Home / Photos
Actor Nagabhushan Marriage Photos: ಪೂಜಾ ಪ್ರಕಾಶ್ ಜೊತೆ ನಟ ನಾಗಭೂಷಣ್ ಮದುವೆ
ಕೌಸಲ್ಯಾ ಸುಪ್ರಜಾ ರಾಮ, ಟಗರು ಪಲ್ಯ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ನಟ ನಾಗಭೂಷಣ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಬಹುಕಾಲದ ಗೆಳತಿ, ಕಲಾವಿದೆ ಪೂಜಾ ಪ್ರಕಾಶ್ ಸಪ್ತಪದಿ ತುಳಿದಿದ್ದಾರೆ.
1/8
Share
ನಾಗಭೂಷಣ್ ಅವರ ಮದುವೆ ಸಮಾರಂಭದಲ್ಲಿ ರಾಜಕಾರಣಿ ಚನ್ನರಾಜ್ ಹಟ್ಟಿಹೊಳಿ, ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳ್ಕರ್ ಭಾಗವಹಿಸಿ ಶುಭ ಕೋರಿದರು.
2/8
Share
ನಾಗಭೂಷಣ್ ಹಾಗೂ ಪೂಜಾ ಪ್ರಕಾಶ್ ಅವರ ಮದುವೆ ಆಪ್ತರ ಸಮ್ಮುಖದಲ್ಲಿ ನಡೆದಿದೆ. ಇಬ್ಬರದ್ದೂ ಅರೆಂಜ್ ಮ್ಯಾರೇಜಾ ಅಥವಾ ಲವ್ ಮ್ಯಾರೇಜಾ ಅನ್ನುವುದಕ್ಕೆ ಉತ್ತರ ಇಲ್ಲ.
3/8
Share
ನಾಗಭೂಷಣ್ ಅವರ ನಟನೆಯ ಟಗರು ಪಲ್ಯ ಸಿನಿಮಾ ಉತ್ತಮ ಯಶಸ್ಸು ಗಳಿಸಿತ್ತು. ನಟ ಧನಂಜಯ ಅವರೇ ಈ ಸಿನಿಮಾಗೆ ಬಂಡವಾಳ ಹೂಡಿದ್ದರು. ನಾಗಭೂಷಣ್ ಅವರ ಮುಂದಿನ ಸಿನಿಮಾ 'ವಿದ್ಯಾಪತಿ'ಗೂ ಧನಂಜಯ ಅವರೇ ಬಂಡವಾಳ ಹೂಡಲಿದ್ದಾರೆ.
4/8
Share
ನಾಗಭೂಷಣ್ ಅವರ ಕೈಹಿಡಿದಿರುವ ಪೂಜಾ ಪ್ರಕಾಶ್ ಚಿತ್ರಕಲೆ ಮತ್ತು ಗ್ರಾಫಿಕ್ಸ್ ಡಿಸೈನ್ನಲ್ಲಿ ತೊಡಗಿಸಿಕೊಂಡಿದ್ದಾರೆ. ಫೆಬ್ರವರಿ 2ರಂದು ಮೈಸೂರಿನಲ್ಲಿ ಅದ್ಧೂರಿ ಆರತಕ್ಷತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
5/8
Share
ಬೆಳಗಾವಿಯ ರೆಜೆಂಟಾ ರೆಸಾರ್ಟ್ನಲ್ಲಿ ಈ ಮದುವೆ ಕಾರ್ಯಕ್ರಮ ನಡೆಯಿತು. ಚಿತ್ರರಂಗನದ ಅನೇಕ ಕಲಾವಿದರು, ತಂತ್ರಜ್ಞರು, ನಾಗಭೂಷಣ್, ಪೂಜಾ ಪ್ರಕಾಶ್ ಕುಟುಂಬಸ್ಥರು ಮತ್ತು ಸ್ನೇಹಿತರು ಮದುವೆಯಲ್ಲಿ ಪಾಲ್ಗೊಂಡಿದ್ದರು.
6/8
Share
ನಟಿ ಅಮೃತಾ ಅಯ್ಯರ್, ನವೀನ್ ಶಂಕರ್, ಸತೀಶ್ ನಿನಾಸಂ ಸೇರಿದಂತೆ ಹಲವು ನಟ ನಟಿಯರು ಮದುವೆಯಲ್ಲಿ ಭಾಗವಹಿಸಿ ಹೊಸ ಜೋಡಿಗೆ ಶುಭಾಶಯ ಕೋರಿದರು.
7/8
Share
ನಾಗಭೂಷಣ್, ಪೂಜಾ ಪ್ರಕಾಶ್ ಮದುವೆ ಕಾರ್ಯಕ್ರಮದಲ್ಲಿ ಡಾಲಿ ಧನಂಜಯ್, ಸಂಗೀತ ನಿರ್ದೇಶಕ ವಾಸುಕೀ ವೈಭವ್, ಪೂರ್ಣಚಂದ್ರ ತೇಜಸ್ವಿ ಸೇರಿದಂತೆ ಹಲವು ಕಲಾವಿದರು ಮತ್ತು ತಂತ್ರಜ್ಞರು ಭಾಗವಹಿಸಿದ್ದರು.
8/8
Share
ಕೌಸಲ್ಯಾ ಸುಪ್ರಜಾ ರಾಮ, ಟಗರು ಪಲ್ಯ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ನಟ ನಾಗಭೂಷಣ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಬಹುಕಾಲದ ಗೆಳತಿ, ಕಲಾವಿದೆ ಪೂಜಾ ಪ್ರಕಾಶ್ ಸಪ್ತಪದಿ ತುಳಿದಿದ್ದಾರೆ.


Click it and Unblock the Notifications