‘ಸಲಾರ್’ ಸಿನಿಮಾದಲ್ಲಿ ಕನ್ನಡಿಗ ಯಶ್ ಪ್ರತ್ಯಕ್ಷ್ಯ? ಅಭಿಮಾನಿಗಳು ಏನ್ ಹೇಳಿದ್ರು?
ಪ್ರಭಾಸ್.. ಪ್ರಭಾಸ್.. ಪ್ರಭಾಸ್.. ಹೀಗೆ ಎಲ್ಲೆಲ್ಲೂ ಪ್ರಭಾಸ್ ಹೆಸರು ಪ್ರತಿಧ್ವನಿಸುತ್ತಾ ಇದ್ದು, ಅಭಿಮಾನಿಗಳು ಪ್ರಭಾಸ್ ಅಭಿನಯದ 'ಸಲಾರ್' ಸಿನಿಮಾ ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ಆದರೆ ಇದೇ ಸಮಯದಲ್ಲಿ ಕನ್ನಡಿಗ ಯಶ್ 'ಸಲಾರ್' ಟ್ರೇಲರ್‌ನಲ್ಲಿ ಕಾಣಿಸಿದ್ದಾರೆ, ಹೀಗಾಗಿ ಯಶ್ ಕೂಡ ಸಲಾರ್ ಸಿನಿಮಾದಲ್ಲಿ ನಟಿಸಿದ್ದಾರೆ ಎಂಬ ಸುದ್ದಿ ಹಲ್‌ಚಲ್ ಎಬ್ಬಿಸಿದೆ. ಇದೀಗ ಯಶ್ & ಪ್ರಭಾಸ್ ಅವರ ಬಗ್ಗೆ ಅಭಿಮಾನಿಗಳಿಗೆ ಬ್ರೇಕಿಂಗ್ ನ್ಯೂಸ್ ಸಿಕ್ಕಿದೆಯಂತೆ!
ಹೌದು, ಸಲಾರ್ ಟ್ರೇಲರ್ 1 ರೀತಿ ಈಗ ಸಲಾರ್ ಟ್ರೇಲರ್ 2 ಕೂಡ ಅಬ್ಬರಿಸುತ್ತಿದೆ. 2 ನಿಮಿಷ 54 ಸೆಕೆಂಡ್ ಇರುವ ಸಲಾರ್ 2ನೇ ಟ್ರೇಲರ್, ರಿಲೀಸ್ ಆದ 24 ಗಂಟೆಯಲ್ಲಿ ಸಾಕಷ್ಟು ದಾಖಲೆಗಳನ್ನ ಪುಡಿ ಪುಡಿ ಮಾಡಿದೆ. ಸಲಾರ್ ಟ್ರೇಲರ್ 2 ರಿಲೀಸ್ ಆಗಿ ಸುಮಾರು 24 ಗಂಟೆ ಕಳೆದಿದೆ. ಕೇವಲ 1 ದಿನ ಕಳೆಯುವ ಒಳಗಾಗಿ ಒಟ್ಟಾರೆ 5 ಭಾಷೆ ಸೇರಿ ಹತ್ತಿರ ಹತ್ತಿರ 80 ಮಿಲಿಯನ್ ವೀವ್ಸ್ ಪಡೆದಿದೆ ಪ್ರಭಾಸ್ ಸಿನಿಮಾ ಟ್ರೇಲರ್. ಈ ಮೂಲಕ ಎಲ್ಲ ದಾಖಲೆ ಧೂಳ್ ಮಾಡುವ ಹಿಂಟ್ ಕೊಟ್ಟಿದ್ದು ಕನ್ನಡಿಗರಿಗೆ ಫೇವರಿಟ್ ಆಗಿರುವ ಪ್ರಶಾಂತ್ ನೀಲ್ & ಪ್ರಭಾಸ್ ಕಾಂಬಿನೇಷನ್ ಸಕ್ಸಸ್ ಕಾಣುವುದೂ ಗ್ಯಾರಂಟಿ ಅಂತಿದ್ದಾರೆ ಫ್ಯಾನ್ಸ್. ಆದ್ರೆ ಇದೇ ವೇಳೆ ಪ್ರಭಾಸ್ ಸಿನಿಮಾದಲ್ಲಿ ಯಶ್ ಇರುವ ಸುದ್ದಿ ಹರಿದಾಡ್ತಿದೆ.

