ನೀರು ಹಾಗೂ ವಿದ್ಯುಚ್ಛಕ್ತಿ ಉಳಿತಾಯಕ್ಕೆ ರೈನ್ಬೋ ಆಸ್ಪತ್ರೆಗೆ ಜಾಗತಿಕ ಪುರಸ್ಕಾರ
ಬೆಂಗಳೂರು, ಏಪ್ರಿಲ್ 26: ಅತಿ ಕಡಿಮೆ ನೀರು ಕಡಿಮೆ ಬಳಸಿದ್ದಲ್ಲೆ, ವಿದ್ಯುತ್ ಶಕ್ತಿಯನ್ನು ಹೆಚ್ಚು ಉಳಿಸಿರುವ ರೇನ್ಬೋ ಮಕ್ಕಳ ಆಸ್ಪತ್ರೆ ಎಕ್ಸೆಲೆನ್ಸ್ ಇನ್ ಡಿಸೈನ್ ಫಾರ್ ಗ್ರೇಟರ್ ಎಫಿಷಿಯೆನ್ಸೀಸ್(ಎಡ್ಜ್) ಮಾನ್ಯತೆಯನ್ನು ಪಡೆದುಕೊಂಡಿದೆ.
ಇಂದು (ಏಪ್ರಿಲ್ 26) ಮಾರುತ್‌ಹಳ್ಳಿಯಲ್ಲಿ ಅಮೆರಿಕಾದ ಗ್ರೀನ್ ಬ್ಯುಸಿನೆಸ್ ಸರ್ಟಿಫಿಕೇಷನ್ ಇಂಕ್ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರೇನ್ಬೋ ಚಿಲ್ಡ್ರನ್ ಆಸ್ಪತ್ರೆಗೆ ಗೌರವ ಪ್ರಧಾನ ಮಾಡಲಾಯಿತು.

ರೈನ್ಬೋ ಚಿಲ್ಡ್ರನ್ ಆಸ್ಪತ್ರೆಯು ಸಾಮಾನ್ಯಕ್ಕಿಂತಲೂ ಶೇ.32ರಷ್ಟು ನೀರು ಉಳಿತಾಯ ಮಾಡಿದ್ದು, ಶೇ.27 ವಿದ್ಯುಚ್ಛಕ್ತಿ ಉಳಿತಾಯ ಮಾಡಿ ಈ ಗೌರವಕ್ಕೆ ಭಾಜನವಾಗಿದೆ.
ಪುರಸ್ಕಾರ ಸ್ವೀಕರಿಸಿ ಮಾತನಾಡಿದ ರೈನ್ಬೋ ಚಿಲ್ಡ್ರನ್ಸ್ ಹಾಸ್ಪಿಟಲ್‌ನ ಕ್ಲಸ್ಟರ್ ಹೆಡ್ ಮತ್ತು ಉಪಾಧ್ಯಕ್ಷ ನೀರಜ್ ಲಾಲ್, ಕನಿಷ್ಠ ವಿದ್ಯುಚ್ಛಕ್ತಿ ಬಳಕೆ ಮತ್ತು ನೀರು ಬಳಕೆಯ ಮೂಕ ಅತ್ಯಾಧುನಿಕ ಚಿಕಿತ್ಸೆ ನೀಡಲು ವಿನ್ಯಾಸದ ಹಂತದಲ್ಲೇ ಸರಿಯಾದ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದರು.
ಸಂಪನ್ಮೂಲಗಳನ್ನು ವ್ಯರ್ಥಗೊಳಿಸದೆ ಅದರ ಸದುಪಯೋಗ ಪಡಿಸಿಕೊಂಡು ವ್ಯರ್ಥ ಖರ್ಚುಗಳನ್ನು ಕಡಿಮೆ ಮಾಡಿ ಅದನ್ನು ಸೇವೆಯ ಗುಣಮಟ್ಟ ಹೆಚ್ಚಿಸುವಲ್ಲಿ ಬಳಸಿಕೊಳ್ಳುವಂತಾಗಬೇಕು ಎಂದು ಅವರು ಸಲಹೆ ನೀಡಿದರು.












Click it and Unblock the Notifications