ಜುಲೈ 2ಕ್ಕೆ ಸಂಪೂರ್ಣ ಸೂರ್ಯ ಗ್ರಹಣ; 4 ನಿಮಿಷ 33 ಸೆಕೆಂಡ್ ಗಳ ಗ್ರಹಣ ಇದು
ಜುಲೈ 2, 2019ಕ್ಕೆ ಪೂರ್ಣ ಸೂರ್ಯ ಗ್ರಹಣ ಸಂಭವಿಸಲಿದೆ. ಈ ಗ್ರಹಣವು ಒಟ್ಟು 4 ನಿಮಿಷ 33 ಸೆಕೆಂಡ್ ಗಳ ಕಾಲ ಸಂಭವಿಸಲಿದೆ. ಕೊನೆಯದಾಗಿ 2017ರ ಆಗಸ್ಟ್ ನಲ್ಲಿ 2 ನಿಮಿಷ 40 ಸೆಕೆಂಡ್ ಗಳ ಕಾಲ ಖಗ್ರಾಸ ಸೂರ್ಯ ಗ್ರಹಣ ಆಗಿತ್ತು. ಈ ವರ್ಷದ ಏಕೈಕ ಪೂರ್ಣ ಸೂರ್ಯ ಗ್ರಹಣ ಇದು. ನ್ಯೂಜಿಲೆಂಡ್ ನ ಕಡಲ ತೀರದಲ್ಲಿ ಆರಂಭವಾಗುವ ಗ್ರಹಣ ಚಿಲಿ ಮತ್ತು ಅರ್ಜೆಂಟೀನಾದಲ್ಲಿ ಸಂಪೂರ್ಣ ಆಗಲಿದೆ.
ನೀವು ಯಾವ ಭಾಗದಲ್ಲಿ ವಾಸವಿದ್ದೀರಿ ಎಂಬುದರ ಆಧಾರದಲ್ಲಿ ಗ್ರಹಣ ಕಾಣುತ್ತದೋ ಇಲ್ಲವೋ ಎಂಬ ನಿರ್ಧಾರ ಮಾಡಬಹುದು. ಪೆಸಿಫಿಕ್ ಭಾಗದಲ್ಲೇ ಗ್ರಹಣದ ಬಹು ಭಾಗ ಸಂಭವಿಸಲಿದೆ. ಭಾಗಶಃ ಸೂರ್ಯ ಗ್ರಹಣ ಭಾರತೀಯ ಕಾಲ ಮಾನ 10.25ಕ್ಕೆ ಭಾಗಶಃ ಸೂರ್ಯ ಗ್ರಹಣ ಆರಂಭ ಆಗುತ್ತದೆ.
ಪೂರ್ಣ ಸೂರ್ಯ ಗ್ರಹಣದ ಮೊದಲ ಆರಂಭ ಒಹಿನೋ ದ್ವೀಪದಲ್ಲಿ ಸ್ಥಳೀಯ ಕಾಲಮಾನ 10.24ಕ್ಕೆ ಆಗುತ್ತದೆ. ಚಿಲಿಯ ಕಡಲ ತೀರವನ್ನು ಸ್ಥಳೀಯ ಕಾಲಮಾನ 4.39ಕ್ಕೆ ತಲುಪಿ, ಆ ನಂತರ ಆಗ್ನೇಯದ ಕಡೆಗೆ ಸಾಗುತ್ತದೆ. ಎರಡು ವರ್ಷದ ಹಿಂದೆ ಆಗಿದ್ದ ಅವಧಿಯ ಎರಡರಷ್ಟು ಪ್ರಮಾಣದಲ್ಲಿ ಈ ಬಾರಿಯ ಸೂರ್ಯಗ್ರಹಣ ಸಂಭವಿಸಲಿದೆ.

ಭಾರತದಲ್ಲಿ ಗ್ರಹಣ ಸಂಭವಿಸುವ ವೇಳೆ ರಾತ್ರಿ ಆಗಿರುವುದರಿಂದ ಇಲ್ಲಿ ಕಾಣಿಸುವುದಿಲ್ಲ. ಈ ಬಾರಿ ತಪ್ಪಿಸಿಕೊಂಡರೆ ಏನಂತೆ? 2020ರ ಡಿಸೆಂಬರ್ ನಲ್ಲಿ ಸಂಭವಿಸುವ ಸಾಧ್ಯತೆ ಇದೆ. ಆಗ ನೋಡಬಹುದು. ಪೂರ್ಣ ಸೂರ್ಯ ಗ್ರಹಣ ಅಂದರೆ, ಸೂರ್ಯ, ಚಂದ್ರ ಹಾಗೂ ಭೂಮಿ ಒಂದೇ ಸಮಾನಾಂತರ ರೇಖೆಗೆ ಬಂದು, ಸೂರ್ಯನ ಕಿರಣಗಳನ್ನು ಭೂಮಿಗೆ ತಲುಪದಂತೆ ಚಂದ್ರನು ತಡೆಯುವುದು.












Click it and Unblock the Notifications