Home / Photos
Jyothi Rai Photo: ನಟಿ 'ಜ್ಯೋತಿ ರೈ' ಅಟ್ರ್ಯಾಕ್ಟಿವ್ ಬೋಲ್ಡ್ ಲುಕ್ ಫೋಟೋಸ್ ವೈರಲ್
'ಕೆಂಪು ಕೇವಲ ಬಣ್ಣವಲ್ಲ, ಇದೊಂದು ಆಟಿಟ್ಯೂಡ್, ಭಯವಿಲ್ಲದ ಸೌಂದರ್ಯ' ಶಿರ್ಷಿಕೆ ಸಹಿತ ನಟಿ ಜ್ಯೋತಿ ರೈ ಅವರು ಸಾಮಾಜಿಕ ಜಾಲತಾಣಗಳಲ್ಲಿ ಒಂದಷ್ಟು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ನೋಡಿದ ಫ್ಯಾನ್ಸ್ ಫಿದಾ ಆಗಿದ್ದಾರೆ.
1/7
Share
ಕನ್ನಡ ಧಾರವಾಹಿಯಲ್ಲಿ ನಟಿಸಿ ತಮ್ಮದೇ ಆದ ಛಾಪು ಮೂಡಿಸಿರುವ ನಟಿ ಜ್ಯೋತಿ ರೈ (Actress Jyothi Rai) ಅವರು ಖಾಸಗಿ ಫೋಟೋ, ವಿಡಿಯೋಗಳು ವೈರಲ್ ಆಗಿ ಇತ್ತೀಚೆಗೆ ಸುದ್ದಿಯಾಗಿದ್ದರು. ಆದರೆ ಇದು ತಮ್ಮವಲ್ಲ ಎಂದು ಅವರು ತಳ್ಳಿಹಾಕಿದ್ದರು. ಅದಾದ ಬಳಿಕ ಅವರು ಸಿನಿಮಾ, ನಟನೆ ಇನ್ನಿತರ ಚಟುವಟಿಕೆಗಳ ಕಡೆಗೆ ಹೆಚ್ಚಿನ ಗಮನ ಹರಿಸಿದ್ದಾರೆ.
2/7
Share
ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ನಟಿ ಜ್ಯೋತಿ ರೈ ಅವರ ಒಂದಷ್ಟು ಫೋಟೋಗಳು ಸಖತ್ ವೈರಲ್ ಆಗಿವೆ. ಜಿಮ್ ಡ್ರೆಸ್ನಲ್ಲಿ ಅವರು ಕಾಣಿಸಿದ್ದು, ಬ್ಲಾಕ್ ಶಾರ್ಟ್, ಮೇಲುಡುಗೆ ಮತ್ತು ವೈಟ್ ಜಾಕೆಟ್ನಲ್ಲಿ ಒಂದಷ್ಟು ಫೋಟೋಗಳಿಗೆ ಪೋಸ್ ನೀಡಿದ್ದಾರೆ.
3/7
Share
ಬ್ಲಾಕ್ ಶಾರ್ಟ್ನಲ್ಲಿ ತಮ್ಮ ಮಾದಕ ನೋಟದ ಮೂಲಕ ಅಭಿಮಾನಿಗಳೂ ಹುಬ್ಬೇರುವಂತೆ ಮಾಡಿದ್ದಾರೆ. ಕೆಲವರು ಅವರ ಎದೆ ಮೇಲಿನ ಟ್ಯಾಟೋ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಅವರ ಸೌಂದರ್ಯ, ನೋಟದ ಕುರಿತು ಹಾರ್ಟ್ ಎಮೋಜಿಗಳನ್ನು ಸೆಂಡ್ ಮಾಡಿ ಅಭಿಮಾನ ಮೆರೆದಿದ್ದಾರೆ.
4/7
Share
ನಟನೆ, ಸೌಂದರ್ಯ ಹಾಗೂ ಹಾಟ್ ಫೋಟೋಗಳಿಂದ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುವ ನಟಿ ಜ್ಯೋತಿ ರೈ ಅವರಿಗೆ ಇನ್ನೇನು ಆರಂಭವಾಗಲಿರುವ ಕನ್ನಡದ ಬಿಗ್ ಬಾಸ್ 11ರಿಂದ ಆಫರ್ ನೀಡಲಾಗಿತ್ತು. ಆದರೆ ಈ ಆಫರ್ ಅನ್ನು ನಾನು ನಿರಾಕರಿಸಿದ್ದೇನೆ ಎಂದು ಸ್ವತಃ ನಟಿ ಇನ್ಸ್ಟಾಗ್ರಾಮ್ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ.
5/7
Share
ಕನ್ನಡ ಸೇರಿದಂತೆ ತೆಲುಗಿನ ಧಾರವಾಹಿಗಳಲ್ಲಿ ನಟಿಸಿರುವ ಜ್ಯೂತಿ ರೈ ಅವರು ಪತಿ ಸುಕು ಪೂರ್ವಜ್ (Suku Poorvaj) ನಿರ್ದೇಶನದ ಸಿನಿಮಾದಲ್ಲಿ ನಟಿಸಿದ್ದಾರೆ. ಅವರ ಮುಂದೆ ಒಂದಷ್ಟು ಪ್ರಾಜೆಕ್ಟ್ಗಳು ಇವೆ. ಅವುಗಳತ್ತ ನಟಿ ಗಮನ ಹರಿಸಿದ್ದಾರೆ ಎಂದು ತಿಳಿದು ಬಂದಿದೆ.
6/7
Share
ನಟಿಯನ್ನು ಕೆಂಪು ಉಡುಪಿನಲ್ಲಿ ಕಂಡ ಜ್ಯೋತಿ ರೈ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಹ್ಯಾಷ್ಟ್ಯಾಟ್ ಜ್ಯೋತಿ ರೈ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ರೀಶೇರ್ ಮಾಡಿಕೊಳ್ಳುತ್ತಿದ್ದಾರೆ. ನಟಿಯ ಒಂದೊಂದು ಫೋಟೋ ಪೋಸ್ಟ್ಗಳು ಲೈಕ್ಸ್ ಪಡೆದುಕೊಂಡಿವೆ.
7/7
Share
ಇದಷ್ಟೇ ಅಲ್ಲದೇ ಕೆಂಪು ಉಡುಗೆಯಲ್ಲಿ ಫೋಟೋ ಶೇರ್ ಮಾಡಿಕೊಂಡಿರುವ ನಟಿ ಜ್ಯೋತಿ ರೈ ಅವರು ಹೆಚ್ಚು ಗಮನ ಸೆಳೆದಿದ್ದಾರೆ. ಈ ಫೋಟೋಗಳ ಜೊತೆಗೆ 'ಕೆಂಪು ಕೇವಲ ಬಣ್ಣವಲ್ಲ, ಇದೊಂದು ಆಟಿಟ್ಯೂಡ್, ಭಯವಿಲ್ಲದ ಸೌಂದರ್ಯ' ಎಂದು ಶಿರ್ಷಿಕೆ ಬರೆದುಕೊಂಡಿದ್ದಾರೆ.


Click it and Unblock the Notifications