ಹೊರರಾಜ್ಯದವರಿಗೆ ಇಲ್ಲಿ ಜಾಗವಿಲ್ಲ, ಕನ್ನಡಿಗರಿಗಷ್ಟೇ ಮೊದಲ ಆದ್ಯತೆ: ವಲಸಿಗರಿಗೆ ಶಾಕ್‌ ಕೊಟ್ಟ ಸಿಎಂ ಡಿ.ಕೆ.ಶಿವಕುಮಾರ್‌


ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಹೊರರಾಜ್ಯದ ವಲಸಿಗರ ಹಾವಳಿಗೆ ಹಾಗೂ ಫುಟ್‌ಪಾತ್ ಒತ್ತುವರಿಗೆ ಬ್ರೇಕ್ ಹಾಕಲು ರಾಜ್ಯ ಸರ್ಕಾರವು ಭರ್ಜರಿ ಆಪರೇಷನ್ ಆರಂಭಿಸಿದೆ. ಈ ಕುರಿತು ಖುದ್ದಾಗಿ ಕಣಕ್ಕಿಳಿದಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಹೊರರಾಜ್ಯಗಳಿಂದ ಬಂದು ಇಲ್ಲಿನ ಸಾರ್ವಜನಿಕ ಸ್ಥಳಗಳನ್ನು ಆಕ್ರಮಿಸಿಕೊಳ್ಳುತ್ತಿರುವ ವಲಸಿಗರಿಗೆ ಗಂಭೀರ ಎಚ್ಚರಿಕೆ ನೀಡಿದ್ದಾರೆ. "ನಮ್ಮ ಮೊದಲ ಆದ್ಯತೆ ಕನ್ನಡಿಗರಿಗೆ ಮಾತ್ರ" ಎಂದು ಹೇಳುವ ಮೂಲಕ ವಲಸೆ ಬಂದು ವ್ಯಾಪಾರ ಕುದುರಿಸಿಕೊಂಡಿರುವ ದೊಡ್ಡ ವರ್ಗಕ್ಕೆ ಸಿಎಂ ಬಿಗ್ ಶಾಕ್ ನೀಡಿದ್ದಾರೆ.

Advertisement

ಶುಕ್ರವಾರ ಬೆಂಗಳೂರಿನಾದ್ಯಂತ 'ಸಿಟಿ ರೌಂಡ್ಸ್' ನಡೆಸಿದ ಸಿಎಂ, ನಗರದಲ್ಲಿ ನಡೆಯುತ್ತಿರುವ 'ಆಪರೇಷನ್ ಫುಟ್‌ಪಾತ್' ಪ್ರಗತಿಯನ್ನು ಖುದ್ದಾಗಿ ವೀಕ್ಷಿಸಿ, ಪರಿಶೀಲನೆ ನಡೆಸಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೀದಿಬದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆ ಹಾಗೂ ವಲಸಿಗರ ಕುರಿತು ತಮ್ಮ ಕಠಿಣ ನಿಲುವನ್ನು ಸ್ಪಷ್ಟಪಡಿಸಿದರು.

Advertisement

ಹೊರರಾಜ್ಯದವರಿಗೆ ಇಲ್ಲಿ ವೋಟ್ ಇಲ್ಲ

ನಗರದ ಫುಟ್‌ಪಾತ್‌ಗಳಲ್ಲಿ ವ್ಯಾಪಾರ ಮಾಡುತ್ತಿರುವವರಲ್ಲಿ ಸ್ಥಳೀಯರಿಗಿಂತ ಹೊರರಾಜ್ಯದವರೇ ಹೆಚ್ಚಾಗಿದ್ದಾರೆ. ಹೊರರಾಜ್ಯಗಳಿಂದ ಏಕಾಏಕಿ ಬೆಂಗಳೂರಿಗೆ ವಲಸೆ ಬಂದು, ಇಲ್ಲಿನ ಫುಟ್‌ಪಾತ್‌ಗಳ ಮೇಲೆ ಎಲ್ಲೆಂದರಲ್ಲಿ ಅಂಗಡಿಗಳನ್ನು ಇಟ್ಟುಕೊಂಡರೆ, ಅದನ್ನು ಯಾವುದೇ ಕಾರಣಕ್ಕೂ ನಾವು ಒಪ್ಪಲ್ಲ" ಎಂದು ಸಿಎಂ ಗುಡುಗಿದ್ದಾರೆ. ಇಲ್ಲಿಗೆ ಬಂದು ವ್ಯಾಪಾರ ಹೂಡಿರುವ ಹೊರರಾಜ್ಯದ ಜನರಿಗೆ ನಮ್ಮಲ್ಲಿ ವೋಟ್ ಕೂಡ ಇಲ್ಲ. ಹೀಗಿರುವಾಗ ನಮ್ಮ ನೆಲದ ಜನರನ್ನು ಬಿಟ್ಟು ಅವರಿಗೆ ಮಣೆ ಹಾಕಲು ಸಾಧ್ಯವಿಲ್ಲ. ನಮ್ಮ ರಾಜ್ಯದ ಜನರಿಗೆ, ಅಂದರೆ ಕನ್ನಡಿಗರಿಗೆ, ಬೆಂಗಳೂರಿನವರಿಗೆ ಮಾತ್ರ ನಮ್ಮ ಮೊದಲ ಆದ್ಯತೆ ಎಂದು ಕ್ಲಾರಿಟಿ ಕೊಟ್ಟರು.