ಪ್ರಭಾಸ್ ಜೊತೆಗೆ ಯಶ್ ನಟನೆ?
'ಸಲಾರ್' ಸಿನಿಮಾಗೆ ಒಂದು ಅಂದಾಜಿನ ಪ್ರಕಾರ, ಸುಮಾರು 400 ಕೋಟಿ ರೂಪಾಯಿಗೂ ಹೆಚ್ಚು ಹಣ ಬಂಡವಾಳವಾಗಿ ಹಾಕಲಾಗಿದೆ. ಅಲ್ಲದೆ ಈಗಾಗಲೇ ಸಲಾರ್ ಸಾಕಷ್ಟು ದೊಡ್ಡ ಮೊತ್ತದ ಹಣ ಬಾಚಿದ್ದು, ಬಿಡುಗಡೆ ಆಗುವುದಕ್ಕೆ ಮೊದಲೇ ಸೇಫ್ ಝೋನ್‌ನ ತಲುಪಿದೆ. ಹೀಗಿದ್ದಾಗಲೇ ಬಾಕ್ಸ್ ಆಫಿಸ್ ಧೂಳ್ ಮಾಡುವ ಸುದ್ದಿಯೊಂದು ಹರಿದಾಡುತ್ತಿದೆ. ಅದೂ ಯಶ್ & ಪ್ರಭಾಸ್ ಅವರು ಒಟ್ಟಿಗೆ ಅಭಿನಯ ಮಾಡುತ್ತಿದ್ದಾರೆ ಎನ್ನುವ ಸುದ್ದಿ. ಈ ಸುದ್ದಿ ಈಗ ಭಾರಿ ಸಂಚಲನ ಸೃಷ್ಟಿ ಮಾಡಿದೆ.
Is That #Yash ????
— Adheera (@adheeraeditz) December 18, 2023
Rocky Bhai ??#SalaarReleaseTrailer #YashBOSS𓃵 #Salaar #Prabhas𓃵 #PrashantNeel pic.twitter.com/QzeBQzNcka
ರಾಕಿಭಾಯ್ ಯಶ್ ಇರುವುದು ನಿಜಾನಾ?
ಸಲಾರ್ ಟ್ರೇಲರ್ 2ನ, 23ನೇ ಸೆಕೆಂಡ್‌ಗೆ ಸುಲ್ತಾನ್ ಎಂಬ ವಾಯ್ಸ್ ವೇಳೆ ವ್ಯಕ್ತಿಯೊಬ್ಬರು ಅಲ್ಲಿ ನಡೆದು ಹೋಗುತ್ತಿರುವುದು ಗಮನಕ್ಕೆ ಬರುತ್ತದೆ. ಇದೇ ದೃಶ್ಯವನ್ನ ಕೆಜಿಎಫ್-2 ಜೊತೆಯಲ್ಲೂ ಹೋಲಿಕೆ ಮಾಡಿ ನೋಡಲಾಗುತ್ತಿದೆ. ನಟ ಯಶ್ ಅವರು ಕೆಜಿಎಫ್-2 ಸಿನಿಮಾದಲ್ಲಿ ಎಂಟ್ರಿ ಕೊಡುವ ದೃಶ್ಯದಲ್ಲಿ ಅವರನ್ನ ಹಿಂಬದಿಯಿಂದ ತೋರಿಸುವಾಗ ಸೇಮ್ ಇದೇ ರೀತಿ ಕಾಣ್ತಾರೆ. ಹಾಗೇ ಸಲಾರ್ ಸಿನಿಮಾದ ಟ್ರೇಲರ್ 2ನ 23ನೇ ಸೆಕೆಂಡ್ ಸೀನ್ ಕೂಡ ಇದಕ್ಕೆ ಮ್ಯಾಚ್ ಆಗಿದೆ. ಹೀಗಾಗಿ ಯಶ್ ಅವರ ಅಭಿಮಾನಿಗಳು ಹಾಗೂ ಪ್ರಭಾಸ್ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.
