Home / Photos
Photos of Ashika Ranganath: ಬ್ಲ್ಯಾಕ್ ಡ್ರೆಸ್ನಲ್ಲಿ ಮಿಲ್ಕಿ ಬ್ಯೂಟಿ ಆಶಿಕಾ: ನೆಟ್ಟಿಗರು ಏನಂದ್ರು?
ಕನ್ನಡ ನಟಿ ಆಶಿಕಾ ರಂಗನಾಥ್ ಕಪ್ಪು ಬಣ್ಣದ ಗ್ಲಾಮರಸ್ ಪೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ಅವರು ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಇವು ಪ್ರಚೋದಕ ಅಲ್ಲವೇ? ಎಂದು ಕಾಮೆಂಟ್ ಮಾಡಿದ್ದಾರೆ.
1/8
Photo Credit: Ashika Ranganath@instagram
Share
ಕನ್ನಡ ಮೂಲದ ಬಹುಭಾಷಾ ನಟಿ ಆಶಿಕಾ ರಂಗನಾಥ್ (Ashika Ranganath) ಅವರು ಕಪ್ಪು ಬಣ್ಣದ ಡ್ರೆಸ್ನಲ್ಲಿ ಫೋಟೋಗಳಿಗೆ ಸಖತ್ ಫೋಸ್ ಕೊಟ್ಟಿದ್ದಾರೆ. ಈ ಹಾಟ್ ಫೋಟೋಗಳನ್ನು ಅವರು ಇನ್ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಇದು ಆನ್ಲೈನ್ಗಳಲ್ಲಿ ಒಂದಷ್ಟು ಚರ್ಚೆಗೆ ಕಾರಣವಾಗಿದೆ.
2/8
Photo Credit: Ashika Ranganath@instagram
Share
ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ನಟಿ ಆಶಿಕಾ ರಂಗನಾಥ್ ಅವರು, ಕನ್ನಡದ ಒಂದಷ್ಟು ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ. ಇತ್ತೀಚೆಗೆ ಅವರ ನಟನೆಯ O2 ಸಿನಿಮಾ ತೆರೆ ಕಂಡಿತ್ತು. ಪ್ರೇಕ್ಷರಿಂದ ಈ ಸಿನಿಮಾಗೆ ಭರಪೂರ ಮೆಚ್ಚುಗೆ ಸಹ ವ್ಯಕ್ತವಾಗಿದೆ.
3/8
Photo Credit: Ashika Ranganath@instagram
Share
ಕನ್ನಡದಿಂದ 2022ರಲ್ಲಿ ತಮಿಳು ಚಿತ್ರರಂಗಕ್ಕೆ (ಕಾಲಿವುಡ್) ಪ್ರವೇಶ ಪಡೆದ ನಟಿ ಆಶಿಕಾ ರಂಗನಾಥ್ ಅವರು 'ಪಟ್ಟಾತು ಅರಸನ್' ಚಿತ್ರದಲ್ಲಿ ನಟಿಸಿದರು. ನಂತರ ಅವರು 'ಅಮಿಗೋಸ್' ನಂತರ, 'ನಾ ಸಾಮಿ ರಂಗ' ಹೀಗೆ ಕನ್ನಡೇತರ ಸಿನಿಮಾಗಳನ್ನು ನಟಿಸಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.
4/8
Photo Credit: Ashika Ranganath@instagram
Share
ಮುದ್ದು ಮೊಗದ ಚೆಲುವೆಯನ್ನು ಕನ್ನಡದ ಚಿತ್ರರಂಗದಲ್ಲಿ ಮಿಲ್ಕಿಬ್ಯೂಟಿ ಅಂತಲೆ ಫೇಮಸ್ಸು. ಸಾಂಪ್ರದಾಯಿಕ ಫೋಟೋಗಳ ಮೂಲಕ ಆಗಾಗ ಅಭಿಮಾನಿಗಳ ಮುಂದೆ ಪ್ರದರ್ಶನವಾಗುತ್ತಿದ್ದ ಆಶಿಕಾ ಇದೀಗ ಹಾಟ್ ಅವತಾರದಲ್ಲಿ ಕಾಣಸಿಕೊಂಡಿದ್ದಾರೆ. ಅಭಿಮಾನಿಗಳು ಟೂ ಸೆಕ್ಸಿ, ಹಾಟ್ ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ.
