Home / Photos
Photos of Megha Shetty: ನಟಿಯ ಬರ್ತಡೇ ಬೆನ್ನಲ್ಲೆ ಹೊಸ ಫೊಟೋ ವೈರಲ್
ಇತ್ತೀಚೆಗೆ ಹುಟ್ಟುಹಬ್ಬ ಆಚರಿಸಿಕೊಂಡು ಕನ್ನಡದ ಚೆಲುವೆ ನಟಿ ಮೇಘಾ ಶೆಟ್ಟಿಯವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ. ಲಂಗಾ ದಾವಣಿಯಲ್ಲಿ ಒಂದಷ್ಟು ಫೋಟೋಗಳಿಗೆ ಪೋಸ್ಟ್ ನೀಡಿದ್ದಾರೆ. ಇವು ವೈರಲ್ ಆಗುತ್ತಿವೆ.
1/7
Share
ನಟನೆ, ಸೌಂದರ್ಯದ ಜೊತೆಗೆ ಆರೋಗ್ಯದತ್ತ ನಟಿ ಮೇಘಾ ಶೆಟ್ಟಿಯವರು ಹೆಚ್ಚು ಗಮನ ಹರಿಸುತ್ತಾರೆ. ಹೀಗಾಗಿಯೇ ಅವರು ವಾರದಲ್ಲಿ ಅನೇಕ ಘಂಟೆಗಳನ್ನು ಜಿಮ್ನಲ್ಲಿ ಕಳೆಯುತ್ತಾರೆ. ಜಿಮ್ನಲ್ಲಿ ಕಬ್ಬಿಣ ದಪ್ಪ ಸರಳು ಹಿಡಿದು ಮೇಲೆ ಏರುವ ವಿಡಿಯೋ ಅನ್ನು ನಟಿ ಹಂಚಿಕೊಂಡಿದ್ದರು. ನಟಿಯ ಪ್ರತಿ ಪೋಸ್ಟ್, ವಿಡಿಯೋ, ಫೋಟೋಗಳಿಗೆ ಅಭಿಮಾನಿಗಳು ಕಾಯುತ್ತಿರುತ್ತಾರೆ.
2/7
Share
ನಟ ಪ್ರಜ್ವಲ್ ದೇವರಾಜ್ ಅಭಿನಯದ 'ಚೀತಾ' ಸಿನಿಮಾದಲ್ಲಿ ಹಾಗೂ 'ಅಪರೇಷನ್ ಲಂಡನ್ ಕೆಫೆ'ಯಲ್ಲಿ ನಾಯಕಿಯಾಗಿ ಮೇಘಾ ಶೆಟ್ಟಿ ಬಣ್ಣ ಹಚ್ಚಿಸಿದ್ದಾರೆ. ಸಿನಿಮಾಗಳು ಶೂಟಿಂಗ್ ಹಂತದಲ್ಲಿವೆ. ಈ ಸಿನಿಮಾಗಳಲ್ಲಿ ನಟಿಯ ಪಾತ್ರದ ಕುರಿತು ಫೋಟೋಗಳನ್ನು ಚಿತ್ರತಂಡ ಹಂಚಿಕೊಂಡಿದ್ದವು.
3/7
Share
ಮೊನ್ನೆಯಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡಿರುವ ನಟಿ ಮೇಘಾ ಶೆಟ್ಟಿಯವರು ನಟ ವಿನಯ್ ರಾಜಕುಮಾರ್ ನಾಯಕರಾಗಿರುವ 'ಗ್ರಾಮಾಯಣ' ಸಿನಿಮಾದಲ್ಲಿ ಹಳ್ಳಿ ಹುಡುಗಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಕುರಿತು ಸ್ಟಿಲ್ವೊಂದು ನಟಿಯ ಹುಟ್ಟುಹಬ್ಬದಂದು ಬಿಡುಗಡೆ ಮಾಡಲಾಗಿತ್ತು.
4/7
Share
2022ರಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆಗೆ 'ತ್ರಿಬಲ್ ರೈಡಿಂಗ್' ಸಿನಿಮಾನಲ್ಲಿ ಕಾಣಿಸಿಕೊಂಡ ಈ ಬೆಡಗಿ, ನಂತರ ಕೈವಾ, ದಿಲ್ ಪಸಂದ್ ಸಿನಿಮಾದಲ್ಲಿ ನಟಿಸಿದರು. ಇದೀಗ ಅವರ ಮುಂದೆ 'ಆಪರೇಷನ್ ಲಂಡನ್ ಕೆಫೆ', 'ಚೀತಾ', 'ಗ್ರಾಮಾಯಣ' ದಂತಹ ದೊಡ್ಡ ಬಜೆಟ್ ಸಿನಿಮಾಗಳು ಇವೆ.
5/7
Share
ನಟಿ ಮೇಘಾ ಶೆಟ್ಟಿಯವರು ಕಡು ನೀಲಿ ಬಣ್ಣದ ಲಂಗಾ ದಾವಣಿಯಲ್ಲಿ ಅಭಿಮಾನಿಗಳಿಗೆ ದರ್ಶನ ಕೊಟ್ಟಿದ್ದಾರೆ. ಒಂದಷ್ಟು ಫೋಟೋಗಳಿಗೆ ಪೋಸ್ ನೀಡಿದ್ದಾರೆ. ಇದೀಗ ಇದೇ ಫೋಟೋಗಳು ಆನ್ಲೈನ್ನಲ್ಲಿ ಅಭಿಮಾನಿಗಳ ನಿದ್ದೆಗೆಡಿಸಿವೆ. ಕತ್ತಲ್ಲಿ ದೊಡ್ಡ ಸರ, ಕಿವಿಗೆ ಝುಮುಕಿ, ನೀಲಿ ಬಳೆ ಧರಿಸಿರುವ ನಟಿ ನೋಡಿದ ಫ್ಯಾನ್ಸ್ ಫಿದಾ ಆಗಿದ್ದಾರೆ.
6/7
Share
ಹುಟ್ಟು ಹಬ್ಬದ ಬಳಿಕ ನಟಿ ಮೇಘಾ ಶೆಟ್ಟಿಯವರು ಚೆಂದದ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಅಭಿಮಾನಿಗಳು ಕಾಮೆಂಟ್ಗಳ ಸುರಿಮಳೆ ಸುರಿಸಿದ್ದಾರೆ. ನೆಚ್ಚಿನ ನಟಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.
7/7
Share
'ಜೊತೆ ಜೊತೆಯಲಿ' ಧಾರವಾಹಿ ಮೂಲಕ ಕನ್ನಡಿಗರ ಮನಗೆದ್ದ ಚೆಲುವೆ ನಟಿ ಮೇಘಾ ಶೆಟ್ಟಿಯವರು (Megha Shetty) ಇತ್ತೀಚೆಗಷ್ಟೆ ಹುಟ್ಟು ಹಬ್ಬದ ಆಚರಿಸಿಕೊಂಡಿದ್ದಾರೆ. ಅವರ ಮುಂದಿನ ಸಾಲು ಸಾಲು ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ. ಹೊಸ ಚಿತ್ರಗಳ ತಂಡದಿಂದ ನಟಿಗೆ ಭರ್ಜರಿ ಗಿಫ್ಟ್ ಸಿಕ್ಕಿದೆ. ಇದೀಗ ಅವರ ಹೊಸ ಫೋಟೋಗಳು ಹರಿದಾಡುತ್ತಿವೆ.


Click it and Unblock the Notifications