Yash ungalum? 🧐
— JimmyCarter (@ImJimmyCarter) December 18, 2023
. #Salaar #SalaarReleaseTrailer #YashBOSS𓃵 pic.twitter.com/fzOWwub2Fd
ಅಭಿಮಾನಿಗಳ ಎದೆಯಲ್ಲಿ ಪ್ರಶ್ನೆಗಳು!
ಒಟ್ನಲ್ಲಿ ಸಲಾರ್ ಸಿನಿಮಾದಲ್ಲಿ ಯಶ್ ಅವರು ಇರುವ ಬಗ್ಗೆ ಹೊಂಬಾಳೆ ಸಂಸ್ಥೆಯಾಗಲಿ ಇಲ್ಲ ನಿರ್ದೇಶಕರೇ ಆಗಲಿ ಒಪ್ಪಿಕೊಂಡಿಲ್ಲ. ಆದರೆ ಅಭಿಮಾನಿಗಳ ಕ್ರೇಜ್ ಮಾತ್ರ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಲಾರ್ ಸಿನಿಮಾದ 2ನೇ ಟ್ರೇಲರ್ ಹಲ್‌ಚಲ್ ಎಬ್ಬಿಸಿದೆ. ಜೊತೆಗೆ ಯಶ್ ಅವರು ಕೂಡ ಸಲಾರ್ ಸಿನಿಮಾದಲ್ಲಿ ಇದ್ದಾರೆ ಅನ್ನೋ ಮಾತು ಸಂಚಲನ ಸೃಷ್ಟಿಸಿದೆ. ಹೀಗಾಗಿ ಇಡೀ ಸೋಷಿಯಲ್ ಮೀಡಿಯಾದಲ್ಲಿ ಸಲಾರ್ ಸಿನಿಮಾ ಮತ್ತು ಯಶ್ ಅವರ ವಿಚಾರ ಟ್ರೆಂಡ್ ಆಗಿ, ಅಭಿಮಾನಿಗಳ ಎದೆಯಲ್ಲಿ ಪ್ರಶ್ನೆಗಳು ಹುಟ್ಟಿಕೊಂಡಿವೆ. ಆದರೆ ಇದ್ಯಾವುದಕ್ಕೂ ಉತ್ತರ ಸಿಕ್ಕಿಲ್ಲ ಹಾಗೂ ಸಾಕ್ಷ್ಯಗಳೂ ಲಭ್ಯವಿಲ್ಲ!
ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು ಸೇರಿ ಶ್ರುತಿ ಹಾಸನ್, ಪ್ರಮೋದ್ & ಮಧು ಗುರುಸ್ವಾಮಿ ನಟಿಸಿದ್ದು. ದೊಡ್ಡ ಸ್ಟಾರ್ ಕಾಸ್ಟ್ ಈ ಸಿನಿಮಾದಲ್ಲಿ ಮಿಂಚಿದೆ. ಇದೇ ಕಾರಣಗಳಿಂದ ಇಡೀ ಜಗತ್ತಿನಾದ್ಯಂತ ಸಲಾರ್ ನೋಡೋಕೆ ಫ್ಯಾನ್ಸ್ ಕಾಯುತ್ತಿದ್ದಾರೆ. ಹೀಗಿದ್ದಾಗಲೇ ನಿನ್ನೆಯಷ್ಟೇ ರಿಲೀಸ್ ಆಗಿರುವ ಸಲಾರ್ ಟ್ರೇಲರ್ ಅಬ್ಬರಿಸಿ ಹೊಸ ದಾಖಲೆ ಸೃಷ್ಟಿ ಮಾಡುತ್ತಿದೆ.












Click it and Unblock the Notifications