5/8
Photo Credit: Ashika Ranganath@instagram
Share
ಬ್ಲ್ಯಾಕ್ ಡ್ರೆಸ್ನ ಸುಮಾರು ಐದಾರು ಫೋಟೋಗಳನ್ನು ಶೇರ್ ಮಾಡಿಕೊಂಡಿರುವ ನಟಿ ಆಶಿಕಾ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಹುಟ್ಟು ಹಾಕಿವೆ. ಈ ಫೋಟೋಗಳಿಂದ ಏನು ಸಂದೇಶ ಸಾರುತ್ತೀರಿ?. ಇವು ಅಕ್ಷರಶಃ ಪ್ರಚೋದಕ ಅಲ್ಲದೇ?, ಲೈಕ್ಸ್ಗಾಗಿ ಹೀಗೆ ತುಂಡು ಬಟ್ಟೆ ತೊಡುವುದು ಅನಿವಾರ್ಯವೇ? ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ.
6/8
Photo Credit: Ashika Ranganath@instagram
Share
ಇವು ಪ್ರಚೋದಕ ಅಲ್ಲವೇ ಎಂಬ ಕಾಮೆಂಟುಗಳಿಗೆ ಅಭಿಮಾನಿಗಳು ಉತ್ತರಿಸಿದ್ದಾರೆ. ಸಿನಿಮಾ ರಂಗದಲ್ಲಿ ಇಂತಹ ಫೋಟೋ ಶೋಟ್, ಹಾಟ್ ಫೋಟೋಗಳು ಕಾಮನ್. ಅದು ಅವರ ವೃತ್ತಿ. ನೀವೇಕೆ ನಟಿಯರನ್ನು ಫಾಲೋ ಮಾಡುತ್ತಿದ್ದೀರಾ ಎಂದು ನಟಿ ಆಶಿಕಾ ಪರ ಟಾಂಗ್ ಕೊಟ್ಟಿದ್ದಾರೆ.
7/8
Photo Credit: Ashika Ranganath@instagram
Share
ಇತರ ಭಾಷೆಗಳ ಚಿತ್ರಗಳಲ್ಲೂ ಬ್ಯೂಸಿ ಇರುವ ನಟಿ ಆಶಿಕಾ ರಂಗನಾಥ್ ಅವರು ಸದ್ಯ ಕನ್ನಡ ನಿರ್ದೇಶಕ ಸಿಂಪಲ್ ಸುನಿ ನಿರ್ದೇಶನ 'ಗತವೈಭವದ' ಸಿನಿಮಾ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. ತೆಲುಗಿನಲ್ಲಿ ನಟ ಚಿರಂಜೀವಿ ನಟನೆಯ ವಿಶ್ವಂಭರ ಚಿತ್ರದಲ್ಲೂ ಆಶಿಕಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
8/8
Photo Credit: Ashika Ranganath@instagram
Share
ಇತ್ತೀಚೆಗೆ ನಟಿ ಆಶಿಕಾ ಅವರ 02 ಸಿನಿಮಾ ರೀಲಿಸ್ ಆಗಿತ್ತು. ಪಿಆರ್ಕೆ ಪ್ರೊಡಕ್ಷನ್ ವ್ಯಾಪ್ತಿಯಲ್ಲಿ ಕೆಲಸ ಮಾಡಿದ್ದಕ್ಕೆ ನಟಿ ಸಂತಸ ಹಂಚಿಕೊಂಡಿದ್ದರು. ಪಿಆರ್ಕೆ ಪುನೀತ್ ರಾಜಕುಮಾರ್ ಅವರ ಪಿಆರ್ಕೆ ಬ್ಯಾನರ್ನಡಿ ಮೂಡಿ ಬಂದ ಸಿನಿಮಾ. ವಿಶೇಷ ವೆಂದರೆ ಅಪ್ಪು ಅವರು ಕೊನೆಯದಾಗಿ ಕೇಳಿದ ಸಿನಿಮಾ ಪ್ರಾಜೆಕ್ಟ್ ಇದಾಗಿದೆ.


Click it and Unblock the Notifications