Yash New Look: 'ಟಾಕ್ಸಿಕ್'ಗಾಗಿ ಹೊಸ ಅವತಾರ ತಾಳಿದ ಯಶ್!
ಕೆಜಿಎಫ್ ಭರ್ಜರಿ ಯಶಸ್ಸಿನ ಬಳಿಕ ಸುದೀರ್ಘ ಬ್ರೇಕ್ ತೆಗೆದುಕೊಂಡಿದ್ದ ಯಶ್, ತಮ್ಮ ಮುಂದಿನ ಸಿನಿಮಾ ಹೆಸರು ಟಾಕ್ಸಿಕ್ ಎಂದು ಘೋಷಣೆ ಮಾಡಿದ್ದರು. ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ನಿರ್ದೇಶನಕ್ಕೆ ಆಯ್ಕೆ ಮಾಡಿದ್ದು ಅಚ್ಚರಿ ಮೂಡಿಸಿತ್ತು.
ಟೈಟಲ್ ಘೋಷಣೆ ಮಾಡಿದ್ದು ಬಿಟ್ಟರೆ ಅದಾದ ಬಳಿಕ ಯಶ್ ಏನು ಮಾಡುತ್ತಿದ್ದಾರೆ, ಸಿನಿಮಾ ಯಾವ ಹಂತದಲ್ಲಿದೆ ಎನ್ನುವ ಬಗ್ಗೆ ಯಾವ ಅಪ್‌ಡೇಟ್ ಕೂಡ ಸಿಕ್ಕಿಲ್ಲ. ಆದರೆ ಇಂದು ಅವರು ಹೊಸ ಅವತಾರದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

ಕೆಜಿಎಫ್‌ನಲ್ಲಿ ಉದ್ದ ಗಡ್ಡ, ಕೂದಲು ಬಿಟ್ಟಿದ್ದ ಯಶ್ ಸಿನಿಮಾ ಬಿಡುಗಡೆಯಾದ ಬಳಿಕವೂ ಅದೇ ಅವತಾರವನ್ನು ಮುಂದುವರೆಸಿದ್ದರು. ಟಾಕ್ಸಿಕ್‌ನಲ್ಲಿ ಕೂಡ ಅದೇ ಲುಕ್‌ನಲ್ಲಿ ಕಾಣಿಸಿಕೊಳ್ಳಬಹುದು ಎಂದು ನಿರೀಕ್ಷೆ ಇತ್ತು, ಆದರೆ ಇಂದು ಅವರು ಹೊಸ ಹೊಸ ಕೇಶ ವಿನ್ಯಾಸದಲ್ಲಿ ಕಾಣಿಸಿಕೊಂಡಿದ್ದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.
Yash Sir New Look😎💥
— ರಾಜರತ್ನ ಅಪ್ಪು ಅಭಿಮಾನಿ (@ParthaPower) July 12, 2024
What A Look🔥#Yash #ToxicTheMovie #DrPuneethRajkumar
pic.twitter.com/S90U1Soly2
ಹೇಗಿದೆ ಹೊಸ ಲುಕ್?
ಯಶ್ ಮತ್ತು ರಾಧಿಕಾ ಪಂಡಿತ್ ಮುಂಬೈಗೆ ತೆರಳಿದ್ದು, ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆಯಲ್ಲಿ ಪಾಲ್ಗೊಳ್ಳಲು ತೆರಳಿದ್ದಾರೆ. ವಿಮಾನ ನಿಲ್ದಾಣದಲ್ಲಿ ಯಶ್ ಅವರು ಕಾರು ಹತ್ತುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ಯಶ್ ಕೂದಲಿಗೆ ಕತ್ತರಿ ಹಾಕಿದ್ದು, ಗಡ್ಡವನ್ನು ಹಾಗೆ ಉಳಿಸಿಕೊಂಡಿದ್ದಾರೆ. ಟಾಕ್ಸಿಕ್‌ನಲ್ಲಿ ಅವರು ಇದೇ ಅವತಾರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.












Click it and Unblock the Notifications