Home / Photos
ಚಿತ್ರಗಳು; ಸಂಚಾರಿ ವಿಜಯ್ ಶಿವಮೊಗ್ಗ ನಂಟು
1/8
Share
ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ವಿಧಿವಶರಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕಡೂರಿನವರಾದ ಅವರು ಪಕ್ಕದ ಜಿಲ್ಲೆ ಶಿವಮೊಗ್ಗ ಜೊತೆ ಉತ್ತಮ ನಂಟು ಹೊಂದಿದ್ದದರು. ಕುಪ್ಪಳಿಯನ್ನು ಬಹಳ ಇಷ್ಟಪಡುತ್ತಿದ್ದರು.
2/8
Share
ಸಂಚಾರಿ ವಿಜಯ್ ಮಂಡಗದ್ದೆ, ಗಾಜನೂರಿಗೆ ಒಮ್ಮೆ ಹೋಗಿ ಪ್ರಕೃತಿ ಸೊಬಗಿನ ಜೊತೆ ಸಮಯ ಕಳೆಯಬೇಕು ಎಂದು ಹೇಳಿದ್ದರಂತೆ. ಚಿತ್ರೀಕರಣದ ಸಮಯದಲ್ಲಿ ಶರಾವತಿ ಹಿನ್ನೀರಿನ ಪ್ರದೇಶಕ್ಕೆ ಭೇಟಿ ಕೊಟ್ಟಿದ್ದರು.
3/8
Share
ಸಿಗಂದೂರು ದೇವಾಲಯ, ಶರಾವತಿ ಹಿನ್ನೀರಿನ ಲಾಂಚ್ನಲ್ಲಿನ ಸಂಚಾರವನ್ನು ಇಷ್ಟಪಡುತ್ತಿದ್ದರು. 'ನಾತಿಚರಾಮಿ' ಸಿನಿಮಾ ತಂಡದ ಜೊತೆ ಒಮ್ಮೆ ದೇವಸ್ಥಾನಕ್ಕೆ ತೆರಳಿ ದೇವಿಯ ದರ್ಶನ ಪಡೆದಿದ್ದರು.
4/8
Share
ಶಿವಮೊಗ್ಗದ ಜೊತೆ ಉತ್ತಮ ನಂಟನ್ನು ಹೊಂದಿದ್ದ ಸಂಚಾರಿ ವಿಜಯ್ ಹಲವು ಪ್ರವಾಸಿ ತಾಣಗಳಿಗೆ ಭೇಟಿ ಕೊಟ್ಟಿದ್ದರು
5/8
Share
ಸಂಚಾರಿ ವಿಜಯ್ 'ನಾನು ಅವನಲ್ಲ ಅವಳು' ಸಿನಿಮಾಗೆ ರಾಷ್ಟ್ರಪ್ರಶಸ್ತಿ ಪಡೆದಾಗ ಮೊಟ್ಟಮೊದಲು ನಾಗರಿಕ ಸನ್ಮಾನವಾಗಿದ್ದು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ.
6/8
Share
ಸಂಚಾರಿ ವಿಜಯ್ ಇಕ್ಕೇರಿ ದೇವಾಲಯಕ್ಕೆ ಭೇಟಿ ನೀಡಿದ್ದರು. ದೇವಾಲಯದ ಇತಿಹಾಸದ ಕುರಿತು ಓದಿ ತಿಳಿದುಕೊಂಡಿದ್ದರು.
7/8
Share
ತೀರ್ಥಹಳ್ಳಿಯಲ್ಲಿರುವ ಕವಿಶೈಲ ಸೇರಿದಂತೆ ಶಿವಮೊಗ್ಗ ಪ್ರವಾಸಿ ತಾಣಗಳು, ಪ್ರಾಚೀನ ದೇವಾಲಯಗಳನ್ನು ಬಹಳ ಇಷ್ಟಪಡುತ್ತಿದ್ದರು.
8/8
Share
ಸಂಚಾರಿ ವಿಜಯ್ ಶಿವಮೊಗ್ಗ ಜಿಲ್ಲೆಯ ಪುರಾತನ ದೇವಾಲಯಗಳಿಗೆ ಭೇಟಿ ಕೊಟ್ಟಿದ್ದರು. ಫೋಟೋಗಳನ್ನು ತೆಗೆಸಿಕೊಂಡಿದ್ದರು.


Click it and Unblock the Notifications