ಏ.22, 23ರಂದು ಯಶವಂತಪುರ-ಬೀದರ್ ನಡುವೆ ವಿಶೇಷ ರೈಲು

ಬೀದರ್, ಏಪ್ರಿಲ್ 19 : ಭಾರತೀಯ ರೈಲ್ವೆ ಪ್ರಯಾಣಿಕರ ದಟ್ಟಣೆ ತಪ್ಪಿಸಲು ಬೇಸಿಗೆ ವಿಶೇಷ ರೈಲನ್ನು ಪ್ರಕಟಿಸಿದೆ. ಯಶವಂತಪುರ-ಬೀದರ್ ನಡುವೆ ಈ ರೈಲು ಸಂಚಾರ ನಡೆಸಲಿದೆ.

ಏಪ್ರಿಲ್ 22 ಹಾಗೂ 23ರಂದು ಯಶವಂತಪುರ-ಬೀದರ್ ನಡುವೆ ವಿಶೇಷ ರೈಲು ಸಂಚಾರ ನಡೆಸಲಿದೆ. ಏಪ್ರಿಲ್ 23ರಂದು ಬೀದರ್ ಲೋಕಸಭಾ ಕ್ಷೇತ್ರದ ಚುನಾವಣೆಯೂ ನಡೆಯಲಿದ್ದು, ಜನರಿಗೆ ಅನುಕೂಲವಾಗಲಿದೆ.

ರೈಲು ಸಂಖ್ಯೆ 06507 ಯಶವಂತಪುರ-ಬೀದರ್ ತತ್ಕಾಲ್ ಎಕ್ಸ್‌ಪ್ರೆಸ್ ಬೇಸಿಗೆ ವಿಶೇಷ ರೈಲು ಏ.22ರಂದು ಸಂಜೆ 6.10ಕ್ಕೆ ಯಶವಂತಪುರದಿಂದ ಹೊರಡಲಿದೆ. ಏ.23ರಂದು ಬೆಳಗ್ಗೆ 6.30ಕ್ಕೆ ಬೀದರ್ ತಲುಪಲಿದೆ.

ಬೀದರ್ ಕ್ಷೇತ್ರದ ಚುನಾವಣಾ ಪುಟ

Railway announced Bidar Yeshwanthpur special summer train

ರೈಲು ಸಂಖ್ಯೆ 06508 ಬೀದರ್-ಯಶವಂತಪುರ ತತ್ಕಾಲ್ ಎಕ್ಸ್‌ಪ್ರೆಸ್ ಬೇಸಿಗೆ ರೈಲು ಏ.23ರಂದು ಸಂಜೆ 7ಕ್ಕೆ ಬೀದರ್‌ ನಗರದಿಂದ ಹೊರಡಲಿದೆ. ಏ.24ರಂದು ಬೆಳಗ್ಗೆ 8.15ಕ್ಕೆ ಯಶವಂತಪುರಕ್ಕೆ ತಲುಪಲಿದೆ.

ನಿಲ್ದಾಣಗಳು : ಈ ವಿಶೇಷ ರೈಲು ಯಲಹಂಕ, ಹಿಂದೂಪುರ, ಧರ್ಮಾವರಂ, ಅನಂತಪುರ, ಗುಂತಕಲ್, ಮಂತ್ರಾಲಯಂ, ರಾಯಚೂರು, ಸೈದಾಪುರ, ಯಾದಗಿರಿ, ವಾಡಿ ಹಾಗೂ ಕಲಬುರಗಿಯಲ್ಲಿ ನಿಲುಗಡೆಗೊಳ್ಳಲಿದೆ.

ಈ ವಿಶೇಷ ರೈಲು 4 ಎಸಿ 2ಟೈರ್, 12 ಸ್ಲಿಪರ್ ಕ್ಲಾಸ್ ಕೋಚ್, ಎರಡು ಲಗೇಜ್ ಕಂ ಬ್ರೇಕ್ ವ್ಯಾನ್ ಕೋಚ್ ಹೊಂದಿದೆ.

ಏಪ್ರಿಲ್ 23ರಂದು ಬೀದರ್ ಲೋಕಸಭಾ ಕ್ಷೇತ್ರದ ಚುನಾವಣೆ ನಡೆಯಲಿದ್ದು, ಬಿಜೆಪಿಯಿಂದ ಭಗವಂತ ಖೂಬಾ, ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಯಾಗಿ ಈಶ್ವರ ಖಂಡ್ರೆ ಅವರು ಕಣದಲ್ಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+