Karnataka Reservoirs Water Level: ರಾಜ್ಯದಲ್ಲಿ ಸದ್ಯ ಮುಂಗಾರು ಕೈಕೊಟ್ಟಿದ್ದು, ಕೆಲವೆಡೆ ಮಾತ್ರ ತುಂತುರು ಮಳೆಯಾಗುತ್ತಿದೆ. ಇದನ್ನು ಹೊರತುಪಡಸಿದರೆ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲಿನ ವಾತಾವರಣವೇ ಮುಂದುವರೆದಿದೆ. ಪರಿಣಾಮ ಜಲಮೂಲಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಹಾಗಾದ್ರೆ ಇಂದು (ಜುಲೈ 14) ಬೆಂಗಳೂರು, ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳ ಜೀವನಾಡಿ ಕೆಆರ್‌ಎಸ್ ಸೇರಿದಂತೆ ಪ್ರಮುಖ ಡ್ಯಾಂಗಳ ನೀರಿನ ಮಟ್ಟ ಎಷ್ಟಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವರುಣನ ಆರ್ಭಟ ಇಲ್ಲದಂತಾಗಿದ್ದು, ಬಿಸಿಲಿನ ವಾತಾವರಣ ಮುಂದುವರೆದಿದೆ. ಕೆಲವು ದಿನಗಳ ಹಿಂದೆ ಕೆಲವೆಡೆ ಉತ್ತಮ ಮಳೆಯಿಂದಾಗಿ ಜಲಾಶಯಗಳಿಗೆ ಒಳಹರಿವು ಇತ್ತು. ಆದರೆ ಈಗ ಮತ್ತೆ ಮಳೆ ಕಣ್ಣಾಮುಚ್ಚಾಲೆ ಆಟ ಆಡುತ್ತಿದ್ದು, ಡ್ಯಾಂಗಳಲ್ಲಿ ಇದ್ದ ನೀರು ಕೂಡ ಕಡಿಮೆಯಾಗುತ್ತಿದೆ. ಇದರಿಂದ ಅನ್ನದಾತರಲ್ಲಿ ಆತಂಕ ಶುರುವಾಗಿದೆ.
* ಗರಿಷ್ಠ ನೀರಿನ ಮಟ್ಟ - 124.80 ಅಡಿ * ಗರಿಷ್ಠ ನೀರಿನ ಮಟ್ಟ - 2,284 ಅಡಿ * ಗರಿಷ್ಠ ನೀರಿನ ಮಟ್ಟ - 1,633 ಅಡಿ * ಗರಿಷ್ಠ ನೀರಿನ ಮಟ್ಟ - 1,819 ಅಡಿ * ಗರಿಷ್ಠ ನೀರಿನ ಮಟ್ಟ - 186 ಅಡಿ * ಗರಿಷ್ಠ ನೀರಿನ ಮಟ್ಟ - 2,859 ಅಡಿ * ಗರಿಷ್ಠ ನೀರಿನ ಮಟ್ಟ - 2,922 ಅಡಿ * ಗರಿಷ್ಠ ನೀರಿನ ಮಟ್ಟ - 519.06 ಮೀಟರ್ * ಗರಿಷ್ಠ ನೀರಿನ ಮಟ್ಟ - 2,175 ಅಡಿ * ಗರಿಷ್ಠ ನೀರಿನ ಮಟ್ಟ - 2,079.5 ಅಡಿ ಮುಂಗಾರು ಅವಧಿಯಲ್ಲೇ ಮತ್ತೆ ಮಳೆ ಕೈಕೊಟ್ಟಿದ್ದು, ಬಿಸಿಲಿನ ವಾತಾವರಣ ಮುಂದುವರೆದಿದೆ. ಇದೇ ಈ ರೀತಿ ಆದ್ರೆ ಮುಂದಿನ ದಿನಗಳಲ್ಲಿ ಇನ್ನೇನು ಕಾದಿದೆಯೋ ಎನ್ನುವ ಆತಂಕ ಕೃಷಿಕರು, ಜನರಲ್ಲಿ ಮನೆ ಮಾಡಿದೆ. ಒಟ್ಟಿನಲ್ಲಿ ಇದೀಗ ರಾಜ್ಯದ ಜನ ಮಳೆಗಾಗಿ ಮೋಡದ ಕಡೆ ಮುಖ ಮಾಡಿ ಕುಳಿತಿದ್ದಾರೆ.1. ಕೆಆರ್‌ಎಸ್ ಜಲಾಶಯ
