಂಟ್ ಮಾಡಿದ್ದು, ಅಭಿಮಾನಿಯೊಬ್ಬರು ರಾಧೆ ಓ ರಾಧೆ ನಿಮಗಾಗಿ ಕಾದೆ, ನೀವೊಮ್ಮೆ ಕಮೆಂಟ್ನ ನೋಡಬಾರದೆ, ನೋಡಿ ರೀಪ್ಲೇ ಮಾಡಬಾರದೇ ರಾಧಿಕ ಪಂಡಿತ್ ಮೇಡಂ ಎಂದು ಕ್ಯೂಟ್ ಆಗಿ ಪ್ರಶ್ನಿಸಿದ್ದಾರೆ.
5/8
Photo Credit: Radhika Pandith/ Instagram
Share
ಯಾರಿಲ್ಲ ಯಾರಿಲ್ಲ ನಿನ್ನಂತೆ ಯಾರಿಲ್ಲ ನಿನಷ್ಟು ಮುದ್ದಾಗಿ ನಂಗ್ಯಾರೂ ಕಂಡಿಲ್ಲ, ನೀನೇ ನನ್ನ ಸಿಂಡ್ರೆಲ್, ನಿಮ್ಮ ಸೌಂದರ್ಯದ ಗುಟ್ಟೇನು ಎಂದೆಲ್ಲಾ ಕಮೆಂಟ್ ಮಾಡಿರುವ ಅಭಿಮಾನಿಗಳು, ನೀವು ಸಿನಿಮಾಗೆ ಯಾವಾಗಾ ಕಂಬ್ಯಾಕ್ ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ.
6/8
Photo Credit: Radhika Pandith/ Instagram
Share
ರಾಕಿಂಗ್ ಸ್ಟಾರ್ ಯಶ್ ಅವರ ಪತ್ನಿ ರಾಧಿಕಾ ಪಂಡಿತ್ ಕೆಲ ವರ್ಷಗಳಿಂದ ಸಿನಿಮಾ ನಟನೆಯಿಂದ ಬ್ರೇಕ್ ತೆಗೆದುಕೊಂಡು ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ. ಸದ್ಯ ಮಿಸಸ್ ರಾಮಾಚಾರಿ ತಮ್ಮ ಇಬ್ಬರು ಮುದ್ದಾದ ಮಕ್ಕಳ ಜೊತೆ ಆಟವಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಜೊತೆಗೆ ಅವರ ಫೋಟೋಗಳನ್ನು ಆಗಾಗಾ ಶೇರ್ ಮಾಡುತ್ತಿರುತ್ತಾರೆ.
7/8
Photo Credit: Radhika Pandith/ Instagram
Share
ನಂದಗೋಕುಲ ಮತ್ತು ಸುಮಂಗಲಿ ಧಾರಾವಾಹಿಗಳ ಮೂಲಕ ನಟನೆ ಆರಂಭಿಸಿದ ರಾಧಿಕಾ ಪಂಡಿತ್ 2008ರಲ್ಲಿ ಮೊಗ್ಗಿನ ಮನಸು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಮೊದಲ ಚಿತ್ರದಲ್ಲೇ ಭಾರೀ ಯಶಸ್ಸು ಗಳಿಸಿದ ಅವರು, ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನೇ ನೀಡಿ, ಪುನೀತ್ ರಾಜ್ ಕುಮಾರ್, ಶಿವ ರಾಜ್ಕುಮಾರ್, ಧ್ರುವ ಸರ್ಜಾ ಸೇರಿದಂತೆ ಕನ್ನಡ ಟಾಪ್ ನಟರ ಜೊತೆಗೆ ನಟಿಸಿದ್ದಾರೆ.
8/8
Photo Credit: Radhika Pandith/ Instagram
Share
ರಾಧಿಕಾ ಪಂಡಿತ್ 9 ಡಿಸೆಂಬರ್ 2016ರಂದು ತಮ್ಮ ಬಹುಕಾಲದ ಗೆಳೆಯ ರಾಕಿಂಗ್ ಸ್ಟಾರ್ ಯಶ್ ಅವರನ್ನು ವಿವಾಹವಾದರು. ಯಶ್-ರಾಧಿಕ ಪಂಡಿತ್ ಕನ್ನಡ ಚಿತ್ರರಂಗದ ಕ್ಯೂಟ್ ಜೋಡಿಯಾಗಿದ್ದು, ಮೊಗ್ಗಿನ ಮನಸು, ಮಿಸ್ಟರ್ ಆ್ಯಂಡ್ ಮಿಸೆಸ್ ರಾಮಚಾರಿ, ಡ್ರಾಮಾ ಸೇರಿದಂತೆ ವಿವಿಧ ಚಿತ್ರಗಳಲ್ಲು ಜೊತೆಯಾಗಿ ನಟಿಸಿದ್ದಾರೆ.


Click it and Unblock the Notifications