Home / Photos
Chaithra J Achar: ದಿನ ದಿನಕ್ಕೂ ಬೋಲ್ಡ್ ಆಗುತ್ತಿದ್ದಾರೆ ನಟಿ ಚೈತ್ರಾ ಜೆ ಆಚಾರ್... ಕದಿಯಬೇಡ ನಮ್ಮ ನಿದ್ದೆ ಅಂತಿದ್ದಾರೆ ಫ್ಯಾನ್ಸ್!
By Mamatha M
ಟೋಬಿ, ಸಪ್ತ ಸಾಗರದಾಚೆ ಸೈಡ್ ಬಿ ಚಿತ್ರದ ಮೂಲಕ ಖ್ಯಾತಿ ಗಳಿಸಿದ ನಟಿ, ಗಾಯಕಿ ಚೈತ್ರಾ ಜೆ ಆಚಾರ್ ಸೋಶಿಯಲ್ ಮಿಡಿಯಾದಲ್ಲಿ ಸಕತ್ ಆಕ್ಟಿವ್. ವಿಭಿನ್ನ ಫೋಟೋಶೂಟ್ಗಳ ಮೂಲಕ ತನ್ನ ಅಭಿಮಾನಿಗಳ ಮನ ಕದಿಯುವ ಇವರು ಮತ್ತಷ್ಟು ಬೋಲ್ಡ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
1/8
Photo Credit: facebook@ Chaithra J Achar
Share
ಸಾಗರದಾಚೆ ಎಲ್ಲೋ - ಸೈಡ್ ಬಿ ಸಿನಿಮಾದಲ್ಲಿ ಸುರಭಿ ಪಾತ್ರದ ಮೂಲಕ ಗಮನ ಸೆಳೆದ ನಟಿ ಮತ್ತು ಗಾಯಕಿ ಚೈತ್ರಾ ಜೆ ಆಚಾರ್ ಸಿನಿ ಪ್ರೇಮಿಗಳಿಗೆ ಸಕತ್ ಪರಿಚಯ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿರೋರಿಗೆಗಂತು ಇವರು ಫೇವರಿಟ್ ಅಂದರೆ ತಪ್ಪಲ್ಲ.
2/8
Photo Credit: facebook@ Chaithra J Achar
Share
ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ಆಕ್ಟಿವ್ ಆಗಿರುವ ನಟಿ ಚೈತ್ರಾ ಜೆ ಆಚಾರ್ ತಮ್ಮ ಖಾತೆಗಳಲ್ಲಿ ಬೋಲ್ಡ್ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ತಮ್ಮ ವಿಭಿನ್ನ ಲುಕ್ಗಳಿಂದ ಅಭಿಮಾನಿಗಳನ್ನು ಆಗಾಗ್ಗೆ ಶಾಕ್ಗೂ ನೂಕುತ್ತಾರೆ. ಇತ್ತೀಚೆಗೆ ಅವರು ಹಂಚಿಕೊಂಡಿರುವ ಫೋಟೋಗಳನ್ನು ನೋಡಿ ಫಾಲೋವರ್ಸ್ ವಾವ್ ಎಂದಿದ್ದಾರೆ.
3/8
Photo Credit: facebook@ Chaithra J Achar
Share
ನಟಿ ಮತ್ತು ಗಾಯಕಿ ಚೈತ್ರಾ ಜೆ ಆಚಾರ್ ಅವರು ಬ್ಯಾಕ್ ಟು ಬ್ಯಾಕ್ ಚಿತ್ರಗಳೊಂದಿಗೆ ತೆರೆ ಮೇಲೆ ಕಾಣಿಸುತ್ತಿದ್ದಾರೆ. ಟೋಬಿ ಸಿನಿಮಾದಲ್ಲಿನ ಅವರ ಅಭಿನಯ, ನಂತರ ಸಪ್ತ ಸಾಗರದಾಚೆ ಎಲ್ಲೋ ಮತ್ತು ಬ್ಲಿಂಕ್ ಚಿತ್ರಗಳನ್ನು ನೋಡಿ ಕನ್ನಡಿಗರು ಚೈತ್ರಾ ನಟನೆಗೆ ಫಿದಾ ಆಗಿದ್ದಾರೆ.
4/8
Photo Credit: facebook@ Chaithra J Achar
Share
ಸದ್ಯ ಚೈತ್ರಾ ಜೆ ಆಚಾರ್ ತಮ್ಮ ಮುಂಬರುವ ಚಿತ್ರ, ಹ್ಯಾಪಿ ಬರ್ತ್ಡೇ ಟು ಮಿ ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಜೂನ್ 28 ಕ್ಕೆ ಈ ಸಿನಿಮಾ ನೇರವಾಗಿ ಒಟಿಟಿಗೆ ಬಿಡುಗಡೆಗೆ ಸಜ್ಜಾಗುತ್ತಿದೆ. ಇದೆ ವೇಳೆ ಫೇಸ್ಬುಕ್, ಇನ್ಸ್ಟಾಗ್ರಾಮ್ನಲ್ಲಿ ನಟಿ ಹಲವು ವೋಲ್ಡ್ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಹಲ್ಚಲ್ ಎಬ್ಬಿಸಿದ್ದಾರೆ.