* ಇಂದಿನ ನೀರಿನ ಮಟ್ಟ- 92.14 ಅಡಿ
* ಒಳಹರಿವು - 7,515 ಕ್ಯೂಸೆಕ್
* ಹೊರಹರಿವು - 619 ಕ್ಯೂಸೆಕ್2. ಕಬಿನಿ ಜಲಾಶಯ
* ಇಂದಿನ ನೀರಿನ ಮಟ್ಟ - 2,270.06 ಅಡಿ
* ಒಳಹರಿವು - 3,166 ಕ್ಯೂಸೆಕ್
* ಹೊರಹರಿವು - 500 ಕ್ಯೂಸೆಕ್3. ತುಂಗಭದ್ರಾ ಜಲಾಶಯ
* ಇಂದಿನ ನೀರಿನ ಮಟ್ಟ - 1,602.10 ಅಡಿ
* ಒಳಹರಿವು - 17,152 ಕ್ಯೂಸೆಕ್
* ಹೊರಹರಿವು - 652 ಕ್ಯೂಸೆಕ್4. ಲಿಂಗನಮಕ್ಕಿ ಜಲಾಶಯ
* ಇಂದಿನ ನೀರಿನ ಮಟ್ಟ - 1762.90 ಅಡಿ
* ಒಳಹರಿವು - 4,999 ಕ್ಯೂಸೆಕ್
* ಹೊರಹರಿವು - 4,473 ಕ್ಯೂಸೆಕ್5. ಭದ್ರಾ ಜಲಾಶಯ
* ಇಂದಿನ ನೀರಿನ ಮಟ್ಟ - 147.4 ಅಡಿ
* ಒಳಹರಿವು - 1,713 ಕ್ಯೂಸೆಕ್
* ಹೊರಹರಿವು - 220 ಕ್ಯೂಸೆಕ್6. ಹಾರಂಗಿ ಜಲಾಶಯ
* ಇಂದಿನ ನೀರಿನ ಮಟ್ಟ - 2,846.67 ಅಡಿ
* ಒಳಹರಿವು - 2,036 ಕ್ಯೂಸೆಕ್
* ಹೊರಹರಿವು - 180 ಕ್ಯೂಸೆಕ್7. ಹೇಮಾವತಿ ಜಲಾಶಯ
* ಇಂದಿನ ನೀರಿನ ಮಟ್ಟ - 2,903.52 ಅಡಿ
* ಒಳಹರಿವು - 2,960 ಕ್ಯೂಸೆಕ್
* ಹೊರಹರಿವು - 300 ಕ್ಯೂಸೆಕ್8. ಆಲಮಟ್ಟಿ ಜಲಾಶಯ
* ಇಂದಿನ ನೀರಿನ ಮಟ್ಟ - 517.27 ಮೀಟರ್
* ಒಳಹರಿವು - 56,765 ಕ್ಯೂಸೆಕ್
* ಹೊರಹರಿವು - 423 ಕ್ಯೂಸೆಕ್9. ಘಟಪ್ರಭಾ ಜಲಾಶಯ
* ಇಂದಿನ ನೀರಿನ ಮಟ್ಟ - 2,125.21 ಅಡಿ
* ಒಳಹರಿವು - 5,562 ಕ್ಯೂಸೆಕ್
* ಹೊರಹರಿವು - 130 ಕ್ಯೂಸೆಕ್10. ಮಲಪ್ರಭಾ ಜಲಾಶಯ
* ಇಂದಿನ ನೀರಿನ ಮಟ್ಟ - 2,054.10 ಅಡಿ
* ಒಳಹರಿವು - 1,698 ಕ್ಯೂಸೆಕ್
* ಹೊರಹರಿವು - 194 ಕ್ಯೂಸೆಕ್