Home / Photos
Chaithra J Achar: ಸೀರೆಯಲ್ಲಿಯೂ ಮಾದಕ ಲುಕ್ ಕೊಟ್ಟ ನಟಿ ಚೈತ್ರಾ ಜೆ ಆಚಾರ್
By Mamatha M
ಸಪ್ತ ಸಾಗರದಾಚೆ ಎಲ್ಲೋ- ಸೈಡ್ ಬಿ ಸಿನಿಮಾದಿಂದ ಸಾಕಷ್ಟು ಖ್ಯಾತಿ ಗಳಿಸಿದ ನಟಿ ಚೈತ್ರಾ ಜೆ ಆಚಾರ್ ತಮ್ಮ ಫೋಟೋಗಳಿಂದಲೂ ಸುದ್ದಿಯಾಗುತ್ತಾರೆ.
1/6
Photo Credit: Chaithra J Achar@instagram
Share
ಕನ್ನಡ ಸಿನಿಮಾರಂಗದ ಯುವ ನಾಯಕಿಯರ ಸಾಲಿನಲ್ಲಿ ನಿಲ್ಲುವ ನಟಿ ಚೈತ್ರಾ ಜೆ ಆಚಾರ್ ಗಾಯಕಿ ಕೂಡ ಹೌದು. ಸಪ್ರಸಾಗರದಾಜೆ ಎಲ್ಲೋ ಸಿನಿಮಾ ಮೂಲಕ ಖ್ಯಾತಿ ಗಳಿಸಿದ ಇವರು ತಮ್ಮ ಫೋಟೋಗಳಿಂದಲೂ ಸಕತ್ ಸದ್ದು ಮಾಡುತ್ತಾರೆ.
2/6
Photo Credit: Chaithra J Achar@instagram
Share
ಸಾಮಾಜಿಕ ಮಾಧ್ಯಮಗಳಲ್ಲಿ ಸಕತ್ ಆಕ್ಟಿವ್ ಇರುವ ನಟಿ ಚೈತ್ರಾ ಜೆ ಆಚಾರ್, ಆಗ್ಗಾಗೆ ತಮ್ಮ ಫೋಟೋಗಳನ್ನು ಹಂಚಿಕೊಂಡು ಸುದ್ದಿಯಾಗುತ್ತಾರೆ. ಇತ್ತೀಚೆಗೆ ಸೀರೆಯಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗಳು ಕೂಡ ಫಾಲೋವರ್ಸ್ ಕಣ್ಣು ಕುಕ್ಕುತ್ತಿವೆ.
3/6
Photo Credit: Chaithra J Achar@instagram
Share
ತಮ್ಮ ಸೀರೆಯ ಮಾದಕ ಪೋಟೋಗಳಿಗೆ ಹಿಂದಿಯಲ್ಲಿ ಕ್ಯಾಪ್ಷನ್ ಬರೆದು ಚೈತ್ರಾ ಆಚಾರ್ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಫೋಟೊಗ್ರಾಫರ್ ನಿತೀಶ್ ಅಯೋದ್ ಫೋಟೊಗಳನ್ನು ಕ್ಲಿಕ್ಕಿಸಿದ್ದಾರೆ. ಫೋಟೋಗಳ ಕಾರಣಕ್ಕೆ ಸಕತ್ ಟ್ರೋಲ್ ಆಗುತ್ತಿದ್ದ ಅವರು, ತಮ್ಮ ಫೊಟೋಗಳಿಗೆ ಕಾಮೆಂಟ್ ಆಫ್ ಮಾಡಿದ್ದಾರೆ.
4/6
Photo Credit: Chaithra J Achar@instagram
Share
ಟೋಬಿ ಸಿನಿಮಾದಲ್ಲಿ ಗಯ್ಯಾಳಿ ಮತ್ತು ಅಪ್ಪನನ್ನು ಕಾಪಾಡುವ ಮಗಳಾಗಿ ನಟಿಸಿ ಪ್ರಶಂಸೆ ಗಳಿಸಿದ ನಟಿ ಚೈತ್ರಾ ಜೆ ಆಚಾರ್ ಅವರಿಗೆ ಸಾಲು ಸಾಲು ಅವಕಾಶಗಳು ಅರಸಿ ಬರುತ್ತಿವೆ. ಸದ್ಯ ನಟ ರಾಕ್ಷಸ ಡಾಲಿ ಧನಂಜಯ್, ಹ್ಯಾಟ್ರಿಕ್ ಹೀರೋ ಶಿವಣ್ಣ ಅವರ ಬಹುನಿರೀಕ್ಷಿತ ಸಿನಿಮಾ 'ಉತ್ತರಕಾಂಡ' ಸಿನಿಮಾಗೆ ಆಯ್ಕೆಯಾಗಿದ್ದಾರೆ.
5/6
Photo Credit: Chaithra J Achar@instagram
Share
'ಉತ್ತರಕಾಂಡ' ಚಿತ್ರದಲ್ಲಿ ಲಚ್ಚಿ ಎನ್ನುವ ಪಾತ್ರದಲ್ಲಿ ಚೈತ್ರಾ ಆಚಾರ್ ನಟಿಸುತ್ತಿದ್ದಾರೆ. ಆದರೆ ಇವರು ಸಿನಿಮಾದ ಮುಖ್ಯ ನಾಯಕ ನಟಿ ಅಲ್ಲ. ಆದರೆ, ಚಿತ್ರದಲ್ಲಿ ಮುಖ್ಯವಾದ ಪಾತ್ರ ಎಂದು ಚಿತ್ರತಂಡ ಮಾಹಿತಿ ನೀಡಿದೆ. ಇನ್ನು 'ರತ್ನನ್ ಪ್ರಪಂಚ' ಸಿನಿಮಾ ಮಾಡಿದ ತಂಡವೇ ಈ ಚಿತ್ರವನ್ನು ತರುತ್ತಿದೆ. ನಾಯಕಿಯಾಗಿ ಐಶ್ವರ್ಯ ರಾಜೇಶ್ ನಟಿಸಲಿದ್ದಾರೆ ಎಂಬ ಮಾಹಿತಿಯಿದೆ.
6/6
Photo Credit: Chaithra J Achar@instagram
Share
ನಟಿ ಚೈತ್ರಾ ಆಚಾರ್ ಅವರು 2019 ರಲ್ಲಿ ಆಕ್ಷನ್ ಥ್ರಿಲ್ಲರ್ ಮಹಿರಾ ಸಿನಿಮಾದ ಮೂಲಕ ತಮ್ಮ ನಟನೆಯನ್ನು ಪ್ರಾರಂಭಿಸಿದರು. ಚೈತ್ರಾ ನಟನೆಯ 'ಬ್ಲಿಂಕ್' ಸಿನಿಮಾ ತೆರೆಕಂಡು ಸಕ್ಸಸ್ ಕಂಡಿದೆ. 'ಸ್ಟ್ರಾಬೆರಿ' ಹಾಗೂ 'ಹ್ಯಾಪಿ ಬರ್ತ್ಡೇ ಟು ಮಿ' ಮತ್ತೆರಡು ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ.


Click it and Unblock the Notifications