5/8
Photo Credit: facebook@ Chaithra J Achar
Share
ಹ್ಯಾಪಿ ಬರ್ತ್ಡೇ ಟು ಮಿ ಸಿನಿಮಾ ಬಿಡುಗಡೆಗಾಗಿ ಸಿದ್ದವಿದೆ. 2023ರಲ್ಲಿ ತೆರೆ ಕಂಡ 'ಟೋಬಿ', ಸಪ್ತ ಸಾಗರದಾಚೆ ಎಲ್ಲೋ ಮತ್ತು ಬ್ಲಿಂಕ್ನಲ್ಲಿ ಯಶಸ್ಸಿನ ಬಳಿಕ, ನಟ ಧನನಂಜಯ್ ಮತ್ತು ಶಿವರಾಜ್ಕುಮಾರ್ ಅಭಿನಯದ 'ಉತ್ತರಕಾಂಡ' ಸಿನಿಮಾದಲ್ಲಿ ಲಚ್ಚಿಯಾಗಿ ಮತ್ತು ಚೂರಿಕಟ್ಟೆ ಖ್ಯಾತಿಯ ಪ್ರವೀಣ್ ತೇಜ್ ಅಭಿನಯದ ಇನ್ನೂ ಶೀರ್ಷಿಕೆಯ ಸಸ್ಪೆನ್ಸ್ ಥ್ರಿಲ್ಲರ್ನಲ್ಲಿ ಕೆಲಸ ಮಾಡಲಿದ್ದಾರೆ.
6/8
Photo Credit: facebook@ Chaithra J Achar
Share
ಚಂದನವನದ ಆಲಿಯಾ ಭಟ್ ಎಂದು ಅನೇಕ ಮಂದಿ ಚೈತ್ರಾ ಜೆ ಆಚಾರ್ ಅವರನ್ನು ಕರೆಯುತ್ತಾರೆ. ಈ ಹಿಂದೆಯೂ ಹಲವು ಬಾರಿ ಅವರನ್ನು ಆಲಿಯಾ ಭಟ್ಗೆ ಹೋಲಿಸಲಾಗಿದೆ. ಕೆಲವೊಂದು ಆಂಗಲ್ಗಳಿಂದ ಚೈತ್ರಾ ಅವರು ಆಲಿಯಾ ತರಹ ಕಾಣಿಸುತ್ತಾರೆ ಎಂಬುದು ನೆಟ್ಟಿಗರ ಅಭಿಪ್ರಾಯ .
7/8
Photo Credit: facebook@ Chaithra J Achar
Share
ಈ ಹಿಂದೆ ನಟಿ ಚೈತ್ರಾ ಜೆ ಆಚಾರ್ ಅವರ ಫೋಟೋಗೆ ತುಂಬಾ ನೆಗೆಟಿವ್ ಕಾಮೆಂಟ್ಗಳು ಬಂದಿದ್ದವು. 'ಗರುಡ ಗಮನ ವೃಷಭ ವಾಹನ' ಸಿನಿಮಾ 'ಸೋಜುಗದ ಸೂಜುಮಲ್ಲಿಗೆ' ಹಾಡಿಗೆ 2021ರಲ್ಲಿ ಸೈಮಾ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ದೊರೆತಿತ್ತು. ಈ ವೇಳೆ ಕಾರ್ಯಕ್ರಮದಲ್ಲಿ ಗಾಯಕಿ ಚೈತ್ರಾ ಹಾಕಿದ್ದ ಬಟ್ಟೆ ಬಗ್ಗೆಯೂ ಕೀಳು ಮಟ್ಟದಲ್ಲಿ ಟೀಕೆ ಮಾಡಲಾಗಿತ್ತು.
8/8
Photo Credit: facebook@ Chaithra J Achar
Share
ಇನ್ನು, ಕನ್ನಡ ಸಿನಿರಂಗದ ಬ್ಯುಸಿ ನಟಿಯಾಗಿರುವ ನಟಿ ಮತ್ತು ಗಾಯಕಿ ಚೈತ್ರಾ ಜೆ ಆಚಾರ್ ತಮಿಳಿನಲ್ಲಿ ಚೊಚ್ಚಲ ಸಿನಿಮಾ ಮಾಡಲಿದ್ದಾರೆ. ತಮಿಳು ಸಿನಿಮಾಗಳಿಗೆ ಪಾದಾರ್ಪಣೆ ಮಾಡುವ ಬಗ್ಗೆ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.


Click it and Unblock the Notifications