Advertisement

ಡಿಕೆ ಶಿವಕುಮಾರ್ CM ಆದ್ಮೇಲೆ ಫುಟ್ ಪಾತ್ ವ್ಯಾಪಾರಿಗಳನ್ನ ಟಾರ್ಗೆಟ್ ಮಾಡಿದ್ರಾ?

ಕನ್ನಡಿಗ ವ್ಯಾಪಾರಿಗಳಿಗೆ ಬೇರೆ ವ್ಯವಸ್ಥೆ

ಬೀದಿಬದಿ ವ್ಯಾಪಾರವನ್ನೇ ನಂಬಿಕೊಂಡಿರುವ ನಮ್ಮ ರಾಜ್ಯದ ಮೂಲ ನಿವಾಸಿಗಳಿಗೆ ಸರ್ಕಾರ ಕೈಬಿಡುವುದಿಲ್ಲ ಎಂದು ಸಿಎಂ ಭರವಸೆ ನೀಡಿದ್ದಾರೆ. ಕರ್ನಾಟಕದ ಮೂಲದ ಬೀದಿಬದಿ ವ್ಯಾಪಾರಿಗಳನ್ನು ಫುಟ್‌ಪಾತ್‌ಗಳಿಂದ ತೆರವುಗೊಳಿಸಿದರೂ, ಅವರಿಗೆ ವ್ಯಾಪಾರ ಮಾಡಲು ಬೇರೆ ಕಡೆ ಸೂಕ್ತ ಜಾಗದ ವ್ಯವಸ್ಥೆ ಮಾಡಿಕೊಡಲಾಗುವುದು. ಅರ್ಹ ಸ್ಥಳೀಯ ವ್ಯಾಪಾರಿಗಳಿಗೆ ಸರ್ಕಾರದಿಂದಲೇ ತಳ್ಳುವ ಗಾಡಿಗಳ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗುವುದು ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ವಲಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಮಿತಿಮೀರುತ್ತಿದ್ದು, ಸ್ಥಳೀಯರ ಉದ್ಯೋಗ ಹಾಗೂ ಸಾರ್ವಜನಿಕ ಮುಕ್ತ ಸಂಚಾರಕ್ಕೆ ಧಕ್ಕೆ ತರುತ್ತಿದೆ ಎಂಬ ಕೂಗು ಮೊದಲಿನಿಂದಲೂ ಇತ್ತು. ಈಗ ಸಿಎಂ ಅವರ ಈ ಹೇಳಿಕೆ ವಲಸಿಗರಿಗೆ ನಡುಕ ಹುಟ್ಟಿಸಿದೆ. ಈ ಒತ್ತುವರಿ ತೆರವು ಕಾರ್ಯಾಚರಣೆ ಹೀಗೆಯೇ ಮುಂದುವರಿಯಲಿದೆ. ಇದರ ಹಿಂದೆ ಎಷ್ಟೇ ದೊಡ್ಡವರ ಪ್ರಭಾವ ಇರಲಿ, ನಾವು ಯಾವುದೇ ರೀತಿಯ ಒತ್ತಡಕ್ಕೂ ಮಣಿಯುವ ಪ್ರಶ್ನೆಯೇ ಇಲ್ಲ ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

Advertisement

ಬೆಂಗಳೂರು ಕನ್ನಡಿಗರ ಕೈ ತಪ್ಪುತ್ತಿದೆಯೇ ಎಂಬ ಆತಂಕದಲ್ಲಿದ್ದ ಜನತೆಗೆ ಸಿಎಂ ಅವರ ಈ ನಡೆ ನಿಜಕ್ಕೂ ನೆಮ್ಮದಿ ತಂದಿದೆ. ಇಲ್ಲಿನ ಸ್ಥಳೀಯ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಹೊರರಾಜ್ಯದ ವಲಸಿಗರಿಗೆ ಇದು ದೊಡ್ಡ ಆಘಾತವೇ ತಂದಿದೆ. ತವರು ನೆಲದ ಜನರಿಗೆ ಮಾತ್ರ ರಕ್ಷಣೆ ಎಂಬ ಸರ್ಕಾರದ ಈ ನಿಲುವು ಸದ್ಯ ಕನ್ನಡಿಗರ ಮನಗೆದ್ದಿದೆ.

English Summary

DK Shivakumar said Kannadigas will get first priority as the Karnataka government intensifies action against footpath encroachments and illegal occupation of public spaces in Bengaluru.